ಟಿ20: ಸಿಡಿದ ರೋಹಿತ್, ಕಾರ್ತಿಕ್: ವೆಸ್ಟ್ ಇಂಡೀಸ್‌ಗೆ 191 ರನ್ ಗುರಿ
Team Udayavani, Jul 29, 2022, 10:15 PM IST
ಟರೂಬ: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಒಂದನೇ ಟಿ20ಯಲ್ಲಿ ಭಾರತ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ ಅವರ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದ್ದರಿಂದ, 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 190 ರನ್ ಗಳಿಸಿತು. ಭಾರತ ಆರಂಭಿಕವಾಗಿ ರನ್ ಗಳಿಸುತ್ತಿದ್ದ ವೇಗ ನೋಡಿದಾಗ ಬೃಹತ್ ಮೊತ್ತ ಗಳಿಸುವುದು ಕಷ್ಟವೆಂದೇ ಭಾವಿಸಲಾಗಿತ್ತು. ಆದರೆ ಅಂತಿಮವಾಗಿ ದಿನೇಶ್ ಸ್ಫೋಟಿಸಿದ್ದು ತಂಡದ ನೆರವಿಗೆ ಬಂತು.
ಲಯ ಕಳೆದುಕೊಂಡು ಟೀಕೆಗೊಳಗಾಗಿದ್ದ ರೋಹಿತ್ ಇತ್ತೀಚೆಗೆ ಮತ್ತೆ ಎಂದಿನ ಬ್ಯಾಟಿಂಗ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನದಲ್ಲಿ 76 ರನ್ ಸಿಡಿಸಿದ್ದ ಅವರು, ಶುಕ್ರವಾರ ವಿಂಡೀಸ್ ವಿರುದ್ಧವೂ ಸಿಡಿದರು. 44 ಎಸೆತ ಎದುರಿಸಿದ ಅವರು 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿದರು. ಇದರೊಂದಿಗೆ ಸದ್ಯಕ್ಕೆ ಅವರು ತಮ್ಮ ಕಳಪೆ ಬ್ಯಾಟಿಂಗ್ ಚಿಂತೆಯಿಂದ ಪಾರಾಗಿದ್ದಾರೆ.
ಇನ್ನು ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ ಸಿಡಿದುನಿಂತರು. ಕೇವಲ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಕಾರ್ತಿಕ್ 41 ರನ್ ಗಳಿಸಿದರು. ಇದರೊಂದಿಗೆ ಅವರು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ 11ರ ಬಳಗದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರಂಭಿಕ ಸೂರ್ಯಕುಮಾರ್ ಯಾದವ್ 24ಕ್ಕೆ ಔಟಾದರು. ಶ್ರೇಯಸ್ ಐಯ್ಯರ್ ಸೊನ್ನೆ, ಹಾರ್ದಿಕ್ ಪಾಂಡ್ಯ 1, ಪಂತ್ 14 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನ ಒಡೀನ್ ಸ್ಮಿತ್‌ರನ್ನು ಬಿಟ್ಟರೆ ಎಲ್ಲರೂ ವಿಕೆಟ್ ಪಡೆದರು. ಅಲ್ಜಾರಿ ಜೋಸೆಫ್ 46 ರನ್ ನೀಡಿ 2 ವಿಕೆಟ್ ಪಡೆದು. ಉಳಿದವರು ತಲಾ 1 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್, 190/6 (ರೋಹಿತ್ ಶರ್ಮ 64, ದಿನೇಶ್ ಕಾರ್ತಿಕ್ 41, ಸೂರ್ಯಕುಮಾರ್ 24, ರವೀಂದ್ರ ಜಡೇಜ 16, ಅಲ್ಜಾರಿ ಜೋಸೆಫ್ 46ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.