ಮೆಲ್ಬರ್ನ್ ನಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಟೆಸ್ಟ್ ಸರಣಿ ಆಯೋಜನೆ?
Team Udayavani, Dec 29, 2022, 2:12 PM IST
ಮೆಲ್ಬರ್ನ್: ಭಾರತ ಮತ್ತು ಪಾಕಿಸ್ಥಾನ ನಡುವೆ ದ್ವಿಪಕ್ಷೀಯ ಸರಣಿಗೆ ಹಲವು ಪ್ರಯತ್ನಗಳು ನಡೆದಿದೆ. ಈ ಹಿಂದೆ ಪಾಕಿಸ್ಥಾನದ ಕಡೆಯಿಂದಲೂ ಇಂತಹ ಪ್ರಸ್ತಾವನೆ ಬಂದಿತ್ತು. ಆದರೆ ಭಾರತ ಇದನ್ನು ತಿರಸ್ಕರಿಸಿತ್ತು. ಆದರೆ ಆಸ್ಟ್ರೇಲಿಯಾ ಈ ಬಗ್ಗೆ ಯೋಜನೆ ರೂಪಿಸಿದೆ.
ಹೌದು, ಭಾರತ ಮತ್ತು ಪಾಕಿಸ್ಥಾನ ನಡುವೆ ಮೂರು ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಉತ್ಸಾಹ ತೋರಿದೆ.
ವರದಿಯ ಪ್ರಕಾರ, ಎಂಸಿಸಿ ಮತ್ತು ವಿಕ್ಟೋರಿಯನ್ ಸರ್ಕಾರವು ಭಾರತ ಮತ್ತು ಪಾಕಿಸ್ತಾನದ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಪ್ರಸ್ತಾಪವೊಂದನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಮುಂದಿಟ್ಟಿದೆ. ರೇಡಿಯೊದೊಂದಿಗೆ ಮಾತನಾಡಿದ ಎಂಸಿಸಿ ಮುಖ್ಯ ಕಾರ್ಯನಿರ್ವಾಹಕ ಸ್ಟುವರ್ಟ್ ಫಾಕ್ಸ್, ಭಾರತ ಮತ್ತು ಪಾಕಿಸ್ತಾನವು ತಟಸ್ಥ ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಬಗ್ಗೆ ವಿಚಾರ ಬಹಿರಂಗಪಡಿಸಿದರು.
ಇದನ್ನೂ ಓದಿ:ವಂಚನೆ ಪ್ರಕರಣ; ಆರೋಪಿ ಲಕ್ಷ್ಮೀನಾರಾಯಣಗೆ ಜ.11ರ ವರೆಗೆ ನ್ಯಾಯಾಂಗ ಬಂಧನ
2007 ರಿಂದ ಭಾರತವು ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡಿಲ್ಲ. 2013 ರಿಂದ, ಅವರು ಯಾವುದೇ ಸ್ವರೂಪದಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಪರಸ್ಪರ ಆಡಿಲ್ಲ. ಐಸಿಸಿ ಮತ್ತು ಏಷ್ಯಾ ಕಪ್ ಪಂದ್ಯಾವಳಿಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತದೆ.
ಆದರೆ ಭಾರತ ಮತ್ತು ಪಾಕಿಸ್ತಾನ ಟೆಸ್ಟ್ ಪಂದ್ಯವನ್ನು ಆಯೋಜಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಉಭಯ ದೇಶಗಳ ನಡುವಿನ ರಾಜಕೀಯ ಸಂಘರ್ಷ ಮತ್ತು ಉದ್ವಿಗ್ನತೆಯು ಉತ್ತುಂಗದಲ್ಲಿದ್ದು, ಎಂಸಿಸಿಯ ಈ ಪ್ರಯತ್ನ ಫಲ ಕೊಡುವುದು ಕಷ್ಟ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.