ಭಾರತ-ವಿಂಡೀಸ್ ತಾರಾಬಲ ಪರೀಕ್ಷೆ!
Team Udayavani, Jul 9, 2017, 3:45 AM IST
ಕಿಂಗ್‌ಸ್ಟನ್: ಈಗಾಗಲೇ ಭಾರತ 3-1ರಿಂದ ಏಕದಿನ ಸರಣಿ ಗೆದ್ದಿರುವ ಭಾರತ ಭಾನುವಾರ ನಡೆಯಲಿರುವ ಏಕೈಕ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸನ್ನು ಎದುರಿಸಲಿದೆ. ಇದುವರೆಗಿನ ಲೆಕ್ಕಾಚಾರದ ಪ್ರಕಾರ ಭಾರತಕ್ಕೆ ವಿಂಡೀಸ್ ಸುಲಭದ ತುತ್ತಾಗಬೇಕಿತ್ತು. ಆದರೆ ಈ ಪಂದ್ಯಕ್ಕೆ ಕ್ರಿಸ್‌ಗೆàಲ್, ಕೈರನ್ ಪೊಲಾರ್ಡ್‌ರಂತಹ ದಿಗ್ಗಜರು ವಿಂಡೀಸ್ ನೆರವಿಗೆ ಧಾವಿಸುತ್ತಿದ್ದಾರೆ. ಇದು ಭಾರತಕ್ಕೆ ಪರಿಸ್ಥಿತಿಯನ್ನು ಕಠಿಣಗೊಳಿಸಿದೆ.
ಏಕದಿನ ಸರಣಿಯಲ್ಲಿ ಖ್ಯಾತ ಆಟಗಾರರ ಅನುಪಸ್ಥಿತಿಯಿಂದಾಗಿ ವೆಸ್ಟ್ ಇಂಡೀಸ್‌ನ ಕ್ಲಬ್ ಮಟ್ಟದ ತಂಡದಂತೆ ಕಂಡುಬರುತ್ತಿತ್ತು. ಈಗ ಪರಿಸ್ಥಿತಿ ಅದಲು ಬದಲಾಗಿದೆ.
ಕೊಹ್ಲಿ ಪಡೆ ಭದ್ರ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬಲಿಷ್ಠವಾಗಿದೆ. ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಅಜಿಂಕ್ಯ ರಹಾನೆ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೊಹ್ಲಿ ಕೂಡ 5ನೇ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿ ಫಾರ್ಮ್ ಸಾಬೀತು ಪಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಗ್ರೇಟ್ ಮ್ಯಾಚ್ ಫಿನಿಷರ್ ಎಂದೇ ಖ್ಯಾತಿ ಪಡೆದ ಎಂ.ಎಸ್.ಧೋನಿ ಮತ್ತು ಯುವರಾಜ್ ಸಿಂಗ್ ಆಧಾರವಾಗಬಲ್ಲರು. ರಿಷಭ್ ಪಂತ್ ಅಂತಿಮ 11ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗದಲ್ಲಿ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಉಮೇಶ್ ಯಾದವ್ ಮುಖ್ಯ ದಾಳಿಗಾರರಾಗಿ ಕಣಕ್ಕೆ ಇಳಿಯಬಹುದು. ಉಳಿದಂತೆ ವೇಗಿಗಳಾದ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ದಾಳಿ ನಡೆಸಲಿದ್ದಾರೆ. ಸ್ಪಿನ್ನರ್‌ಗಳಾದ ಆರ್.ಆಶ್ವಿನ್, ರವೀಂದ್ರ ಜಡೇಜ ದಾಳಿ ನಡೆಸಲಿದ್ದಾರೆ.
ವಿಂಡೀಸ್‌ಗೆ ಗೇಲ್, ಪೊಲಾರ್ಡ್ ಬಲ
ವಿಂಡೀಸ್ ತಂಡಕ್ಕೆ ಪ್ರಮುಖ ಶಕ್ತಿ ಕ್ರಿಸ್ ಗೇಲ್. ಇವರು ಕ್ರೀಸ್‌ನಲ್ಲಿ ನಿಂತರೆ ಎದುರಾಳಿ ಬೌಲರ್‌ಗಳ ಬೆವರಿಳಿಯುವುದು ಖಂಚಿತ. ಏಕದಿನ ಪಂದ್ಯದಲ್ಲಿ ಗೇಲ್ ಅನುಪಸ್ಥಿತಿ ತಂಡಕ್ಕಿತ್ತು. ಆದರೆ ಟಿ20ಗೆ ಅಂತಹ ಕೊರತೆ ಇಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಗೇಲ್, ಪೊಲಾರ್ಡ್, ಬ್ರಾಥ್‌ವೇಟ್, ಮರ್ಲಾನ್ ಸ್ಯಾಮ್ಯುಯೆಲ್ಸ್ ತಂಡಕ್ಕೆ ಮರಳಿರುವುದು ಆತ್ಮಶಕ್ತಿಯನ್ನು ಹೆಚ್ಚಿಸಿದೆ. ಬೌಲಿಂಗ್ ವಿಭಾಗದಲ್ಲಿ ಸುನೀಲ್ ನಾರಾಯಣ್, ಸ್ಯಾಮ್ಯುಯೆಲ್ ಬದ್ರಿ ಭರ್ಜರಿ ದಾಳಿ ನಡೆಸಬಲ್ಲರು. ಹೀಗಾಗಿ ವಿಂಡೀಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಆದರೆ ದೀರ್ಘಾವಧಿಯ ನಂತರ ಸ್ಟಾರ್ ಆಟಗಾರರು ತಂಡಕ್ಕೆ ಮರಳಿರುವುದರಿಂದ ಅವರ ಫಾರ್ಮ್ ಬಗ್ಗೆ ಖಚಿತತೆ ಇಲ್ಲ.
ಕೊಹ್ಲಿ ಆರಂಭಿಕರಾಗಿ ಕಣಕ್ಕೆ ಇಳೀತಾರಾ?
ವಿಂಡೀಸ್ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ರಹಾನೆ ಅಥವಾ ಶಿಖರ್ ಧವನ್ ಇಬ್ಬರಲ್ಲಿ ಒಬ್ಬರು ವಿಶ್ರಾಂತಿ ಪಡೆಯಲಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ ಹಲವು ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಯಶಸ್ಸು ಪಡೆದಿದ್ದಾರೆ. ಹೀಗಾಗಿ ಇನಿಂಗ್ಸ್ ಆರಂಭಿಸುವುದು ಹೊಸತಲ್ಲ.
ಮುಖಾಮುಖೀ
ಒಟ್ಟು ಪಂದ್ಯಗಳು 7
ಭಾರತ ಗೆಲುವು 2
ವಿಂಡೀಸ್ ಗೆಲುವು 4
ರದ್ದು 1
ಅಗ್ರ ತಾರೆಯರು
ಭಾರತ: ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಉಮೇಶ್ ಯಾದವ್,
ಆರ್.ಅಶ್ವಿನ್
ವೆಸ್ಟ್ ಇಂಡೀಸ್: ಕ್ರಿಸ್ ಗೇಲ್, ಕೈರನ್ ಪೊಲಾರ್ಡ್, ಮರ್ಲಾನ್ ಸ್ಯಾಮ್ಯುಯೆಲ್ಸ್, ಕಾರ್ಲೋಸ್ ಬ್ರಾಥ್‌ವೇಟ್, ಸುನೀಲ್ ನಾರಾಯಣ್
ಬಲಾಬಲ
ಭಾರತದ ಬಲ:
-ಅಗ್ರ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳ ಫಾರ್ಮ್
-ಏಕದಿನ ಸರಣಿಯಲ್ಲಿ ಗೆದ್ದ ಆತ್ಮವಿಶ್ವಾಸ
ದೌರ್ಬಲ್ಯ:
-ಫಿನಿಶರ್‌ಗಳಾದ ಧೋನಿ, ಯುವಿ ನಿಧಾನ ಗತಿಯ ಬ್ಯಾಟಿಂಗ್
-ಪ್ರಬಲವಾಗಿದ್ದರೂ ಕೆಲವೊಮ್ಮೆ ಅನಿರೀಕ್ಷಿತ ಕುಸಿತ ಕಾಣುವುದು
ವಿಂಡೀಸ್ ಬಲ
-ದಿಗ್ಗಜ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಮರಳಿರುವುದು
-ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿರುವುದು
ದೌರ್ಬಲ್ಯ
-ದೀರ್ಘಾವಧಿಯ ನಂತರ ಪ್ರಮುಖ ಆಟಗಾರರು ಒಂದಾಗಿದ್ದಾರೆ, ಸಂಘಟಿತ ತಂಡವಲ್ಲ.
-ಗೇಲ್, ಪೊಲಾರ್ಡ್‌ರಂತಹ ಆಟಗಾರರ ಫಾರ್ಮ್ ಬಗ್ಗೆ ಖಚಿತತೆ ಇಲ್ಲದಿರುವುದು
ಅಂಕಣ ಹೇಗಿದೆ?:
ಸ್ಪರ್ಧಾತ್ಮಕ ಅಂಕಣವಾಗಿದೆ. ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಸಮಾನ ಅವಕಾಶ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಿಂಗಿಂತ ಬ್ಯಾಟ್ಸ್‌ಮನ್‌ಗಳು ಮೇಲುಗೈ ಸಾಧಿಸಲಿದ್ದಾರೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜ, ಆರ್.ಅಶ್ವಿನ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ.
ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್‌ವೇಟ್ (ನಾಯಕ), ಕ್ರಿಸ್ ಗೇಲ್, ಎವಿನ್ ಲೆವಿಸ್, ಮರ್ಲಾನ್ ಸ್ಯಾಮ್ಯುಯೆಲ್ಸ್, ರಾನ್ಸ್‌ಫೋರ್ಡ್ ಬೀಟನ್, ಜೇಸನ್ ಮೊಹಮ್ಮದ್, ಸುನೀಲ್ ನಾರಾಯಣ್, ಕೈರನ್ ಪೊಲಾರ್ಡ್, ರೋವ¾ನ್ ಪೊವೆಲ್, ಸ್ಯಾಮ್ಯುಯೆಲ್ ಬದ್ರಿ, ಜೆರೋಮ್ ಟೇಲರ್, ಚಾಡ್ವಿಕ್ ವಾಲ್ಟನ್, ಕೆಸ್ರಿಕ್ ವಿಲಿಯಮ್ಸ್.
ಆರಂಭ: ರಾತ್ರಿ 9.00
ಪ್ರಸಾರ: ಟೆನ್ 3
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.