India vs South Africa T20I: ಇಮ್ಮಡಿ ಉತ್ಸಾಹದಲ್ಲಿ ಭಾರತ
Team Udayavani, Nov 10, 2024, 7:10 AM IST
ಜೆಬೆರಾ: ಬಲಿಷ್ಠ ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಯುವ ತಂಡಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಸರ್ವಾಂಗೀಣ ಪ್ರದರ್ಶನದ ಮೂಲಕ ಹರಿಣಗಳನ್ನು ಬೇಟೆಯಾಡಿದೆ. ಆರಂಭಿಕ ಪಂದ್ಯದಲ್ಲೇ ಒಲಿದ 61 ರನ್ನುಗಳ ಗೆಲುವು ಸಹಜವಾಗಿಯೇ ಭಾರತದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇದು ರವಿವಾರದ 2ನೇ ಪಂದ್ಯಕ್ಕೆ ಸ್ಫೂರ್ತಿ ತುಂಬುವುದರಲ್ಲಿ ಅನುಮಾನವಿಲ್ಲ.
ಇದು 4 ಪಂದ್ಯಗಳ ಮುಖಾಮುಖಿಯಾದ್ದರಿಂದ, ಸರಣಿ ವಶ ಪಡಿಸಿಕೊಳ್ಳಲು 3 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಆದರೆ 2 ಪಂದ್ಯ ಗೆದ್ದರೆ ಸರಣಿ ಸೋಲಿನ ಕಂಟಕ ಎದುರಾಗದು. ಈ ನಿಟ್ಟಿನಲ್ಲಿ ಭಾರತ ರವಿವಾರದ ಮುಖಾಮುಖಿಯನ್ನೂ ಗೆದ್ದು “ಸೇಫ್ ಝೋನ್’ನಲ್ಲಿ ಉಳಿಯುವುದು ಮುಖ್ಯ.
ಸಂಜು ಅಬ್ಬರದ ಆಟ:
ಡರ್ಬನ್‌ನ ಬೌನ್ಸಿ ಟ್ರ್ಯಾಕ್ ಮೇಲೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆತಿಥೇಯರ ವೇಗಕ್ಕೆ ತತ್ತರಿಸೀತು ಎಂಬ ಭಯ ಕಾಡಿದ್ದು ಸಹಜ. ಆದರೆ ಸಂಜು ಸ್ಯಾಮ್ಸನ್ ಸಿಡಿದು ನಿಂತು ಆತಿಥೇಯರ ಬೌಲಿಂಗ್ ಸಮತೋಲನವನ್ನೇ ತಪ್ಪಿಸಿದರು. 50 ಎಸೆತಗಳಿಂದ 107 ರನ್ ಸಿಡಿಸಿ ಭಾರತದ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ಯಶಸ್ವಿಯಾದರು.
ಬೌಲಿಂಗ್‌ನಲ್ಲೂ ಭಾರತ ಮಿಂಚಿನ ದಾಳಿ ಸಂಘಟಿಸಿತು. ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ ಅವರ ಎಸೆತಗಳನ್ನು ನಿಭಾಯಿಸಲಾಗದೆ ದಕ್ಷಿಣ ಆಫ್ರಿಕಾ ಚಡಪಡಿಸಿತು. ಮಾರ್ಕ್‌ರಮ್, ಸ್ಟಬ್ಸ್, ಕ್ಲಾಸೆನ್, ಮಿಲ್ಲರ್ ಅವರಂಥ ಬಿಗ್ ಹಿಟ್ಟರ್‌ಗಳನ್ನು ಹೊಂದಿಯೂ 17.5 ಓವರ್‌ಗಳಲ್ಲಿ 141ಕ್ಕೆ ಕುಸಿದದ್ದು ಅಚ್ಚರಿಯೇ ಸರಿ.
ಬೇಕಿದೆ ಮತ್ತದೇ ಆಟ…
ದ್ವಿತೀಯ ಪಂದ್ಯದಲ್ಲೂ ಹರಿಣಗಳಿಗೆ ತಲೆ ಎತ್ತಿ ನಿಲ್ಲದಂತೆ ಮಾಡಲು ಭಾರತದ ಪ್ರಯತ್ನ ಮುಂದುವರಿಯಬೇಕಿದೆ. ಇದಕ್ಕೆ ಮೊದಲ ಪಂದ್ಯದ ಆಟವನ್ನೇ ಪುನರಾವರ್ತಿಸುವುದು ಮುಖ್ಯ. ಬ್ಯಾಟಿಂಗ್ ವಿಷಯಕ್ಕೆ ಬರುವುದಾದರೆ, ಸ್ಯಾಮ್ಸನ್ ಮಾತ್ರವಲ್ಲ, ಉಳಿದವರ ಬ್ಯಾಟ್‌ನಿಂದಲೂ ರನ್ ಹರಿದು ಬರುವುದು ಮುಖ್ಯ. ಅಭಿಷೇಕ್ ಶರ್ಮ, ಸೂರ್ಯಕುಮಾರ್, ಪಾಂಡ್ಯ ಕ್ರೀಸ್ ಆಕ್ರಮಿಸಿಕೊಳ್ಳಬೇಕಾದ ಅಗತ್ಯವಿದೆ.
ಡರ್ಬನ್‌ನಲ್ಲಿ ಭಾರತ 8ಕ್ಕೆ 202 ರನ್ ರಾಶಿ ಹಾಕಿತೇನೋ ನಿಜ, ಆದರೆ ಅಂತಿಮ 6 ಓವರ್‌ಗಳಲ್ಲಿ ಬಂದದ್ದು 40 ರನ್ ಮಾತ್ರ ಎಂಬುದನ್ನು ಮರೆಯುವಂತಿಲ್ಲ. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳ ಪ್ರಯತ್ನ ಸಾಲದು ಎಂಬುದನ್ನು ಇದು ಸೂಚಿಸುತ್ತದೆ.
ದಕ್ಷಿಣ ಆಫ್ರಿಕಾ 4 ಮಂದಿ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಇವರೆಂದರೆ ಕ್ವಿಂಟನ್ ಡಿ ಕಾಕ್, ಕಾಗಿಸೊ ರಬಾಡ, ಆ್ಯನ್ರಿಚ್ ನೋರ್ಜೆ ಮತ್ತು ತಬ್ರೇಜ್ ಶಮ್ಸಿ. ಆದರೂ ಆತಿಥೇಯ ಪಡೆ ಭಾರತಕ್ಕಿಂತ ಹೆಚ್ಚು ಅನುಭವಿ ಎಂಬುದರಲ್ಲಿ ಅನುಮಾನವಿಲ್ಲ. ಅದೀಗ ಗಾಯಗೊಂಡ ಹುಲಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
US; ಮೈಕ್ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ
U.P: ಪತ್ನಿ, ಮಕ್ಕಳ ಕೊಂದು ಸ್ಟೇಟಸ್ ಹಾಕಿದ!
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.