ಟಿ20 ಸರಣಿ ವಿಕ್ರಮನಾರಿಯರ ನಲಿದಾಟ
Team Udayavani, Feb 25, 2018, 6:00 AM IST
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ವನಿತಾ ಕ್ರಿಕೆಟಿಗರು ಅವಳಿ ಇತಿಹಾಸ ಬರೆದಿದ್ದಾರೆ. ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ಬಳಿಕ ಟಿ20 ಸರಣಿಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಶನಿವಾರದ 5ನೇ ಹಾಗೂ ಅಂತಿಮ ಚುಟುಕು ಪಂದ್ಯವನ್ನು 54 ರನ್ನುಗಳಿಂದ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 4 ವಿಕೆಟಿಗೆ 166 ರನ್ ಪೇರಿಸಿ ಸವಾಲೊಡ್ಡಿದರೆ, ದಕ್ಷಿಣ ಆಫ್ರಿಕಾ 18 ಓವರ್‌ಗಳಲ್ಲಿ 112 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಶಿಖಾ ಪಾಂಡೆ, ರುಮೇಲಿ ಧರ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ 3 ವಿಕೆಟ್ ಕಿತ್ತು ಹರಿಣಗಳನ್ನು ಬೇಟೆಯಾಡಿದರು. ಮಿಥಾಲಿ ರಾಜ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮಿಥಾಲಿ, ಜೆಮಿಮಾ ಭರ್ಜರಿ ಆಟ
ಮಿಥಾಲಿ ರಾಜ್ ಮತ್ತು ಯುವ ಆಟಗಾರ್ತಿ ಜೆಮಿನಾ ರೋಡ್ರಿಗಸ್ ಆತಿಥೇಯರ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ಭಾರತದ ಇನ್ನಿಂಗ್ಸ್ ಬೆಳೆಸಿದರು. ಇವರಿಬ್ಬರ 2ನೇ ವಿಕೆಟ್ ಜತೆಯಾಟದಲ್ಲಿ 98 ರನ್ ಸಂಗ್ರಹಗೊಂಡಿತು. ಮಿಥಾಲಿ 50 ಎಸೆತಗಳಿಂದ ಸರ್ವಾಧಿಕ 62 ರನ್ ಬಾರಿಸಿದರು. ಅವರ ಬಿರುಸಿನ ಆಟದ ವೇಳೆ 3 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಯಿತು. ಜೆಮಿಮಾ ಕೊಡುಗೆ 44 ರನ್. 34 ಎಸೆತ ಎದುರಿಸಿದ ಜೆಮಿಮಾ 2 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿ ಮೆರೆದರು. ಇವರಿಬ್ಬರ ವಿಕೆಟ್ 4 ರನ್ ಅಂತರದಲ್ಲಿ ಉರುಳಿತು.
ಸ್ಮತಿ ಮಂಧನಾ 13 ರನ್ ಮಾಡಿ ಔಟಾದ ಬಳಿಕ ಮಿಥಾಲಿ-ಜೆಮಿಮಾ ಜತೆಗೂಡಿದ್ದರು. ಮಂಧನಾ-ಮಿಥಾಲಿ ಜೋಡಿಯ ಮೊದಲ ವಿಕೆಟ್ ಜತೆಯಾಟದಲ್ಲಿ 4.2 ಓವರ್‌ಗಳಿಂದ 32 ರನ್ ಬಂತು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಬಿರುಸಿನ ಆಟಕ್ಕಿಳಿದು 17 ಎಸೆತಗಳಿಂದ ಅಜೇಯ 27 ರನ್ ಸಿಡಿಸಿದರು (1 ಬೌಂಡರಿ, 2 ಸಿಕ್ಸರ್). 8 ರನ್ ಮಾಡಿದ ವೇದಾ ಕೃಷ್ಣಮೂರ್ತಿ ಇನ್ನಿಂಗ್ಸಿನ ಅಂತಿಮ ಎಸೆತದಲ್ಲಿ ರನೌಟಾದರು.
ದಕ್ಷಿಣ ಆಫ್ರಿಕಾ ಕುಸಿತ
ಭಾರತದ ಘಾತಕ ಬೌಲಿಂಗ್ ದಾಳಿಯನ್ನು ನಿಭಾಯಿಸಲು ಆರಂಭದಿಂದಲೇ ಪರದಾಡಿದ ದಕ್ಷಿಣ ಆಫ್ರಿಕಾ, 9ನೇ ಓವರ್ ವೇಳೆ 44 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಟ್ರಾಯಾನ್ ಮತ್ತು ಕಾಪ್ ನುಗ್ಗಿ ಬೀಸಲಾರಂಭಿಸಿದರೂ ಆಗಲೇ ಪಂದ್ಯ ಆತಿಥೇಯರ ಕೈಜಾರಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ-20 ಓವರ್‌ಗಳಲ್ಲಿ 4 ವಿಕೆಟಿಗೆ 166 (ಮಿಥಾಲಿ 62, ಜೆಮಿಮಾ 44, ಹರ್ಮನ್‌ಪ್ರೀತ್ ಔಟಾಗದೆ 27, ಮಂಧನಾ 13, ವೇದಾ 8, ಕಾಪ್ 22ಕ್ಕೆ 1, ಶಬಿ°ಂ 35ಕ್ಕೆ 1, ಖಾಕಾ 41ಕ್ಕೆ 1). ದಕ್ಷಿಣ ಆಫ್ರಿಕಾ-18 ಓವರ್‌ಗಳಲ್ಲಿ 112 (ಕಾಪ್ 27, ಟ್ರಯಾನ್ 25, ಡು ಪ್ರೀಝ್ 17, ಶಿಖಾ ಪಾಂಡೆ 16ಕ್ಕೆ 3, ರುಮೇಲಿ ಧರ್ 26ಕ್ಕೆ 3, ರಾಜೇಶ್ವರಿ ಗಾಯಕ್ವಾಡ್ 26ಕ್ಕೆ 3, ಪೂನಂ ಯಾದವ್ 25ಕ್ಕೆ 1). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮಿಥಾಲಿ ರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.