ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ
1 ಕೋಟಿಯ ಸೂರ್ಯವಂಶಿ 1 ರನ್
Team Udayavani, Nov 30, 2024, 9:20 PM IST
ದುಬೈ: ಇಲ್ಲಿ ಶನಿವಾರ ನಡೆದ ಅಂಡರ್ 19 ತಂಡಗಳ ಐಸಿಸಿ ಏಕದಿನ ಏಷ್ಯಾಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ 43 ರನ್‌ಗಳ ಜಯ ಗಳಿಸಿದೆ. ಈ ಮೂಲಕ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಸೋತಿದ್ದರೆ, ಪಾಕ್ ಶುಭಾರಂಭ ಮಾಡಿದೆ.
ಗ್ರೂಪ್ “ಎ’ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪಾಕಿಸ್ತಾನ, 50 ಓವರ್‌ಗಳಲ್ಲಿ 281 ರನ್ ಬಾರಿಸಿತು. ಇದಕ್ಕುತ್ತರವಾಗಿ ಭಾರತ 47.1 ಓವರ್‌ಗಳಲ್ಲಿ 238 ರನ್ ಬಾರಿಸಿ ಆಲೌಟ್ ಆಯಿತು. ಭಾರತವಿನ್ನು ಡಿ.2ರ ಸೋಮವಾರ ಜಪಾನ್ ವಿರುದ್ಧ ಕಣಕ್ಕಿಳಿಯಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಆರಂಭಿಕ ಬ್ಯಾಟರ್ ಶಹಝೈಬ್ ಖಾನ್ 147 ಎಸೆತಗಳಲ್ಲಿ 10 ಸಿಕ್ಸರ್ ಸಹಿತ 159 ರನ್ ಸಿಡಿಸಿದರು. ಮತ್ತೂಬ್ಬ ಓಪನರ್ ಉಸ್ಮಾನ್ ಖಾನ್ 60 ರನ್ ಸೇರ್ಪಡೆಯೊಂದಿಗೆ ಪಾಕ್ ಸವಾಲಿನ ಮೊತ್ತ ಕಲೆ ಹಾಕಿತ್ತು. ಆದರೆ ಭಾರತ ಪರ ಮಧ್ಯಮ ಕ್ರಮಾಂಕದ ನಿಖೀಲ್ ಕುಮಾರ್ 67 ರನ್ ಬಾರಿಸಿದ್ದು ಬಿಟ್ಟರೆ ಇನ್ಯಾರಿಂದಲೂ ಗಣನೀಯ ರನ್ ಬರಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಪಾಕಿಸ್ತಾನ 281/7 (ಉಸ್ಮಾನ್ 60, ಶಹಝೈಬ್ 159, ಸಮರ್ಥ್ 45ಕ್ಕೆ 3), ಭಾರತ 238/10 (ನಿಖೀಲ್ 67, ಇನಾನ್ 30, ಅಲಿ 36ಕ್ಕೆ 3).
1 ಕೋಟಿಯ ಸೂರ್ಯವಂಶಿ 1 ರನ್:
ಐಪಿಎಲ್ ಹರಾಜಿನ ವೇಳೆ 1.1 ಕೋಟಿ ರೂ.ಗೆ ರಾಜಸ್ಥಾನ್ ಪಾಲಾಗಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ಶಹಝೈಬ್ 159: ಗರಿಷ್ಠ ರನ್ ದಾಖಲೆ:
ಪಂದ್ಯದಲ್ಲಿ 159 ರನ್ ಸಿಡಿಸಿರುವ ಪಾಕ್‌ನ ಶಹಝೈಬ್ ಖಾನ್, ಭಾರತ ಅಂಡರ್ 19 ತಂಡದ ವಿರುದ್ಧ ವೈಯಕ್ತಿಕ ಅತ್ಯಧಿಕ ರನ್ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಪಾಕ್‌ನವರೇ ಆದ ಸಮಿ ಅಸ್ಲಾಮ್ 2012ರಲ್ಲಿ ಭಾರತ ವಿರುದ್ಧ ನಿರ್ಮಿಸಿದ್ದ 134 ರನ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.