T20 Cricket; 2026ರ ಟಿ20 ವಿಶ್ವಕಪ್ ತನಕ ಭಾರತ ಆಡಲಿದೆ 34 ಪಂದ್ಯ
Team Udayavani, Jul 3, 2024, 6:50 AM IST
ಹೊಸದಿಲ್ಲಿ: ಭಾರತ ಎರಡನೇ ಸಲ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಈ ಸಾಧನೆಗೈದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸಾಲಿನಲ್ಲಿ ವಿರಾಜಮಾನವಾಗಿದೆ.
ಮುಂದಿನ ಟಿ20 ವಿಶ್ವಕಪ್ ನಡೆಯುವುದು 2026ರಲ್ಲಿ. ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಈ ಪಂದ್ಯಾವಳಿ ಸಾಗಲಿದೆ. ಐಸಿಸಿ ವೇಳಾಪಟ್ಟಿಯಂತೆ, ಈ 2 ವರ್ಷಗಳಲ್ಲಿ ವಿಶ್ವವಿಜೇತ ಭಾರತ ತಂಡ 34 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಒಟ್ಟು 8 ಸರಣಿಗಳಿದ್ದು, ನಾಲ್ಕನ್ನು ತವರಲ್ಲಿ 4 ಆಡಲಿದೆ.
ಭಾರತದ ನೂತನ ಟಿ20 ಋತು ಇನ್ನು ನಾಲ್ಕೇ ದಿನಗಳಲ್ಲಿ ಜಿಂಬಾಬ್ವೆಯಲ್ಲಿ ಆರಂಭವಾಗಲಿದೆ. ಇದು 5 ಪಂದ್ಯಗಳ ಸರಣಿ. ಅಲ್ಲಿಂದ ಮರಳಿದ ಬೆನ್ನಲ್ಲೇ, ಜುಲೈಯಲ್ಲೇ ಶ್ರೀಲಂಕಾ ಪ್ರವಾಸಗೈದು 3 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಭಾರತ ತನ್ನ ತವರಿನ ಮೊದಲ ಸರಣಿಯನ್ನಾಡು ವುದು ಬಾಂಗ್ಲಾದೇಶ ವಿರುದ್ಧ. ಇದು ಸೆಪ್ಟಂಬರ್‌ನಲ್ಲಿ ನಡೆಯಲಿದೆ. ಪಂದ್ಯಗಳ ಸಂಖ್ಯೆ 3.
2025ರಲ್ಲಿ ಭಾರತ 4 ಸರಣಿಗಳನ್ನು ಆಡಬೇಕಿದೆ. ಮೊದಲು ಪ್ರವಾಸಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯದಲ್ಲಿ ಕ್ರಮವಾಗಿ 3 ಮತ್ತು 5 ಪಂದ್ಯಗಳ ಸರಣಿ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. 2026ರ ಆರಂಭದಲ್ಲಿ ನ್ಯೂಜಿಲ್ಯಾಂಡ್ ತಂಡ 5 ಟಿ20 ಪಂದ್ಯಗಳಿಗಾಗಿ ಭಾರತಕ್ಕೆ ಆಗಮಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.