ಸೆಮಿ ಸಮೀಪಿಸಿದ ಭಾರತಕ್ಕೆ ಆಫ್ರಿಕಾ ಸವಾಲು

Team Udayavani, Jul 8, 2017, 3:40 AM IST

captain-Mithali-Raj.jpg

ಲೀಸ್ಟರ್‌: ಆಡಿದ ಎಲ್ಲ 4 ಪಂದ್ಯಗಳಲ್ಲೂ ಗೆಲುವಿನ ಸವಿಯನ್ನುಂಡು ಅಪಾರ ಆತ್ಮವಿಶ್ವಾಸದಲ್ಲಿರುವ ಮಿಥಾಲಿ ರಾಜ್‌ ನಾಯಕತ್ವದ ಭಾರತ ಶನಿವಾರದ ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ. ಇದನ್ನು ಗೆದ್ದರೆ ಸೆಮಿಫೈನಲ್‌ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಆಡಿದ 4 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಜಯಿಸಿದೆ. ಅದೂ ಸಾಮಾನ್ಯ ತಂಡಗಳೆದುರು. ಪಾಕಿಸ್ಥಾನ ವಿರುದ್ಧ 3 ವಿಕೆಟ್‌ಗಳಿಂದ, ವೆಸ್ಟ್‌ ಇಂಡೀಸ್‌ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದಿತ್ತು. ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿತ್ತು. ಇಂಗ್ಲೆಂಡ್‌ ವಿರುದ್ಧದ ಮುನ್ನೂರರ ಮೇಲಾಟದಲ್ಲಿ 68 ರನ್‌ ಸೋಲನುಭವಿಸಿತ್ತು. ಈ ಸೋಲು ಭಾರತದೆದುರಿನ ಪಂದ್ಯದ ವೇಳೆ ಹರಿಣಗಳನ್ನು ಮಾನಸಿಕವಾಗಿ ಕಾಡಲೂಬಹುದು.

ಇಲ್ಲಿ ದಕ್ಷಿಣ ಆಫ್ರಿಕಾದ “ಭಾರತ ಭೀತಿ’ಗೆ ಇನ್ನೊಂದು ಕಾರಣವೂ ಇದೆ. ವಿಶ್ವಕಪ್‌ಗ್ೂ ಮುನ್ನ ತನ್ನದೇ ನೆಲದಲ್ಲೇ ನಡೆದ ಚತುಷೊRàಣ ಸರಣಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಸೋತಿತ್ತು. ಹೀಗಾಗಿ ಭಾರತದ ವಿರುದ್ಧ ಹರಿಣಗಳ ಪಡೆ ವಿಭಿನ್ನ ಕಾರ್ಯತಂತ್ರವನ್ನು ರೂಪಿಸಬೇಕಾಗಬಹುದು. ಹಾಗೆಯೇ ವಿಶ್ವಕಪ್‌ ಎನ್ನುವುದು “ಡಿಫ‌ರೆಂಟ್‌ ಬಾಲ್‌ ಗೇಮ್‌’ ಎಂಬ ಎಚ್ಚರಿಕೆಯೂ ಭಾರತಕ್ಕೆ ಇರಬೇಕಾದುದು ಅಗತ್ಯ.

ಮುಂದಿದೆ ಕಠಿನ ಸವಾಲು
ಭಾರತ ತಂಡ ಆತಿಥೇಯ ಇಂಗ್ಲೆಂಡನ್ನೇ ಸದೆಬಡಿದು ಶುಭಾರಂಭ ಮಾಡಿತ್ತು. ಬಳಿಕ ವೆಸ್ಟ್‌ ಇಂಡೀಸ್‌ ಮತ್ತು ಪಾಕಿಸ್ಥಾನವನ್ನು ಅಧಿಕಾರಯುತವಾಗಿ ಬಗ್ಗುಬಡಿಯಿತು. ಶ್ರೀಲಂಕಾ ತುಸು ಪ್ರತಿರೋಧ ಒಡ್ಡಿದರೂ ಮಿಥಾಲಿ ಪಡೆ ಇದನ್ನು ಯಶಸ್ವಿಯಾಗಿಯೇ ನಿಭಾಯಿಸಿತು. ಹೀಗೆ, ಭಾರತದ ಈವರೆಗಿನ ಪಯಣ ಗೆಲುವಿನಿನ ಪಥದಲ್ಲೇ ಸಾಗಿದೆ. ಆದರೆ ಮುಂದಿನ ಸವಾಲು ಅಷ್ಟು ಸುಲಭದ್ದಲ್ಲ.

ವನಿತೆಯರು ಎದುರಿಸಬೇಕಿರುವ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಹೆಚ್ಚು ಬಲಿಷ್ಠವಾಗಿವೆ. ಇವುಗಳ ವಿರುದ್ಧ ಮಿಥಾಲಿ ಟೀಮ್‌ ಎಂದಿಗಿಂತ ಹೆಚ್ಚಿನ ಸಾಮರ್ಥ್ಯ ಪ್ರದರ್ಶಿಸುವ ಜತೆಯಲ್ಲೇ ಬೇರೆಯದೇ ಆದ ರಣತಂತ್ರವನ್ನು ರೂಪಿಸುವುದೂ ಅನಿವಾರ್ಯ. ಅಕಸ್ಮಾತ್‌ ಉಳಿದ ಮೂರೂ ಪಂದ್ಯಗಳಲ್ಲಿ ಹಿನನ್ನಡೆಯಾದರೆ… ಎಂಬ ಮುನ್ನೆಚ್ಚರಿಕೆಯೂ ಇರಬೇಕಾದುದು ಅಗತ್ಯ.

ಈಗಿನ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯ, ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ಸೆಮಿಫೈನಲ್‌ ಖಚಿತ. ಹಾಗೆಯೇ ಪಾಕಿಸ್ಥಾನ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ಕೂಟದಿಂದ ಗಂಟುಮೂಟೆ ಕಟ್ಟುವುದೂ ಖಾತ್ರಿ. ಆಗ ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ಸೆಮಿಫೈನಲ್‌ ಸ್ಥಾನಕ್ಕೆ ತೀವ್ರ ಸ್ಪರ್ಧೆ ಎದುರಾಗಬಹುದು. ಎರಡೂ ಸಮಬಲ ಸಾಧನೆಯೊಂದಿಗೆ 5 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಕಿವೀಸ್‌ ಸ್ವಲ್ಪ ಮುಂದಿದೆ. ಹೀಗಾಗಿ ಭಾರತದೆದುರಿನ ಪಂದ್ಯ ದಕ್ಷಿಣ ಆಫ್ರಿಕಾಕ್ಕೆ ಹೆಚ್ಚು ಮಹತ್ವದ್ದಾಗಿದೆ. ದಿನದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌-ಪಾಕಿಸ್ಥಾನ ಎದುರಾಗಲಿವೆ. ಇಲ್ಲಿ ಕಿವೀಸ್‌ ನೆಚ್ಚಿನ ತಂಡವಾಗಿರುವುದೂ ಹರಿಣಗಳ ಒತ್ತಡವನ್ನು ಹೆಚ್ಚಿಸಿದೆ.

ಭಾರತದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡೂ ಬಲಿಷ್ಠ. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಕೊನೆಯ 2 ಪಂದ್ಯಗಳಲ್ಲಿ ವಿಫ‌ಲರಾದರೂ ದೀಪ್ತಿ ಶರ್ಮ, ಮಿಥಾಲಿ ರಾಜ್‌ ಸೇರಿಕೊಂಡು ಪರಿಸ್ಥಿತಿಯನ್ನು ಸಮರ್ಥ ರೀತಿಯಲ್ಲೇ ನಿಭಾಯಿಸಿದ್ದಾರೆ. ಮಧ್ಯಮ-ಕೆಳ ಕ್ರಮಾಂಕದಲ್ಲಿ ವೇದಾ ಕೃಷ್ಣಮೂರ್ತಿ, ಹರ್ಮನ್‌ಪ್ರೀತ್‌ ಕೌರ್‌ ತಂಡದ ನೆರವಿಗೆ ನಿಲ್ಲಬಲ್ಲರು. ಬೌಲಿಂಗ್‌ ವಿಭಾಗ ಏಕ್ತಾ ಬಿಷ್ಟ್, ಪೂನಂ ಯಾದವ್‌, ಜೂಲನ್‌ ಗೋಸ್ವಾಮಿ ಅವರನ್ನು ನೆಚ್ಚಿಕೊಂಡಿದೆ.

ನಿಯಂತ್ರಿತ ಬೌಲಿಂಗ್‌; ನೀಕರ್ಕ್‌
ವೆಸ್ಟ್‌ ಇಂಡೀಸನ್ನು 48 ರನ್ನಿಗೆ ಉಡಾಯಿಸಿದ ಬಳಿಕ ಹರಿಣಗಳ ಬೌಲಿಂಗ್‌ ಇಂಗ್ಲೆಂಡ್‌ ವಿರುದ್ಧ ಹಳಿ ತಪ್ಪಿತ್ತು. ಅಲ್ಲಿ 373 ರನ್‌ ಸೋರಿ ಹೋಗಿತ್ತು. ಇನ್ನು ಇಂಥ ಧಾರಾಳತನಕ್ಕೆ ಅವಕಾಶ ಇಲ್ಲ ಎಂದಿದ್ದಾರೆ ನಾಯಕಿ ಡೇನ್‌ ವಾನ್‌ ನೀಕರ್ಕ್‌.

ಟಾಪ್ ನ್ಯೂಸ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

PV Sindhu Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು!

PV Sindhu Marriage: ಪಿ.ವಿ. ಸಿಂಧು ವಿವಾಹ ಆರತಕ್ಷತೆ ಶುಭ ಸಮಾರಂಭ

ICC-Champ

Champions Trophy: ಕೊನೆಗೂ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.