ತರೆಗೆಲೆಯಂತೆ ಉರುಳಿದ ವಿಕೆಟ್: ಗೆಲ್ಲುವ ಪಂದ್ಯ ಸೋತ ಮಹಿಳೆಯರು
Team Udayavani, Feb 6, 2019, 6:54 AM IST
ವೆಲ್ಲಿಂಗ್ಟನ್ : ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ ಕಾರಣ ಭಾರತೀಯ ಮಹಿಳೆಯರ ತಂಡ ಆತಿಥೇಯ ಕಿವೀಸ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಸೋಲನುಭವಿಸಿದೆ.
ವೆಲ್ಲಿಂಗ್ಟನ್ ನ ವೆಸ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತೀಯ ಮಹಿಳೆಯರ ತಂಡ ಫೀಲ್ಡಿಂಗ್ ಆಯ್ಕೆ ಮಾಡಿತ್ತು. ಬ್ಯಾಟಿಂಗ್ ನಡೆಸಿದ ಕಿವೀಸ್ ನಿಗದಿತ 20 ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸೋಫೀ ಡಿವೈನ್ 62 ರನ್ ಗಳಿಸಿದರೆ, ನಾಯಕಿ ಸ್ಯಾಟರ್ ವೈಟ್ 33 ರನ್ ಗಳಿಸಿದರು.
160 ರನ್ ಗಳ ಗುರಿ ಪಡೆದ ಭಾರತ ಮೊದಲ ವಿಕೆಟ್ ಕೇವಲ ನಾಲ್ಕು ರನ್ ಗೆ ಕಳೆದುಕೊಂಡಿತು. ಮೊದಲ ಪಂದ್ಯ ಆಡಲಿಳಿದ ಪ್ರಿಯಾ ಪೂನಿಯಾ ನಾಲ್ಕು ರನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಜೊತೆಗೂಡಿದ ಸ್ಮೃತಿ ಮಂದನಾ ಮತ್ತು ಜೆಮಿಮಾ ರೋಡ್ರಿಗಸ್ ಎರಡನೇ ವಿಕೆಟ್ ಗೆ 98 ರನ್ ಗಳ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ಭಾರತದ ಗೆಲುವು ಕಷ್ಟವೇನಿರಲಿಲ್ಲ.
ಪೆವಿಲಿಯನ್ ಪರೇಡ್: ತಂಡದ ಮೋತ್ತ102 ರನ್ ಆಗುತ್ತಿದ್ದಂತೆ 58 ರನ್ ಗಳಿಸಿದ್ದ ಉಪನಾಯಕಿ ಸ್ಮೃತಿ ಔಟ್ ಆದರು. ಅವರ ಬೆನ್ನಲ್ಲೆ ಜೆಮಿಮಾ ಕೂಡಾ ಪೆವಿಲಿಯನ್ ಸೇರುತ್ತಿದ್ದಂತೆ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ನಾಯಕಿ ಹರ್ಮನ್ ಪ್ರೀತ್ ಕೌರ್ 17 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರ್ತಿಯರು ಕಿವೀಸ್ ಗೆ ಪ್ರತಿರೋಧ ತೋರಿಸುವ ಮನಸ್ಸು ಮಾಡಲಿಲ್ಲ. ಕೊನೆಗೆ 136 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 23 ರನ್ ಗಳ ಅಂತರದಿಂದ ಸೋಲನುಭವಿಸಿತು. ಪ್ರಮುಖ ಮೂರು ವಿಕೆಟ್ ಪಡೆದ ಲೀ ತಹುಹು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.