ಮಿಥಾಲಿ, ಮಂಧನಾ ಬ್ಯಾಟಿಂಗ್ ನೆರವು: ಗೆಲುವಿನ ಹಳಿಯೇರಿದ ವನಿತೆಯರು
Team Udayavani, Jul 4, 2021, 7:50 AM IST
ವೂರ್ಸ್ಟರ್: ಇಂಗ್ಲೆಂಡ್ ವನಿತೆಯರ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್ ಅಂತರದಿಂದ ಗೆದ್ದ ಮಿಥಾಲಿ ರಾಜ್ ಬಳಗ ವೈಟ್ ವಾಶ್ ಅವಮಾನದಿಂದ ಪಾರಾಗಿದೆ. ಇದರಿಂದ ಸತತ ಸೋಲಿನ ಬಳಿಕ ತಂಡ ಗೆಲುವಿನ ಹಳಿಯೇರಿದೆ.
ಮಳೆಯಿಂದ 47 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಖಾತೆ ತೆರೆಯದ ಟಾಮಿ ಬ್ಯೂಮಂಟ್ ಅವರನ್ನು ಶಿಖಾ ಪಾಂಡೆ ದ್ವಿತೀಯ ಓವರ್‌ನಲ್ಲೇ ಪೆವಿಲಿಯನ್ನಿಗೆ ಕಳುಹಿಸಿದರು. ಆದರೆ ಲಾರೆನ್ ವಿನ್‌ಫೆಲ್ಡ್ ಹಿಲ್ (36), ನಾಯಕಿ ಹೀತರ್ ನೈಟ್ (46) 67 ರನ್ ಜತೆಯಾಟ ನಡೆಸಿ ತಂಡದ ರಕ್ಷಣೆಗೆ ನಿಂತರು. 49 ರನ್ ಮಾಡಿದ ನಥಾಲಿ ಶಿವರ್ ಇಂಗ್ಲೆಂಡ್ ಸರದಿಯ ಟಾಪ್ ಸ್ಕೋರರ್. ಈ ಸರಣಿಯ ಶೋಧವಾದ ಸೋಫಿಯಾ ಡಂಕ್ಲಿ 28 ರನ್ ಬಾರಿಸಿದರು. ಅಂತಿಮವಾಗಿ 47 ಓವರ್ ನಲ್ಲಿ ಇಂಗ್ಲೆಂಡ್ 219 ರನ್ ಗೆ ಆಲ್ ಔಟ್ ಆಯಿತು.
ಭಾರತದ ಪರ ದೀಪ್ತಿ ಶರ್ಮ 47ಕ್ಕೆ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಉಳಿದ ಐದೂ ಬೌಲರ್ ಒಂದೊಂದು ವಿಕೆಟ್ ಕಿತ್ತರು. ಸ್ಮೃತಿ ಮಂಧನಾ ಅದ್ಭುತ ಕ್ಯಾಚ್ ಹಿಡಿದು ಮಿಂಚಿದರು.
ಇದನ್ನೂ ಓದಿ:ವಿಂಬಲ್ಡನ್ ಕೂಟ : ನಾಲ್ಕನೇ ಸುತ್ತಿಗೆ ಆ್ಯಂಜೆಲಿಕ್ ಕೆರ್ಬರ್, ಕೊಕೊ ಗಾಫ್
ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಮೊದಲ ವಿಕೆಟ್ ಗೆ ಶಫಾಲಿ- ಸ್ಮೃತಿ 46 ರನ್ ಗಳಸಿದರು. ಆದರೆ ದೊಡ್ಡ ಹೊಡೆತಕ್ಕೆ ಮುಂದಾದ ಶಫಾಲಿ 19 ರನ್ ಗಳಿಸಿ ಔಟಾದರು. 49 ರನ್ ಗಳಿಸಿದ್ದ ಸ್ಮ್ರತಿ ಮಂಧನಾ ಎಲ್ ಬಿ ಬಲೆಗೆ ಬಿದ್ದರು.
ಸರಣಿಯ ಮತ್ತೊಂದು ಅರ್ಧಶತಕ ಸಿಡಿಸಿದ ನಾಯಕಿ ಮಿಥಾಲಿ ರಾಜ್ ಅಜೇಯ ಆಟವಾಡಿದರು. ಹರ್ಮನ್ 116 ರನ್, ದೀಪ್ತಿ 18 ರನ್ ಮತ್ತು ಕೊನೆಯಲ್ಲಿ ಸ್ನೇಹ್ ರಾಣಾ ಉಪಯುಕ್ತ 24 ರನ್ ಗಳಿಸಿದರು. ಆರು ವಿಕೆಟ್ ಕಳೆದುಕೊಂಡ ಭಾರತ ತಂಡ ಮೂರು ಎಸೆತ ಬಾಕಿ ಇರುವಂತೆ ಜಯ ಗಳಿಸಿತು.
ಮಿಥಾಲಿ ರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸೋಫಿಯಾ ಎಕ್ಲೆಸ್ಟೋನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮೂರು ಟಿ20 ಪಂದ್ಯಗಳ ಸರಣಿ ಜುಲೈ 9ರಿಂದ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: ಏಕಾಮ್ರ ಕ್ರೀಡಾ ಸಾಹಿತ್ಯ ಉತ್ಸವ ಮತ್ತೆ ಮರುಕಳಿಸಲಿದೆ!
Ranji Trophy: ಶ್ರೇಯಸ್ ಅಯ್ಯರ್ ದ್ವಿಶತಕ; ಬೃಹತ್ ಮೊತ್ತದತ್ತ ಮುಂಬಯಿ
WI vs ENG: ಕಿಂಗ್, ಕಾರ್ಟಿ ಶತಕ ವಿಂಡೀಸ್‌ಗೆ ಏಕದಿನ ಸರಣಿ
WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
WPL 2025: ಆರ್ ಸಿಬಿ ಆಟಗಾರರ ರಿಟೆನ್ಶನ್ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್
MUST WATCH
ಹೊಸ ಸೇರ್ಪಡೆ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.