2nd ODI: ಆಸ್ಟ್ರೇಲಿಯ ವಿರುದ್ಧ 3 ರನ್ ಸೋಲು: ಸರಣಿ ಸೋತ ಭಾರತ ವನಿತೆಯರು
ದೀಪ್ತಿ ಶರ್ಮ, ರಿಚಾ ಘೋಷ್ ಅದ್ಬುತ ಹೋರಾಟ ವ್ಯರ್ಥ
Team Udayavani, Dec 30, 2023, 9:40 PM IST
ಮುಂಬಯಿ: ಪ್ರವಾಸಿ ಆಸ್ಟ್ರೇಲಿಯ ತಂಡದೆದುರು ಶನಿವಾರ ನಡೆದ ರೋಚಕ ದ್ವಿತೀಯ ಪಂದ್ಯದಲ್ಲಿ 3 ರನ್ ಅಂತರದ ಸೋಲನ್ನು ಕಂಡ ಭಾರತೀಯ ವನಿತಾ ತಂಡ 3 ಪಂದ್ಯಗಳ ಸರಣಿಯನ್ನು(2-0) ಸೋತಿದೆ.
ಆಸ್ಟ್ರೇಲಿಯ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 258 ರನ್ ಕಲೆ ಹಾಕಿದರು. ಫೋಬೆ ಲಿಚ್‌ಫೀಲ್ಡ್63, ಎಲ್ಲಿಸ್ ಪೆರ್ರಿ 50 ರನ್ ಮತ್ತು ಉಳಿದ ಆಟಗಾರ್ತಿಯರ ಕೊಡುಗೆಯಿಂದ ಉತ್ತಮ ಮೊತ್ತ ಕಲೆ ಹಾಕಿತು. ದೀಪ್ತಿ ಶರ್ಮ 5 ವಿಕೆಟ್ ಕಿತ್ತು ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 255 ರನ್ ಮಾತ್ರ ಗಳಿಸಲು ಶಕ್ತವಾಗಿ ವೀರೋಚಿತ ಸೋಲು ಅನುಭವಿಸಿತು. ಉತ್ತಮ ಹೋರಾಟ ನೀಡಿ ಬ್ಯಾಟಿಂಗ್ ವೈಭವ ತೋರಿದ ರಿಚಾ ಘೋಷ್ 96 ರನ್ ಗಳಿಸಿ ಔಟಾಗಿ ಭಾರಿ ನಿರಾಶೆ ಅನುಭವಿಸಿದರು. ಸ್ಮೃತಿ ಮಂಧಾನ34, ಜೆಮಿಮಾ ರೋಡ್ರಿಗಸ್ 44, ದೀಪ್ತಿ ಶರ್ಮ ಔಟಾಗದೆ 24 ರನ್ ಗಳಿಸಿದರು ಜಯಲಕ್ಷ್ಮೀ ಭಾರತಕ್ಕೆ ಒಲಿಯಲಿಲ್ಲ.
ಕೊನೆಯ ಓವರ್ ನಲ್ಲಿ 16 ರನ್ ಗಳ ಅಗತ್ಯವಿತ್ತು. (4 1 1 Wd 0 1 4 )ರೂಪದಲ್ಲಿ 12 ರನ್ ಬಂದಿತು. ಶ್ರೇಯಾಂಕಾ ಪಾಟೀಲ್ ಮತ್ತು ದೀಪ್ತಿ ಶಕ್ತಿ ಮೀರಿ ಗೆಲುವು ತಂದು ಕೊಡಲು ಹೋರಾಟ ನೀಡಿದರೂ ಜಯ ಒಲಿಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.