![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Dec 9, 2020, 12:44 PM IST
ನವದೆಹಲಿ: ಟೀಂ ಇಂಡಿಯಾ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿರ್ಧಾರ ಪ್ರಕಟಿಸಿದ ಪಾರ್ಥಿವ್ ’18 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ಇಂದು ತೆರೆ ಎಳೆಯುವುದಾಗಿ’ ತಿಳಿಸಿದ್ದಾರೆ.
ರಣಜಿಗೂ ಆಡುವ ಮೊದಲೇ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಪಾರ್ಥಿವ್, ತಮ್ಮ 17ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ದ ಪದಾರ್ಪಣೆ ಪಂದ್ಯವಾಡಿದ್ದರು. 2002ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯದ ಮೂಲಕ ಪಾರ್ಥಿವ್ ‘ಯಂಗೆಸ್ಟ್ ವಿಕೆಟ್ ಕೀಪರ್’ (ವಿಶ್ವದ ಅತಿ ಕಿರಿಯ ವಯಸ್ಸಿನ ವಿಕೆಟ್ ಕೀಪರ್ ) ಎಂದು ಗುರುತಿಸಿಕೊಂಡಿದ್ದರು.
2002ರ ಭಾರತ ಜೂನಿಯರ್ ವಿಶ್ವಕಪ್ ತಂಡದ ಕ್ಯಾಪ್ಟನ್ ಆಗಿದ್ದ ಅವರು ಅದೇ ವರ್ಷ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಬಹಳ ಕ್ಷಿಪ್ರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
— parthiv patel (@parthiv9) December 9, 2020
ಭಾರತದ ಪರ ಈ ಗುಜರಾತ್ ಆಟಗಾರ 25 ಟೆಸ್ಟ್, 38 ಏಕದಿನ, 2 ಟಿ20 ಪಂದ್ಯಗಳನ್ನು ಆಡಿದ್ದರು. ಭಾರತದ ಪರ 2018 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವಾಡಿದ್ದರು. ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಆಗಮಿಸುವ ಮುನ್ನ ವಿಕೆಟ್ ಕೀಪರ್ ಆಗಿ ಭಾರತವನ್ನು ಪಾರ್ಥಿವ್ ಪ್ರತಿನಿಧಿಸುತ್ತಿದ್ದರು. 25 ಟೆಸ್ಟ್ ಪಂದ್ಯಗಳಲ್ಲಿ 934, ಏಕದಿನದಲ್ಲಿ 736, ಟಿ20ಯಲ್ಲಿ 36 ರನ್ ಗಳಿಸಿದ್ದಾರೆ. ಇನ್ನು ಐಪಿಎಲ್ ನಲ್ಲಿ 139 ಪಂದ್ಯವಾಡಿ 2848 ರನ್ ಗಳಿಸಿದ್ದಾರೆ.
ಗುಜರಾತ್ ರಾಜ್ಯ ತಂಡದ ಪರವಾಗಿ 194 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, 11,240 ರನ್ಗಳನ್ನ ಬಾರಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 62 ಅರ್ಧಶತಕಗಳು ಸೇರಿದ್ದವು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.