ಇಂದು ದ್ವಿತೀಯ ಏಕದಿನ: ಸರಣಿ ಮೇಲೆ ಕೌರ್ ಪಡೆಯ ಕಣ್ಣು
Team Udayavani, Jul 4, 2022, 6:45 AM IST
ಪಲ್ಲೆಕೆಲೆ: ದ್ವೀಪರಾಷ್ಟ್ರ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಭಾರತದ ವನಿತೆಯರಿಗೆ ಇದೀಗ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಅವಕಾಶ.
ಸೋಮವಾರ ಪಲ್ಲೆಕೆಲೆಯಲ್ಲಿ ದ್ವಿತೀಯ ಏಕದಿನ ನಡೆಯಲಿದ್ದು, ಇದನ್ನು ಗೆಲ್ಲುವುದು ಹರ್ಮನ್‌ಪ್ರೀತ್ ಕೌರ್ ಬಳಗದ ಗುರಿ. ಇನ್ನೊಂದೆಡೆ ತವರಿನ ಪಡೆಗೆ ಮತ್ತೂಂದು ಮುಖಭಂಗದಿಂದ ಪಾರಾಗಲೇಬೇಕಾದ ಪರಿಸ್ಥಿತಿ. ಹೀಗಾಗಿ ಈ ಪಂದ್ಯ ಗೆದ್ದು ಸರಣಿಯನ್ನು ಜೀವಂತವಾಗಿರಿಸಲು ಗರಿಷ್ಠ ಪ್ರಯತ್ನ ನಡೆಸಲಿದೆ.
ಇಲ್ಲೇ ನಡೆದ ಮೊದಲ ಮುಖಾಮುಖಿಯನ್ನು ಭಾರತ 4 ವಿಕೆಟ್‌ಗಳಿಂದ ಜಯಿಸಿತ್ತು. ಆಗಿನ್ನೂ 72 ಎಸೆತಗಳು ಬಾಕಿ ಇದ್ದವು ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಈ ಅಧಿಕಾರಯುತ ಗೆಲುವಿನ ಹೊರತಾಗಿಯೂ ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಆಗಬೇಕಾಗಿರುವುದನ್ನು ಮರೆಯುವಂತಿಲ್ಲ.
ಭಾರತದ ಓಪನಿಂಗ್ ಇನ್ನಷ್ಟು ಬಲಿಷ್ಠಗೊಳ್ಳಬೇಕಿದೆ. ಸ್ಮತಿ ಮಂಧನಾ, ಶಫಾಲಿ ವರ್ಮ ಇಬ್ಬರೂ ಕ್ಲಿಕ್ ಆಗಬೇಕಿದೆ. ಮೊದಲ ಪಂದ್ಯದಲ್ಲಿ ಶಫಾಲಿ 35 ರನ್ ಬಾರಿಸಿದರೂ ಮಂಧನಾ ಮಿಂಚುವಲ್ಲಿ ವಿಫಲರಾಗಿ ದ್ದರು (4). ಯಾಸ್ತಿಕಾ ಭಾಟಿಯ ಆಟ ಒಂದೇ ರನ್ನಿಗೆ ಮುಗಿದಿತ್ತು. ಬಳಿಕ ಶಫಾಲಿ-ಕೌರ್ ಜೋಡಿಯ ಉಪಯುಕ್ತ ಜತೆಯಾಟ, ಹಲೀìನ್ ದೇವಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್, ದೀಪ್ತಿ ಶರ್ಮ-ಪೂಜಾ ವಸ್ತ್ರಾಕರ್ ಅವರ ಆಲ್‌ರೌಂಡ್ ಶೋ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಲಭಿಸಿದರೆ 220ರ ಗಡಿ ದಾಟುವುದಕ್ಕೆ ಆದ್ಯತೆ ನೀಡಬೇಕಿದೆ.
ಶ್ರೀಲಂಕಾವನ್ನು 170ರ ಗಡಿಯಲ್ಲಿ ನಿಲ್ಲಿಸುವಲ್ಲಿ ಭಾರತದ ಬೌಲರ್ ವಹಿಸಿದ ಪಾತ್ರ ಅಮೋಘ. ನಿಜಕ್ಕಾದರೆ ಇದು ಬೌಲರ್‌ಗಳದೇ ಪಂದ್ಯವಾಗಿತ್ತು. ರೇಣುಕಾ ಸಿಂಗ್, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್ ಘಾತಕ ದಾಳಿ ನಡೆಸಿ ಆತಿಥೇಯರನ್ನು ಕಟ್ಟಿ ಹಾಕಿದರು. ಬಳಿಕ ಬ್ಯಾಟಿಂಗ್‌ನಲ್ಲೂ ಮಿಂಚಿದ ದೀಪ್ತಿ, ಪೂಜಾ ಅಜೇಯರಾಗಿ ಉಳಿದು ಭಾರತದ ಗೆಲುವು ಸಾರಿದ್ದರು.
ಅತಪಟ್ಟು ಟಾರ್ಗೆಟ್
ಶ್ರೀಲಂಕಾದ ಬ್ಯಾಟಿಂಗ್ ಸರದಿ ನಾಯಕಿ ಚಾಮರಿ ಅತಪಟ್ಟು ಅವರನ್ನು ನೆಚ್ಚಿಕೊಂಡಿದೆ. ಇವರು ಸಿಡಿದು ನಿಂತರೆ ಏನಾಗುತ್ತದೆ, ಬೇಗನೇ ಔಟಾದರೆ ಏನಾಗುತ್ತದೆ ಎಂಬುದಕ್ಕೆ ಅಂತಿಮ ಟಿ20 ಮತ್ತು ಮೊದಲ ಏಕದಿನ ಪಂದ್ಯವೇ ಸಾಕ್ಷಿ. ಮೊನ್ನೆ ರೇಣುಕಾ ಸಿಂಗ್ ಎರಡೇ ರನ್ನಿಗೆ ಅತಪಟ್ಟು ಆಟ ಮುಗಿಸಿದ್ದರು. ಸೋಮವಾರವೂ ಅಷ್ಟೇ, ಅತಪಟ್ಟು ಅವರೇ ಭಾರತದ ಮೊದಲ ಟಾರ್ಗೆಟ್ ಆಗಿರಬೇಕು.
ಬೆಳಗ್ಗೆ 10 ಗಂಟೆಗೆ ಆರಂಭವಾಗಲಿ ರುವ ಈ ಪಂದ್ಯ, ಡಿಡಿ ಸ್ಪೋರ್ಟ್ಸ್ ಚಾನೆ ಲ್‌ನಲ್ಲಿ ನೇರ ಪ್ರಸಾರ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.