ಕೊಲಂಬೊ ಟೆಸ್ಟ್‌: ಭಾರತ ಮತ್ತೆ 600; ಲಂಕೆಗೆ ಮತ್ತೆ ಆಪತ್ತು


Team Udayavani, Aug 5, 2017, 6:45 AM IST

AP8_4_2017_000152B.jpg

ಕೊಲಂಬೊ: ಶ್ರೀಲಂಕಾ ವಿರುದ್ಧ ಸತತ 2 ಪಂದ್ಯಗಳಲ್ಲಿ 600 ರನ್‌ ರಾಶಿ ಹಾಕಿದ ಪ್ರವಾಸಿ ಭಾರತ ತಂಡ ಕೊಲಂಬೊ ಟೆಸ್ಟ್‌ನಲ್ಲಿ ಭರ್ಜರಿ ಮೇಲುಗೈ ಸಾಧಿಸುವತ್ತ ನಾಗಾಲೋಟಗೈಯುತ್ತಿದೆ. 2 ಶತಕ, 4 ಅರ್ಧ ಶತಕಗಳ ನೆರವಿನೊಂದಿಗೆ 9ಕ್ಕೆ 622 ರನ್‌ ಪೇರಿಸಿದ ಟೀಮ್‌ ಇಂಡಿಯಾ, ಬಳಿಕ ಲಂಕೆಯ 2 ವಿಕೆಟ್‌ಗಳನ್ನು 50 ರನ್ನಿಗೆ ಉಡಾಯಿಸಿದೆ.

ಭಾರತದ ಮೊತ್ತವನ್ನು ಸರಿದೂಗಿಸಲು ಇನ್ನೂ 572 ರನ್‌ ಪೇರಿಸಬೇಕಿರುವ ಶ್ರೀಲಂಕಾ, ಫಾಲೋಆನ್‌ನಿಂದ ಪಾರಾಗಲು ಒಟ್ಟು 422 ರನ್‌ ಗಳಿಸಬೇಕಾದ ಒತ್ತಡಲ್ಲಿದೆ. 3ನೇ ದಿನವಾದ ಶನಿವಾರ ಆತಿಥೇಯರು ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫ‌ಲರಾದರೆ ಗಾಲೆ ಟೆಸ್ಟ್‌ ಪಂದ್ಯದ ಫ‌ಲಿತಾಂಶ ಪುನರಾವರ್ತನೆಯಾಗುವುದರಲ್ಲಿ ಅನುಮಾನವಿಲ್ಲ. ಫಾಲೋಆನ್‌ ಹೇರದೆಯೂ ಭಾರತವಿಲ್ಲಿ ಗೆದ್ದು, ಸರಣಿ ವಶಪಡಿಸಿಕೊಳ್ಳುವ ಅವಕಾಶ ಮುಕ್ತವಾಗಿದೆ.

ಈಗಾಗಲೇ ಕೊಲಂಬೊ ಟ್ರ್ಯಾಕ್‌ ತಿರುವು ಪಡೆಯುವ ಸೂಚನೆ ನೀಡಿದ್ದು, ಅಶ್ವಿ‌ನ್‌-ಜಡೇಜ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಸುಲಭವಲ್ಲ ಎಂದೇ ಭಾವಿಸಲಾಗಿದೆ. ಮೊಹಮ್ಮದ್‌ ಶಮಿ ಜತೆ ಅಶ್ವಿ‌ನ್‌ ಬೌಲಿಂಗ್‌ ಆರಂಭಿಸಿದ್ದು, ಇದು ಆತಿಥೇಯರಿಗೆ ಭಾರೀ ಕಂಟಕವಾಗಿ ಪರಿಣಮಿಸಿದೆ. ಭರವಸೆಯ ಆರಂಭಕಾರ ಉಪುಲ್‌ ತರಂಗ (0) ಅವರನ್ನು ಅಶ್ವಿ‌ನ್‌ ತಮ್ಮ ಮೊದಲ ಓವರಿನಲ್ಲೇ ಪೆವಿಲಿಯನ್ನಿಗೆ ಅಟ್ಟಿದ್ದು, ಬಳಿಕ 33ರ ಮೊತ್ತದಲ್ಲಿ ಮತ್ತೂಬ್ಬ ಓಪನರ್‌ ದಿಮುತ್‌ ಕರುಣರತ್ನೆ (25) ಅವರ ವಿಕೆಟನ್ನೂ ಹಾರಿಸಿದ್ದಾರೆ. ಕುಸಲ್‌ ಮೆಂಡಿಸ್‌ 16 ರನ್‌ ಹಾಗೂ ನಾಯಕ ದಿನೇಶ್‌ ಚಂಡಿಮಾಲ್‌ 8 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತ ಒಟ್ಟು 20 ಓವರ್‌ ದಾಳಿ ನಡೆಸಿದ್ದು, ಇನ್ನೂ ಉಮೇಶ್‌ ಯಾದವ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅವರನ್ನು ಬೌಲಿಂಗಿಗೆ ಇಳಿಸಿಲ್ಲ.

ಪೂಜಾರ, ರಹಾನೆ ತ್ವರಿತ ನಿರ್ಗಮನ
3 ವಿಕೆಟಿಗೆ 344 ರನ್‌ ಗಳಿಸಿದಲ್ಲಿಂದ ಶುಕ್ರವಾರದ ಆಟ ಆರಂಭಿಸಿದ ಭಾರತ, ಚಹಾ ವಿರಾಮ ಕಳೆದ ಬಳಿಕ 9ಕ್ಕೆ 622 ರನ್‌ ಮಾಡಿ ಡಿಕ್ಲೇರ್‌ ಮಾಡಿತು. ಶತಕವೀರರಾದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಮೊದಲ ಅವಧಿಯಲ್ಲೇ ಔಟಾದರು. 128 ರನ್‌ ಮಾಡಿದ್ದ ಪೂಜಾರ ತಮ್ಮ ಮೊತ್ತಕ್ಕೆ ಪೇರಿಸಿದ್ದು 5 ರನ್‌ ಮಾತ್ರ. ಒಟ್ಟು 133 ರನ್‌ ಮಾಡಿ ಕರುಣರತ್ನೆ ಅವರಿಗೆ ಲೆಗ್‌ ಬಿಫೋರ್‌ ಆದರು. ಆಗ ಮೊತ್ತ ಭರ್ತಿ 350 ರನ್‌ ಆಗಿತ್ತು. 232 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. 4ನೇ ವಿಕೆಟಿಗೆ ಒಟ್ಟುಗೂಡಿದ ರನ್‌ 217.103 ರನ್‌ ಮಾಡಿ ಆಡುತ್ತಿದ್ದ ಅಜಿಂಕ್ಯ ರಹಾನೆ 132ರ ತನಕ ಸಾಗಿದರು. ಪುಷ್ಪಕುಮಾರ ಅವರ ಎಸೆತವೊಂದನ್ನು ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪ್ಡ್ ಆದರು. ಅವರ 222 ಎಸೆತಗಳ ಬ್ಯಾಟಿಂಗ್‌ ವೇಳೆ ಚೆಂಡು 14 ಸಲ ಬೌಂಡರಿ ಗೆರೆ ದಾಟಿತ್ತು.

ಅಶ್ವಿ‌ನ್‌, ಸಾಹಾ, ಜಡೇಜ ಫಿಫ್ಟಿ
ಪೂಜಾರ ಮತ್ತು ರಹಾನೆ ಬೇಗ ನಿರ್ಗಮಿಸಿದ್ದನ್ನು ಕಂಡಾಗ ಭಾರತ 600ರ ಗಡಿ ದಾಟೀತೆಂದು ಯಾರೂ ಭಾವಿಸಿರಲಿಲ್ಲ. ಆದರೆ ಸ್ಪಿನ್‌ದ್ವಯರಾದ ಅಶ್ವಿ‌ನ್‌, ಜಡೇಜ ಹಾಗೂ ಕೀಪರ್‌ ಸಾಹಾ ಕೂಡ ಲಂಕಾ ಬೌಲರ್‌ಗಳನ್ನು ಬೆದರಿಸುತ್ತ ಸಾಗಿದರು; ಇವರೆಲ್ಲರೂ ಅರ್ಧ ಶತಕ ದಾಖಲಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಪಾಂಡ್ಯ ಎಸೆತಕ್ಕೊಂದರಂತೆ 20 ರನ್‌, ಶಮಿ ಎಂಟೇ ಎಸೆತಗಳಿಂದ 19 ರನ್‌ ಮಾಡಿದರು.

ಅಶ್ವಿ‌ನ್‌ ಗಳಿಕೆ 92 ಎಸೆತಗಳಿಂದ 54 ರನ್‌ (5 ಬೌಂಡರಿ, 1 ಸಿಕ್ಸರ್‌). ಇದು ಅವರ 11ನೇ ಶತಕಾರ್ಧ. ಈ ಅವಧಿಯಲ್ಲಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರ್ತಿಗೊಳಿಸಿದರು. ಜತೆಗೆ 2 ಸಾವಿರ ರನ್‌, 200 ವಿಕೆಟ್‌ ಸಾಧನೆಗೈದ ಭಾರತದ 4ನೇ ಕ್ರಿಕೆಟಿಗನೆನಿಸಿ ಕಪಿಲ್‌ದೇವ್‌, ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌ ಸಾಲಿನಲ್ಲಿ ಕಾಣಿಸಿಕೊಂಡರು.

ಕೀಪರ್‌ ಸಾಹಾ ಅವರ 134 ಎಸೆತಗಳ ಇನ್ನಿಂಗ್ಸ್‌ ವೇಳೆ 67 ರನ್‌ ಹರಿದು ಬಂತು (4 ಬೌಂಡರಿ, 1 ಸಿಕ್ಸರ್‌). ಎಡಗೈ ಆಟಗಾರ ಜಡೇಜ ಬಿರುಸಿನ ಆಟಕ್ಕಿಳಿದು ರನ್‌ಗತಿಯನ್ನು ಏರಿಸತೊಡಗಿದರು. ಕೊಹ್ಲಿ ಡಿಕ್ಲೇರ್‌ ಮಾಡುವಾಗ ಜಡೇಜ 70ರಲ್ಲಿ ಅಜೇಯರಾಗಿದ್ದರು. ಎದುರಿಸಿದ್ದು 85 ಎಸೆತ, ಸಿಡಿಸಿದ್ದು 3 ಸಿಕ್ಸರ್‌ ಹಾಗೂ 4 ಬೌಂಡರಿ.

ಶ್ರೀಲಂಕಾ ಪರ ರಂಗನ ಹೆರಾತ್‌ 4 ವಿಕೆಟ್‌ ಕಿತ್ತರೂ ಇದಕ್ಕಾಗಿ 154 ರನ್‌ ಬಿಟ್ಟುಕೊಟ್ಟರು. “ಶತಕ’ ದಾಖಲಿಸಿದ ಮತ್ತಿಬ್ಬರು ಬೌಲರ್‌ಗಳೆಂದರೆ ಪುಷ್ಪಕುಮಾರ (156ಕ್ಕೆ 2) ಮತ್ತು ದಿಲುÅವಾನ್‌ ಪೆರೆರ (147ಕ್ಕೆ 1).

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌

(ನಿನ್ನೆ 3 ವಿಕೆಟಿಗೆ 344)
ಚೇತೇಶ್ವರ್‌ ಪೂಜಾರ    ಎಲ್‌ಬುಡಬ್ಲ್ಯು ಕರುಣರತ್ನೆ    133
ಅಜಿಂಕ್ಯ ರಹಾನೆ    ಸ್ಟಂಪ್ಡ್ ಡಿಕ್ವೆಲ್ಲ ಬಿ ಪುಷ್ಪಕುಮಾರ    132
ಆರ್‌. ಅಶ್ವಿ‌ನ್‌    ಬಿ ಹೆರಾತ್‌    54
ವೃದ್ಧಿಮಾನ್‌ ಸಾಹಾ    ಸ್ಟಂಪ್ಡ್ ಡಿಕ್ವೆಲ್ಲ ಬಿ ಹೆರಾತ್‌    67
ಹಾರ್ದಿಕ್‌ ಪಾಂಡ್ಯ    ಸಿ ಮ್ಯಾಥ್ಯೂಸ್‌ ಬಿ ಪುಷ್ಪಕುಮಾರ    20
ರವೀಂದ್ರ ಜಡೇಜ    ಔಟಾಗದೆ    70
ಮೊಹಮ್ಮದ್‌ ಶಮಿ    ಸಿ ತರಂಗ ಬಿ ಹೆರಾತ್‌    19
ಉಮೇಶ್‌ ಯಾದವ್‌    ಔಟಾಗದೆ    8
ಇತರ        14
ಒಟ್ಟು  (9 ವಿಕೆಟಿಗೆ ಡಿಕ್ಲೇರ್‌)        622
ವಿಕೆಟ್‌ ಪತನ: 4-350, 5-413, 6-451, 7-496, 8-568, 9-598.
ಬೌಲಿಂಗ್‌:
ನುವಾನ್‌ ಪ್ರದೀಪ್‌        17.4-2-63-0
ರಂಗನ ಹೆರಾತ್‌        42-7-154-4
ದಿಮುತ್‌ ಕರುಣರತ್ನೆ        8-0-31-1
ದಿಲುÅವಾನ್‌ ಪೆರೆರ        40-3-147-1
ಮಲಿಂದ ಪುಷ್ಪಕುಮಾರ        38.2-2-156-2
ಧನಂಜಯ ಡಿ’ಸಿಲ್ವ        12-0-59-0

ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌
ದಿಮುತ್‌ ಕರುಣರತ್ನೆ    ಸಿ ರಹಾನೆ ಬಿ ಅಶ್ವಿ‌ನ್‌    25
ಉಪುಲ್‌ ತರಂಗ    ಸಿ ರಾಹುಲ್‌ ಬಿ ಅಶ್ವಿ‌ನ್‌    0
ಕುಸಲ್‌ ಮೆಂಡಿಸ್‌    ಬ್ಯಾಟಿಂಗ್‌    16
ದಿನೇಶ್‌ ಚಂಡಿಮಾಲ್‌    ಬ್ಯಾಟಿಂಗ್‌    8
ಇತರ        1
ಒಟ್ಟು  (2 ವಿಕೆಟಿಗೆ)        50
ವಿಕೆಟ್‌ ಪತನ: 1-0, 2-33.
ಬೌಲಿಂಗ್‌:
ಮೊಹಮ್ಮದ್‌ ಶಮಿ        3-1-7-0
ಆರ್‌. ಅಶ್ವಿ‌ನ್‌        10-2-38-2
ರವೀಂದ್ರ ಜಡೇಜ        7-4-4-0

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತ 9ಕ್ಕೆ 622 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಇದು ಶ್ರೀಲಂಕಾದಲ್ಲಿ ವಿದೇಶಿ ತಂಡವೊಂದರ 3ನೇ ಅತ್ಯಧಿಕ ಗಳಿಕೆ. ಇದರ ದಾಖಲೆ ಕೂಡ ಭಾರತದ ಹೆಸರಲ್ಲೇ ಇದೆ. 2010ರ ಪ್ರವಾಸದ ವೇಳೆ ಇದೇ ಅಂಗಳದಲ್ಲಿ ಭಾರತ 707 ರನ್‌ ಸೂರೆಗೈದಿತ್ತು. 2012-13ರ ಗಾಲೆ ಟೆಸ್ಟ್‌ನಲ್ಲಿ 638 ರನ್‌ ಮಾಡಿದ ಬಾಂಗ್ಲಾದೇಶಕ್ಕೆ ದ್ವಿತೀಯ ಸ್ಥಾನ.

ವಿದೇಶಿ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಭಾರತದ 6 ಮಂದಿ ಆಟಗಾರರು 2ನೇ ಸಲ 50 ಪ್ಲಸ್‌ ರನ್‌ ಹೊಡೆದರು. ಇಂಗ್ಲೆಂಡ್‌ ಎದುರಿನ 2007ರ ಓವಲ್‌ ಟೆಸ್ಟ್‌ನಲ್ಲಿ ಮೊದಲ ಸಲ ಇಂಥ ಸಾಧನೆ ದಾಖಲಾಗಿತ್ತು.

ಆರ್‌. ಅಶ್ವಿ‌ನ್‌ ಅತ್ಯಂತ ಕಡಿಮೆ ಟೆಸ್ಟ್‌ಗಳಲ್ಲಿ 2 ಸಾವಿರ ರನ್‌ ಹಾಗೂ 250 ವಿಕೆಟ್‌ ಪೂರ್ತಿಗೊಳಿಸಿದ ಕ್ರಿಕೆಟಿಗನೆನಿಸಿದರು. ಇದು ಅವರ 51ನೇ ಟೆಸ್ಟ್‌. ಇದಕ್ಕೂ ಮುನ್ನ ರಿಚರ್ಡ್‌ ಹ್ಯಾಡ್ಲಿ 54ನೇ ಟೆಸ್ಟ್‌ನಲ್ಲಿ, ಇಯಾಮ್‌ ಬೋಥಂ ಮತ್ತು ಇಮ್ರಾನ್‌ ಖಾನ್‌ 55ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು.

ಆರ್‌. ಅಶ್ವಿ‌ನ್‌ 11ನೇ ಹಾಗೂ ಶ್ರೀಲಂಕಾ ವಿರುದ್ಧ 2ನೇ ಅರ್ಧ ಶತಕ ಹೊಡೆದರು (54). 2015ರ ಕೊಲಂಬೊ ಟೆಸ್ಟ್‌ನಲ್ಲಿ (ಎಸ್‌ಎಸ್‌ಸಿ) 58 ರನ್‌ ಬಾರಿಸಿದ್ದು ಲಂಕಾ ವಿರುದ್ಧ ಅಶ್ವಿ‌ನ್‌ ಅವರ ಅತ್ಯಧಿಕ ಗಳಿಕೆಯಾಗಿದೆ.

2015ರ ಬಳಿಕ 6ನೇ ಹಾಗೂ ಇದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ವೇಳೆ ಅಶ್ವಿ‌ನ್‌ ಹೊಡೆದ 10ನೇ 50 ಪ್ಲಸ್‌ ಮೊತ್ತ ಇದಾಗಿದೆ. ಇಂಗ್ಲೆಂಡಿನ ಬೆನ್‌ ಸ್ಟೋಕ್ಸ್‌ (13), ಜಾನಿ ಬೇರ್‌ಸ್ಟೊ (11) ಮೊದಲೆರಡು ಸ್ಥಾನದಲ್ಲಿದ್ದಾರೆ.

ವೃದ್ಧಿಮಾನ್‌ ಸಾಹಾ 5ನೇ ಹಾಗೂ ಶ್ರೀಲಂಕಾ ವಿರುದ್ಧ 3ನೇ ಅರ್ಧ ಶತಕ ಹೊಡೆದರು (67). ಇದು ಲಂಕಾ ವಿರುದ್ಧ ಸಾಹಾ ತೋರ್ಪಡಿಸಿದ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ.

ರವೀಂದ್ರ ಜಡೇಜ 8ನೇ ಹಾಗೂ ಶ್ರೀಲಂಕಾ ವಿರುದ್ಧ ಮೊದಲ ಅರ್ಧ ಶತಕ ಬಾರಿಸಿದರು (ಅಜೇಯ 70).

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.