ಗಾಲೆ: ಭಾರತಕ್ಕೆ ಬೃಹತ್ ಗೆಲುವು
Team Udayavani, Jul 30, 2017, 6:50 AM IST
ಗಾಲೆ: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತ ತಂಡವು ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕಾ ತಂಡವನ್ನು 304 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಕೊಲಂಬೋದಲ್ಲಿ ಆ. 3ರಿಂದ 7ರ ವರೆಗೆ ನಡೆಯಲಿದೆ.
ಗೆಲ್ಲಲು 550 ರನ್ ಗಳಿಸುವ ಅಸಾಧ್ಯ ಗುರಿ ಪಡೆದ ಶ್ರೀಲಂಕಾ ತಂಡವು ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ದಾಳಿಗೆ ನೆಲಕಚ್ಚಿ ನಾಲ್ಕನೇ ದಿನವೇ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 245 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ ಎರಡು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಲಂಕಾ ವಿರುದ್ದ ನಡೆದ ಟೆಸ್ಟ್‌ನಲ್ಲಿನ ಆಘಾತಕಾರಿ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದರೂ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡು 63 ರನ್ನುಗಳಿಂದ ಸೋತಿತ್ತು.
ಈ ಮೊದಲು ನಾಯಕ ವಿರಾಟ್ ಕೊಹ್ಲಿ ಅವರ 17ನೇ ಟೆಸ್ಟ್ ಶತಕದ ನೆರವಿನಿಂದ ಭಾರತ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟಿಗೆ 240 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತಲ್ಲದೇ ಲಂಕಾ ಗೆಲುವಿಗೆ 550 ರನ್ ಗಳಿಸುವ ಗುರಿ ನಿಗದಿಪಡಿಸಿತ್ತು.
ಇದು ರನ್ ಅಂತರದಲ್ಲಿ ವಿದೇಶದಲ್ಲಿ ಭಾರತದ ಬಲುದೊಡ್ಡ ಗೆಲುವು ಆಗಿದೆ. 1986ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 279 ರನ್ನುಗಳಿಂದ ಗೆದ್ದಿರುವುದು ಈ ಹಿಂದಿನ ದೊಡ್ಡ ಗೆಲುವು ಆಗಿತ್ತು. ಶ್ರೀಲಂಕಾಕ್ಕೆ ಕೂಡ ಇದು ರನ್ ಅಂತರದಲ್ಲಿ ಬಲುದೊಡ್ಡ ಸೋಲು ಆಗಿದೆ. 1994ರಲ್ಲಿ ಪಾಕಿಸ್ಥಾನ ವಿರುದ್ಧ 3-1 ರನ್ನಿನಿಂದ ಸೋತಿರುವುದು ಈ ಹಿಂದಿನ ದೊಡ್ಡ ಸೋಲು ಆಗಿತ್ತು.
ಗುಣರತ್ನೆ ಹೋರಾಟ
ಗೆಲ್ಲಲು ಕಠಿನ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ದಿಮುತ್ ಗುಣರತ್ನೆ ಆಧಾರವಾಗಿದ್ದರು. ಅವರ ಹೋರಾಟದ 97 ರನ್ನಿನಿಂದಾಗಿ ಶ್ರೀಲಂಕಾ ಬೇಗನೇ ಕುಸಿಯುವುದು ತಪ್ಪಿತು. ಕುಸಲ್ ಮೆಂಡಿಸ್ ಮತ್ತು ನಿರೋಶಾನ್ ಡಿಕ್ವೆಲ್ಲ ಅವರ ಜತೆ ಎರಡು ಉತ್ತಮ ಜತೆಯಾಟದಲ್ಲಿ ಪಾಲ್ಗೊಂಡ ಗುಣರತ್ನೆ ಎರಡು ಅವಧಿಯ ಆಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರಿಂದಾಗಿ ಶ್ರೀಲಂಕಾ ಟೀ ವಿರಾಮದ ವೇಳೆಗೆ 4 ವಿಕೆಟಗೆ 192 ರನ್ ತಲುಪಿತ್ತು.
ಟೀ ಬಳಿಕ ಗುಣರತ್ನೆ ಅವರನ್ನು ಅಶ್ವಿನ್ ಉರುಳಿಸಿದ ಬಳಿಕ ಶ್ರೀಲಂಕಾ ಹಠಾತ್ ಕುಸಿಯಿತಲ್ಲದೇ 245 ರನ್ನಿಗೆ ಆಲೌಟಾಯಿತು. ಮೆಂಡಿಸ್ ಜತೆ 3ನೇ ವಿಕೆಟಿಗೆ 79 ಮತ್ತು ಡಿಕ್ವೆಲ್ಲ ಜತೆ 5ನೇ ವಿಕೆಟಿಗೆ 101 ರನ್ನುಗಳ ಜತೆಯಾಟ ನಡೆಸಿದ್ದ ಗುಣರತ್ನೆ ಒಟ್ಟಾರೆ 208 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 97 ರನ್ ಗಳಿಸಿ ಔಟಾದರು. ಕೇವಲ 3 ರನ್ನಿನಿಂದ ಶತಕ ದಾಖಲಿಸಲು ಅವರು ವಿಫಲರಾದರು. ಕುಸಲ್ ಮೆಂಡಿಸ್ 36 ಮತ್ತು ಡಿಕ್ವೆಲ್ಲ 67 ರನ್ ಹೊಡೆದರು.
ಬಿಗು ದಾಳಿ ಸಂಘಟಿಸಿದ ಆರ್. ಅಶ್ವಿನ್ 65 ರನ್ನಿಗೆ 3 ಮತ್ತು ರವೀಂದ್ರ ಜಡೇಜ 71 ರನ್ನಿಗೆ 3 ವಿಕೆಟ್ ಉರುಳಿಸಿದರು.
ಕೊಹ್ಲಿ 17ನೇ ಶತಕ
ಈ ಮೊದಲು ನಾಯಕ ಕೊಹ್ಲಿ ಟೆಸ್ಟ್‌ನಲ್ಲಿ 17ನೇ ಶತಕ ಬಾರಿಸಿದ ಬಳಿಕ ಭಾರತ ತನ್ನ ದ್ವಿತೀಯ ಇನ್ನಿಂಗÕನ್ನು ಡಿಕ್ಲೇರ್ ಮಾಡಿಕೊಂಡಿತು. ಮೂರು ವಿಕೆಟಗೆ 183 ರನ್ನಿನಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಶೀಘ್ರ 51 ರನ್ ಪೇರಿಸಿ 3 ವಿಕೆಟಿಗೆ 240 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತಲ್ಲದೇ ಶ್ರೀಲಂಕಾ ಗೆಲುವಿಗೆ 550 ರನ್ನುಗಳ ಕಠಿನ ಗುರಿಯನ್ನು ನಿಗದಿಪಡಿಸಿತು.
ದಿನದಾಟ ಆರಂಭಿಸಿದ ಕೊಹ್ಲಿ ಮತ್ತು ರಹಾನೆ ಶೀಘ್ರ ರನ್ ಪೇರಿಸಲು ತೊಡಗಿದರು. ಲಂಕೆಗೆ ಗೆಲುವಿನ ಗುರಿ ನೀಡುವ ಮೊದಲು ಕೊಹ್ಲಿ ಶತಕ ದಾಖಲಿಸಲು ಭಾರತ ಕಾಯುತ್ತಿತ್ತು. ಹಾಗಾಗಿ ಹೆಚ್ಚಿನ ಸಮಯ ವ್ಯರ್ಥ ಮಾಡದ ಕೊಹ್ಲಿ ದಿನದ ಆರನೇ ಓವರಿನಲ್ಲಿ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದರು. 136 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 103 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೊಹ್ಲಿ ತನ್ನ 58ನೇ ಟೆಸ್ಟ್‌ನಲ್ಲಿ 17 ಶತಕ ಸಿಡಿಸಿದ ಸಾಧನೆಗೈದರಲ್ಲದೇ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ (115 ಟೆಸ್ಟ್) ಮತ್ತು ವಿವಿಎಸ್ ಲಕ್ಷ್ಮಣ್ (134 ಟೆಸ್ಟ್) ಅವರ ಸಾಧನೆ ಸಮಬಲಗೊಳಿಸಿದರು. ವೆಂಗ್‌ಸರ್ಕಾರ್ ಮತ್ತು ಲಕ್ಷ್ಮಣ್ ಕೂಡ 17 ಶತಕ ಸಿಡಿಸಿದ್ದಾರೆ. ಆದರೆ ಅವರಿಬ್ಬರು ನೂರಕ್ಕಿಂತ ಹೆಚಿjನ ಟೆಸ್ಟ್ ಆಡಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ಮತ್ತು ರಹಾನೆ ನಾಲ್ಕನೇ ವಿಕೆಟಿಗೆ 51 ರನ್ ಪೇರಿಸುವ ಮೂಲಕ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 2 ಸಾವಿರ ಪ್ಲಸ್ ಪೇರಿಸಿದ 14ನೇ ಜೋಡಿ ಎನಿಸಿಕೊಂಡಿದ್ದಾರೆ. ಕೊಹ್ಲಿ ವಿದೇಶದಲ್ಲಿ ಒಂದು ಸಾವಿರ ಟೆಸ್ಟ್ ರನ್ ಗಳಿಸಿದ ಅತೀ ವೇಗದ ನಾಯಕರಾಗಿದ್ದಾರೆ. ಅವರು 17 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ ಸಚಿನ್ ತೆಂಡುಲ್ಕರ್ ಈ ಹಿಂದೆ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಆಡಿದ್ದರು.
ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್: 600
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 291
ಭಾರತ ದ್ವಿತೀಯ ಇನ್ನಿಂಗ್ಸ್
(ಮೂರನೇ ದಿನ 3 ವಿಕೆಟಿಗೆ 189)
ವಿರಾಟ್ ಕೊಹ್ಲಿ ಔಟಾಗದೆ 103
ಅಜಿಂಕ್ಯ ರಹಾನೆ ಔಟಾಗದೆ 23
ಇತರ: 4
ಒಟ್ಟು (ಮೂರು ವಿಕೆಟಿಗೆ ಡಿಕ್ಲೇರ್) 240
ವಿಕೆಟ್ ಪತನ: 1-19, 2-56, 3-189
ಬೌಲಿಂಗ್:
ನುವಾನ್ ಪ್ರದೀಪ್ 12-2-63-0
ದಿಲುÅವಾನ್ ಪೆರೆರ 15-0-67-1
ಲಹಿರು ಕುಮಾರ 12-1-59-1
ರಂಗನ ಹೆರಾತ್ 9-0-34-0
ದನುಷ್ಕ ಗುಣತಿಲಕ 5-0-16-1
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಬಿ ಅಶ್ವಿನ್ 97
ಉಪುಲ್ ತರಂಗ ಬಿ ಮೊಹಮ್ಮದ್ ಶಮಿ 10
ದನುಷ್ಕ ಗುಣತಿಲಕ ಸಿ ಪೂಜಾರ ಬಿ ಯಾದವ್ 2
ಕುಶಲ್ ಮೆಂಡಿಸ್ ಸಿ ಸಾಹ ಬಿ ಜಡೇಜ 36
ಏ. ಮ್ಯಾಥ್ಯೂಸ್ ಸಿ ಪಾಂಡ್ಯ ಬಿ ಜಡೇಜ 2
ನಿರೋಶಾನ್ ಡಿಕ್ವೆಲ್ಲ ಸಿ ಸಾಹ ಬಿ ಅಶ್ವಿನ್ 67
ದಿಲುÅವಾನ್ ಪೆರೆರ ಔಟಾಗದೆ 21
ನುವಾನ್ ಪ್ರದೀಪ್ ಸಿ ಕೊಹ್ಲಿ ಬಿ ಅಶ್ವಿನ್ 0
ಲಹಿರು ಕುಮಾರ ಸಿ ಶಮಿ ಬಿ ಜಡೇಜ 0
ಇತರ; 10
ಒಟ್ಟು (ಆಲೌಟ್) 245
ವಿಕೆಟ್ ಪತನ: 1-22, 2-29, 3-108, 4-116, 5-217, 6-240, 7-240, 8-245
ಬೌಲಿಂಗ್:
ಮೊಹಮ್ಮದ್ ಶಮಿ 9-0-43-1
ಉಮೇಶ್ ಯಾದವ್ 9-0-42-1
ರವೀಂದ್ರ ಜಡೇಜ 24.5-4-71-3
ಆರ್. ಅಶ್ವಿನ್ 27-4-66-3
ಹಾರ್ದಿಕ್ ಪಾಂಡ್ಯ 7-0-21-0
ಪಂದ್ಯಶ್ರೇಷ್ಠ: ಶಿಖರ್ ಧವನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.