ಕುಸಿದ ದಕ್ಷಿಣ ಆಫ್ರಿಕಾಕ್ಕೆ ಎಬಿಡಿ, ಪ್ಲೆಸಿಸ್ ಆಸರೆ
Team Udayavani, Jan 6, 2018, 6:00 AM IST
ಕೇಪ್‌ಟೌನ್: ವಿಶ್ವದ ಅಗ್ರ ಎರಡು ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಕೇಪ್‌ಟೌನ್ ಟೆಸ್ಟ್‌ನ ಮೊದಲ ದಿನ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಇದರಿಂದಾಗಿ ಮೊದಲ ದಿನ 13 ವಿಕೆಟ್‌ಗಳು ಉರುಳಿವೆ.
ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಆರಂಭದಲ್ಲಿ ತತ್ತರಿಸಿದ ದಕ್ಷಿಣ ಆಫ್ರಿಕಾವು ಎಬಿ ಡಿ’ವಿಲಿಯರ್, ಪ್ಲೆಸಿಸ್ ಮತ್ತು ಕಾಕ್ ಅವರ ಜವಾಬ್ದಾರಿಯ ಆಟದಿಂದಾಗಿ 286 ರನ್ ಪೇರಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಭಾರತವೂ ಆರಂಭಿಕ ಕುಸಿತ ಕಂಡಿದೆ. 18 ರನ್ ಗಳಿಸುವಷ್ಟರಲ್ಲಿ ತಂಡ ಆರಂಭಿಕರನ್ನು ಕಳೆದುಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಕೇವಲ 5 ರನ್ನಿಗೆ ಔಟಾಗಿರುವುದು ತಂಡಕ್ಕೆ ಎದುರಾದ ದೊಡ್ಡ ಹೊಡೆತವಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೂರು ವಿಕೆಟಿಗೆ 28 ರನ್ ಗಳಿಸಿದೆ. ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮ ತಂಡದ ರಕ್ಷಣೆಯ ಭಾರ ಹೊತ್ತಿದ್ದಾರೆ.
ಭುವನೇಶ್ವರ್ ದಾಳಿ
ವೇಗಿ ಭುವನೇಶ್ವರ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಕೇವಲ 12 ರನ್ ಗಳಿಸುವಷ್ಟರಲ್ಲಿ ಆರಂಭದ ಮೂರು ವಿಕೆಟ್ ಕಳೆದುಕೊಂಡು ಒದ್ದಾಡಿತು. ಎಲ್ಗರ್, ಆಮ್ಲ ಅವರ ವಿಕೆಟನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾ ಸಂಕಷ್ಟಕ್ಕೆ ಬಿತ್ತು. ಆದರೆ ಅನುಭವಿ ಎಬಿ ಡಿ’ವಿಲಿಯರ್ ಮತ್ತು ಪ್ಲೆಸಿಸ್ ಅವರ ಜವಾಬ್ದಾರಿಯ ಆಟದಿಂದಾಗಿ ತಂಡ ಚೇತರಿಸಿಕೊಂಡಿತು.
ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರಿಬ್ಬರು ಮೂರನೇ ವಿಕೆಟಿಗೆ 114 ರನ್ನುಗಳ ಜತೆಯಾಟ ನಡೆಸಿದರು. ಇಬ್ಬರೂ ಅರ್ಧಶತಕ ಸಿಡಿಸಿದರು. ಈ ಟೆಸ್ಟ್ ಮೂಲಕ ಟೆಸ್ಟ್‌ಗೆ ಪಾದಾರ್ಪಣೆಗೈದ ಜಸ್‌ಪ್ರೀತ್ ಬುಮ್ರಾ ಈ ಜೋಡಿಯನ್ನು ಮುರಿಯಲು ಯಶಸ್ವಿಯಾದರು. ಬುಮ್ರಾ ಅವರ ಅಮೋಘ ಎಸೆತಕ್ಕೆ ಡಿ’ವಿಲಿಯರ್ ಬೌಲ್ಡ್ ಆದರು. 84 ಎಸೆತ ಎದುರಿಸಿದ ಅವರು 11 ಬೌಂಡರಿ ನೆರವಿನಿಂದ 65 ರನ್ ಹೊಡೆದರು. ಸ್ವಲ್ಪ ಹೊತ್ತಿನಲ್ಲಿ ಪ್ಲೆಸಿಸ್ ಕೂಡ ನಿರ್ಗಮಿಸಿದರು. ಅವರು 104 ಎಸೆತಗಳಿಂದ 62 ರನ್ ಹೊಡೆದರು.
ಎಬಿಡಿ ಮತ್ತು ಪ್ಲೆಸಿಸ್ ನಿರ್ಗಮನದ ಬಳಿಕ ಕಾಕ್ ಸಹಿತ ಬೌಲರ್‌ಗಳು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಪ್ಲೆಸಿಸ್ ಔಟ್ ಆದಾಗ ದಕ್ಷಿಣ ಆಫ್ರಿಕಾ 5ಕ್ಕೆ 142 ರನ್ ಗಳಿಸಿತ್ತು. ಆಬಳಿಕದ ಐದು ವಿಕೆಟಿಗೆ ತಂಡ ಮತ್ತೆ 144 ರನ್ ಪೇರಿಸಿತ್ತು. ಕಾಕ್, ಫಿಲಾಂಡರ್, ಕೇಶವ್ ಮಹಾರಾಜ್, ರಬಾಡ ಮತ್ತು ಸ್ಟೇನ್ ಅವರ ಪರಿಶ್ರಮದಿಂದ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ವಿಕೆಟ್ ಹಿಂದುಗಡೆ ಉತ್ತಮ ನಿರ್ವಹಣೆ ನೀಡಿದ ವೃದ್ಧಿಮಾನ್ ಸಾಹಾ ಐದು ಕ್ಯಾಚ್ ಪಡೆದು ಗಮನ ಸೆಳೆದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಬೇಗ ಕುಸಿಯಲು ಸಾಧ್ಯವಾಯಿತು. ವೇಗಿ ಭುವನೇಶ್ವರ್ ಕುಮಾರ್ 87 ರನ್ನಿಗೆ 4 ವಿಕೆಟ್ ಕಿತ್ತರೆ ಅಶ್ವಿನ್ ಎರಡು ವಿಕೆಟ್ ಪಡೆದರು.
ಕುಸಿದ ಭಾರತ
ದಕ್ಷಿಣ ಆಫ್ರಿಕಾದಂತೆ ಭಾರತವು ಆರಂಭಿಕ ಕುಸಿತಕ್ಕೆ ಒಳಗಾಗಿದೆ. ಆರಂಭಿಕ ಶಿಖರ್ ಧವನ್ ಬಿರುಸಿನ ಆಟಕ್ಕೆ ಮುಂದಾದರು. ಆದರೆ 13 ಎಸೆತಗಳಲ್ಲಿ 16 ರನ್ ಗಳಿಸಿದ ವೇಳೆ ಸ್ಟೇನ್‌ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಈ ಮೊದದಲು ಮುರಳಿ ವಿಜಯ್ ಅವರ ವಿಕೆಟನ್ನು ಫಿಲಾಂಡರ್ ಹಾರಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಅವರನ್ನು ತಂಡ ಕಳೆದುಕೊಂಡಿರುವುದು ದೊಡ್ಡ ಹೊಡೆತವಾಗಿದೆ. ಕೊಹ್ಲಿ ಅವರನ್ನು ಮಾರ್ನೆ ಕೆಡಹಿದ್ದರು.
ಭಾರತ
ಮುರಳಿ ವಿಜಯ್ ಸಿ ಎಲ್ಗರ್ ಬಿ ಫಿಲಾಂಡರ್ 1
ಶಿಖರ್ ಧವನ್ ಸಿ ಮತ್ತು ಬಿ ಸ್ಟೇನ್ 16
ಚೇತೇಶ್ವರ್ ಪೂಜಾರ ಬ್ಯಾಟಿಂಗ್ 5
ವಿರಾಟ್ ಕೊಹ್ಲಿ ಸಿ ಕಾಕ್ ಬಿ ಮಾರ್ಕೆಲ್ 5
ರೋಹಿತ್ ಶರ್ಮ ಬ್ಯಾಟಿಂಗ್ 0
ಇತರ: 1
ಒಟ್ಟು (11 ಓವರ್‌ಗಳಲ್ಲಿ 3 ವಿಕೆಟಿಗೆ) 28
ವಿಕೆಟ್ ಪತನ: 1-16, 2-18, 3-27
ಬೌಲಿಂಗ್:
ವೆರ್ನನ್ ಫಿಲಾಂಡರ್ 4-1-13-1
ಡೇನ್ ಸ್ಟೇನ್ 4-1-13-1
ಮಾರ್ನೆ ಮಾರ್ಕೆಲ್ 2-2-0-1
ಕಾಗಿಸೊ ರಬಾಡ 1-0-10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.