ಅವಳಿ ಸರಣಿ ಗೆಲುವಿನ ಹೊಸ್ತಿಲಲ್ಲಿ ಭಾರತೀಯ ವನಿತೆಯರು


Team Udayavani, Feb 21, 2018, 6:50 AM IST

South-Africa,-Indian-women.jpg

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ನೆಲದಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡುತ್ತಿರುವ ಭಾರತೀಯ ವನಿತೆಯರು ಟ್ವೆಂಟಿ20 ಸರಣಿಯಲ್ಲೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದ್ದಾರೆ.

ಈ ಹಿಂದಿನ ಪಂದ್ಯದಲ್ಲಿ ಸೋತಿದ್ದರೂ ವಿಚಲಿತರಾಗದ ವನಿತೆಯರು ಬುಧವಾರ ನಡೆಯುವ ನಾಲ್ಕನೇ ಟ್ವೆಂಟಿ20 ಪಂದ್ಯವನ್ನು ಗೆದ್ದು 3-1 ಮುನ್ನಡೆಯೊಂದಿಗೆ ಸರಣಿ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಅವಳಿ ಪ್ರಶಸ್ತಿ ಗೆಲ್ಲುವತ್ತ ವನಿತೆಯರು ಹೊರಟಿದ್ದಾರೆ. 

ವನಿತೆಯರು ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದರು.
ಟ್ವೆಂಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅನುಕ್ರಮವಾಗಿ ಏಳು ಮತ್ತು 9 ವಿಕೆಟ್‌ಗಳ ಸುಲಭ ಜಯ ದಾಖಲಿಸಿದ್ದ ಭಾರತೀಯ ವನಿತೆಯರು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಐದು ವಿಕೆಟ್‌ ಅಂತರದಿಂದ ಸೋತಿದ್ದರು. ಸದ್ಯ 2-1 ಮುನ್ನಡೆಯಲ್ಲಿರುವ ಭಾರತಕ್ಕೆ ಸರಣಿ ಗೆಲುವು ದಾಖಲಿಸಲು ಅವಕಾಶವಿದೆ. ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು ಒಂದು ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿ ತನ್ನದಾಗಿಸಿಕೊಳ್ಳಲಿದೆ.

ಬುಧವಾರದ ಪಂದ್ಯದಲ್ಲಿ ಒಂದು ವೇಳೆ ಭಾರತ ಗೆದ್ದರೆ ಹರ್ಮನ್‌ಪ್ರೀತ್‌ ಕೌನ್‌ ನೇತೃತ್ವದ ಭಾರತೀಯ ತಂಡ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಮೊದಲ ಬಾರಿ ಅವಳಿ ಸರಣಿ ಗೆಲ್ಲಲಿದೆ. ಆಸ್ಟ್ರೇಲಿಯದಲ್ಲಿ ಟ್ವೆಂಟಿ20 ಸರಣಿ ಗೆದ್ದ ಭಾರತೀಯ ತಂಡಕ್ಕೆ ಇದೊಂದು ದೊಡ್ಡ ಸಾಧನೆಯಾಗಲಿದೆ.

ಆರಂಭದ ಎರಡು ಪಂದ್ಯ ಗೆದ್ದ ರೀತಿ ನೋಡಿದರೆ ಭಾರತ ಸುಲಭವಾಗಿ ಈ ಸರಣಿ ಗೆಲ್ಲುವ ಸಾಧ್ಯತೆಯಿದೆ. ಆದರೆ ಮೂರನೇ ಪಂದ್ಯದಲ್ಲಿ ಭಾರತೀಯ ವನಿತೆಯರು ಅತ್ಯಂತ ಕಳಪೆಯಾಗಿ ಆಡಿದ್ದರಿಂದ ಪಂದ್ಯ ಕಳೆದುಕೊಂಡರು. ಮೂರನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ಕುಸಿದ ಕಾರಣ ಭಾರತ 17.5 ಓವರ್‌ಗಳಲ್ಲಿ 133 ರನ್ನಿಗೆ ಆಲೌಟಾಯಿತು. ಈ ಮೊದಲು ಭಾರತ ಆರಂಭದ 12 ಓವರ್‌ಗಳಲ್ಲಿ ಎರಡು ವಿಕೆಟಿಗೆ 93 ರನ್ನುಗಳ ಉತ್ತಮ ಆಟ ಪ್ರದರ್ಶಿಸಿತ್ತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು 30 ಎಸೆತಗಳಿಂದ 48 ರನ್‌ ಹೊಡೆದರಲ್ಲದೇ ದ್ವಿತೀಯ ವಿಕೆಟಿಗೆ ಸ್ಮ ತಿ ಮಂಧನಾ ಜತೆಗೂಡಿ 55 ರನ್ನುಗಳ ಜತೆಯಾಟ ನಡೆಸಿದ್ದರು. ಮಂಧನಾ 37 ರನ್‌ ಹೊಡೆದಿದ್ದರು. ಆದರೆ ಈ ಜೋಡಿ ಮುರಿಯುತ್ತಲೇ ಭಾರತ ಹಠಾತ್‌ ಕುಸಿತ ಕಂಡಿತು.

ಭಾರತೀಯ ವನಿತಾ ಕ್ರಿಕೆಟ್‌ ಇತಿಹಾಸದಲ್ಲಿಯೇ ಮೊದಲ ಬಾರಿ ಅಪರೂಪದ ಸಾಧನೆಗೈಯಲು ಭಾರತೀಯ ವನಿತಾ ತಂಡ ಬಯಸಿದೆ. ಅದಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಎಲ್ಲರೂ ಪ್ರಯತ್ನಪಡಬೇಕಾಗಿದೆ ಎಂದು ಹರ್ಮನ್‌ಪ್ರೀತ್‌ ಹೇಳಿದ್ದಾರೆ.

ಈ ಹಿಂದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿದ ದಕ್ಷಿಣ ಆಫ್ರಿಕಾ ವನಿತೆಯರೂ ಕೂಡ ಇದೀಗ ಹೊಸ ಹುಮ್ಮಸ್ಸಿನಿಂದ ಆಡುವ ಸಾಧ್ಯತೆಯಿದೆ. ಟ್ವೆಂಟಿ20ಯಲ್ಲಿ ಮೊದಲ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದಿರುವ ಶಬಿ°ಮ್‌ ಇಸ್ಮಾಯಿಲ್‌ ಮತ್ತೆ ಭಾರತದ ಓಟಕ್ಕೆ ಬ್ರೇಕ್‌ ಹಾಕಲು ತಯಾರಾಗಿದ್ದಾರೆ. ಇಸ್ಮಾಯಿಲ್‌ ಈ ಹಿಂದಿನ ಪಂದ್ಯದಲ್ಲಿ 30 ರನ್ನಿಗೆ 5 ವಿಕೆಟ್‌ ಹಾರಿಸಿದ್ದರು.

ತಂಡಗಳು:
ಭಾರತೀಯ ವನಿತೆಯರು: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ, ಜೆಮಿಮಾ ರೋಡ್ರಿಗಸ್‌, ದೀಪ್ತಿ ಶರ್ಮ, ಅನುಜಾ ಪಾಟೀಲ್‌, ತನಿಯಾ ಭಾಟಿಯಾ, ನುಜಾಟ್‌ ಪರ್ವೀನ್‌, ಪೂನಂ ಯಾದವ್‌, ರಾಜೇಶ್ವರಿ ಗಾಯಕ್‌ವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌, ರುಮೇಲಿ ಧಾರ್‌.

ದಕ್ಷಿಣ ಆಫ್ರಿಕಾ ವನಿತೆಯರು: ಡೇನ್‌ ವಾನ್‌ ನಿಕೆರ್ಕ್‌ (ನಾಯಕಿ), ಮರಿಝಾನೆ ಕ್ಯಾಪ್‌, ತೃಷಾ ಚೆಟ್ಟಿ, ಶಬಿ°ಮ್‌ ಇಸ್ಮಾಯಿಲ್‌, ಅಯಬೊಂಗ ಖಾಕಾ, ಮಸಬಾಟ ಕ್ಲಾಸ್‌, ಸನಿ ಲುಸ್‌, ಒಡಿನೆ ಕಿರ್ಸ್ಟನ್‌, ಮಿಗ್ನೊàನ್‌ ಡು ಪ್ರೀಜ್‌, ಲಿಝೆಲಿ ಲೀ, ಚಲೇ ಟ್ರೈಆನ್‌, ನದಿನೆ ಡಿ ಕ್ಲೆರ್ಕ್‌, ರೈಸಿಬೆ ಟೊಜಾಖೇ, ಮೋಸ್‌ಲೈನ್‌ ಡೇನಿಯಲ್ಸ್‌.

ಪಂದ್ಯ ಆರಂಭ: ಭಾರೆತೀಯ ಕಾಲಮಾನ ಸಂಜೆ 4.30

ಟಾಪ್ ನ್ಯೂಸ್

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

2-r-ashwin

Ravichandran Ashwin: ಯಾವುದೇ ಪಶ್ಚಾತ್ತಾಪವಿಲ್ಲ: ಅಶ್ವಿ‌ನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

16-onion

Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.