ಅಪ್ರತಿಮ ಸಾಧನೆಗೆ ಅವಳಿ ಟ್ರೋಫಿಗಳ ಮೆರುಗು


Team Udayavani, Feb 26, 2018, 6:00 AM IST

AP2_25_2018_000008B.jpg

ಕೇಪ್‌ಟೌನ್‌: ಭಾರೀ ಕಠಿನ ಎಂದು ಭಾವಿಸಲಾಗಿದ್ದ ದಕ್ಷಿಣ ಆಫ್ರಿಕಾದ ಸುದೀರ್ಘ‌ ಕ್ರಿಕೆಟ್‌ ಪ್ರವಾಸವನ್ನು ಭಾರತ ನಿರೀಕ್ಷೆಗೂ ಮೀರಿದ ಯಶಸ್ಸಿನೊಂದಿಗೆ ಮುಗಿಸಿದೆ. ಹರಿಣಗಳ ನಾಡಿನಲ್ಲಿ ಇದೇ ಮೊದಲ ಬಾರಿಗೆ ಏಕದಿನ ಹಾಗೂ ಟಿ20 ಸರಣಿಗಳೆರಡನ್ನೂ ವಶಪಡಿಸಿಕೊಂಡದ್ದು ಟೀಮ್‌ ಇಂಡಿಯಾದ ಮಹತ್ವದ ಹಾಗೂ ಸ್ಮರಣೀಯ ಸಾಧನೆಯಾಗಿ ದಾಖಲಾಗಿದೆ. ಒಂದು ಟೆಸ್ಟ್‌ ಗೆಲುವು ಕೂಡ ಕೊಹ್ಲಿ ಪಡೆಯ ಹಿರಿಮೆಯನ್ನು ಸಾರುತ್ತದೆ.

ಕೇಪ್‌ಟೌನ್‌ ಟೆಸ್ಟ್‌ ಸೋಲಿನೊಂದಿಗೆ ಮೊದಲ್ಗೊಂಡ ಭಾರತದ ಈ ಪ್ರವಾಸ ಕೇಪ್‌ಟೌನ್‌ ಟಿ20 ಗೆಲುವಿನೊಂದಿಗೆ ಸಂಪನ್ನಗೊಂಡದ್ದೊಂದು ವಿಶೇಷ. ದಕ್ಷಿಣ ಆಫ್ರಿಕಾ 2 ಟೆಸ್ಟ್‌ ಹಾಗೂ ತಲಾ ಒಂದೊಂದು ಏಕದಿನ ಮತ್ತು ಟಿ20 ಪಂದ್ಯಗಳನ್ನು ಗೆದ್ದರೆ, ಭಾರತ ಒಂದು ಟೆಸ್ಟ್‌, 5 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿತು.

ಟಿ20: 7 ರನ್‌ ಗೆಲುವು
ಶನಿವಾರ ರಾತ್ರಿ ನಡೆದ ಅಂತಿಮ ಟಿ20 ಪಂದ್ಯವನ್ನು 7 ರನ್ನುಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು, ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 172 ರನ್‌ ಬಾರಿಸಿ ಸವಾಲೊಡ್ಡಿತು. ದಕ್ಷಿಣ ಆಫ್ರಿಕಾ ಕೊನೆಯ ಹಂತದಲ್ಲಿ ಸಿಡಿದು ನಿಂತರೂ 6ಕ್ಕೆ 165 ರನ್‌ ಮಾತ್ರ ಗಳಿಸಿ ಸರಣಿಯನ್ನು ಕಳೆದುಕೊಂಡಿತು.
ಚೇಸಿಂಗ್‌ ಇಷ್ಟಪಟ್ಟ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಭಾರತದ ಬಿಗಿ ದಾಳಿಗೆ ಸಿಲುಕಿ ಒತ್ತಡಕ್ಕೊಳಗಾಯಿತು. 

ಕೊನೆಯ 3 ಓವರ್‌ಗಳಲ್ಲಿ 5 ವಿಕೆಟ್‌ಗಳಿಂದ 53 ರನ್‌ ತೆಗೆಯುವ ಕಠಿನ ಸವಾಲು ಎದುರಾಯಿತು. ಈ ಹಂತದಲ್ಲಿ ಮೊದಲ ಪಂದ್ಯವಾಡಲಿಳಿದಿದ್ದ ಜಾಂಕರ್‌ ಸಿಡಿದು ನಿಂತರು. ಶಾದೂìಲ್‌ ಠಾಕೂರ್‌ ಎಸೆದ 18ನೇ ಓವರಿನಲ್ಲಿ 18 ರನ್‌, ಬುಮ್ರಾ ಪಾಲಾದ 19ನೇ ಓವರಿನಲ್ಲಿ 16 ರನ್‌  ಸೋರಿಹೋಯಿತು. ಅಂತಿಮ ಓವರಿನಲ್ಲಿ ಆಫ್ರಿಕಾ ಗೆಲುವಿಗೆ 19 ರನ್‌ ಅಗತ್ಯ ಬಿತ್ತು. ಆದರೆ ಭುವನೇಶ್ವರ್‌ ಉತ್ತಮ ನಿಯಂತ್ರಣ ಸಾಧಿಸಿದರು. ಅಂತಿಮ ಎಸೆತದಲ್ಲಿ ಅಪಾಯಕಾರಿ ಜಾಂಕರ್‌ ವಿಕೆಟ್‌ ಕಿತ್ತು ಭಾರತದ ಸರಣಿ ಜಯವನ್ನು ಘೋಷಿಸಿದರು.

43 ರನ್‌ ಜತೆಗೆ ಒಂದು ವಿಕೆಟ್‌ ಕಿತ್ತ ಸುರೇಶ್‌ ರೈನಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೆ, ಒಟ್ಟು 7 ವಿಕೆಟ್‌ ಹಾರಿಸಿದ ಭುವನೇಶ್ವರ್‌ ಕುಮಾರ್‌ ಸರಣಿಶ್ರೇಷ್ಠರಾಗಿ ಮೂಡಿಬಂದರು.

ಆಕ್ರಮಣಕಾರಿ ನೀತಿ
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಉಸ್ತುವಾರಿ ನಾಯಕ ರೋಹಿತ್‌ ಶರ್ಮ, “ಸೀಮಿತ ಓವರ್‌ಗಳ ಸರಣಿಯಲ್ಲಿ ನಾವು ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತ ಬಂದೆವು. ಎಷ್ಟೇ ಕಠಿನ ಸಂದರ್ಭದಲ್ಲೂ ಪಲಾಯನವಾದ ಮಾಡಲಿಲ್ಲ. ಒಂದು ತಂಡವಾಗಿ ಆಡಿದೆವು, ಕಾರ್ಯತಂತ್ರಗಳಲ್ಲಿ ಯಶಸ್ವಿಯಾದೆವು’ ಎಂದರು.

“ಅಂತಿಮ ಪಂದ್ಯಕ್ಕಾಗಿ ನಾವು ಕೆಲವು ಯೋಜನೆಗಳನ್ನು ರೂಪಿಸಿದ್ದೆವು. ಮುಖ್ಯವಾಗಿ ಪವರ್‌-ಪ್ಲೇ ಅವಧಿಯ ಮೊದಲ 6 ಓವರ್‌ಗಳಲ್ಲಿ ನಿಯಂತ್ರಣ ಸಾಧಿಸುವುದಾಗಿತ್ತು. ಇದು ಯಶಸ್ವಿಯಾಯಿತು. ನ್ಯೂ ಬಾಲ್‌ ಬೌಲರ್‌ಗಳಿಗೆ ಇದರ ಸಂಪೂರ್ಣ ಶ್ರೇಯಸ್ಸು ಸಲ್ಲುತ್ತದೆ. ಅನಂತರವೂ ನಾವು ಬಿಗಿ ದಾಳಿ ಮುಂದುವರಿಸಿದೆವು. ಸಹಜವಾಗಿಯೇ ರನ್‌ರೇಟ್‌ ಏರತೊಡಗಿತು. ಆಫ್ರಿಕಾದ ಮೇಲೆ ಒತ್ತಡ ಬಿತ್ತು. ನಮ್ಮದು ಪರಿಪೂರ್ಣ ಬೌಲಿಂಗ್‌ ಸಾಧನೆಯಾಗಿತ್ತು…’ ಎಂದರು.
ಭಾರತದ ಬ್ಯಾಟಿಂಗ್‌ ಬಗ್ಗೆ ಮಾತಾಡಿದ ರೋಹಿತ್‌, 

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ 15 ರನ್ನುಗಳ ಕೊರತೆ ಕಾಡಿತು. ನಮ್ಮ ಆರಂಭವನ್ನು ಕಂಡಾಗ ಇನ್ನೂ ಹೆಚ್ಚಿನ ಮೊತ್ತ ದಾಖಲಾಗಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ನಿರೀಕ್ಷಿಸಿದಷ್ಟು ರನ್‌ ಬರಲಿಲ್ಲ’ ಎಂದರು.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ಡಾಲ    11
ಶಿಖರ್‌ ಧವನ್‌    ರನೌಟ್‌    47
ಸುರೇಶ್‌ ರೈನಾ    ಸಿ ಬೆಹದೀìನ್‌ ಬಿ ಶಂಸಿ    43
ಮನೀಷ್‌ ಪಾಂಡೆ    ಸಿ ಮಿಲ್ಲರ್‌ ಬಿ ಡಾಲ    13
ಹಾರ್ದಿಕ್‌ ಪಾಂಡ್ಯ    ಸಿ ಕ್ಲಾಸೆನ್‌ ಬಿ ಮಾರಿಸ್‌21
ಎಂ.ಎಸ್‌. ಧೋನಿ    ಸಿ ಮಿಲ್ಲರ್‌ ಬಿ ಡಾಲ    12
ದಿನೇಶ್‌ ಕಾರ್ತಿಕ್‌    ಎಲ್‌ಬಿಡಬ್ಲ್ಯು ಮಾರಿಸ್‌    13
ಅಕ್ಷರ್‌ ಪಟೇಲ್‌    ಔಟಾಗದೆ    1
ಭುವನೇಶ್ವರ್‌ ಕುಮಾರ್‌    ಔಟಾಗದೆ    3
ಇತರ        8
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)        172
ವಿಕೆಟ್‌ ಪತನ: 1-14, 2-79, 3-111, 4-126, 5-151, 6-163, 7-168.
ಬೌಲಿಂಗ್‌:
ಕ್ರಿಸ್‌ ಮಾರಿಸ್‌        4-0-43-2
ಜೂನಿಯರ್‌ ಡಾಲ        4-0-35-3
ಜೆಪಿ ಡ್ಯುಮಿನಿ        3-0-22-0
ಆ್ಯಂಡಿಲ್‌ ಫೆಲುಕ್ವಾಯೊ        3-0-26-0
ತಬ್ರೈಜ್‌ ಶಂಸಿ        4-0-31-1
ಆರನ್‌ ಫ್ಯಾಂಗಿಸೊ        2-0-13-0
ದಕ್ಷಿಣ ಆಫ್ರಿಕಾ
ರೀಝ ಹೆಂಡ್ರಿಕ್ಸ್‌    ಸಿ ಧವನ್‌ ಬಿ ಭುವನೇಶ್ವರ್‌    7
ಡೇವಿಡ್‌ ಮಿಲ್ಲರ್‌    ಸಿ ಪಟೇಲ್‌ ಬಿ ರೈನಾ    24
ಜೆಪಿ ಡ್ಯುಮಿನಿ    ಸಿ ರೋಹಿತ್‌ ಬಿ ಠಾಕೂರ್‌    55
ಹೆನ್ರಿಚ್‌ ಕ್ಲಾಸೆನ್‌    ಸಿ ಭುವನೇಶ್ವರ್‌ ಬಿ ಪಾಂಡ್ಯ    7
ಕ್ರಿಸ್ಟಿಯಾನ್‌ ಜಾಂಕರ್‌    ಸಿ ರೋಹಿತ್‌ ಬಿ ಭುವನೇಶ್ವರ್‌    49
ಕ್ರಿಸ್‌ ಮಾರಿಸ್‌    ಬಿ ಬುಮ್ರಾ    4
ಫ‌ರ್ಹಾನ್‌ ಬೆಹದೀìನ್‌    ಔಟಾಗದೆ    15
ಇತರ        4
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)        165
ವಿಕೆಟ್‌ ಪತನ: 1-10, 2-45, 3-79, 4-109, 5-114, 6-165.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-24-2
ಜಸ್‌ಪ್ರೀತ್‌ ಬುಮ್ರಾ        4-0-39-1
ಶಾದೂìಲ್‌ ಠಾಕೂರ್‌        4-0-35-1
ಹಾರ್ದಿಕ್‌ ಪಾಂಡ್ಯ        4-0-22-1
ಸುರೇಶ್‌ ರೈನಾ        3-0-27-1
ಅಕ್ಷರ್‌ ಪಟೇಲ್‌        1-0-16-0
ಪಂದ್ಯಶ್ರೇಷ್ಠ: ಸುರೇಶ್‌ ರೈನಾ
ಸರಣಿಶ್ರೇಷ್ಠ: ಭುವನೇಶ್ವರ್‌ ಕುಮಾರ್‌

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

1-rwqeqwqw

BCCI ಕಾರ್ಯದರ್ಶಿಯಾಗಿ ರೋಹನ್‌ ಜೇಟ್ಲಿ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.