ವನಿತಾ ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾ ಚಾಂಪಿಯನ್
Team Udayavani, Feb 2, 2023, 10:45 PM IST
ಈಸ್ಟ್ ಲಂಡನ್: ಕೂಟದ ಅಜೇಯ ತಂಡವಾದ ಭಾರತವನ್ನು 5 ವಿಕೆಟ್‌ಗಳಿಂದ ಮಣಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ವನಿತಾ ಟಿ20 ತ್ರಿಕೋನ ಸರಣಿಯ ಚಾಂಪಿಯನ್ ಆಗಿ ಮೂಡಿಬಂದಿದೆ.
ಗುರುವಾರದ ಪ್ರಶಸ್ತಿ ಸಮರದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ ಕೇವಲ 109 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 113 ರನ್ ಮಾಡಿತು. ಲೀಗ್ ಹಂತದ ಮೊದಲ ಸುತ್ತಿನಲ್ಲಿ ಭಾರತದ ಕೈಯಲ್ಲಿ ಸೋಲನುಭವಿಸಿದ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಸವಾಲಿನ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. 6 ವಿಕೆಟ್ ಉಳಿಸಿಕೊಂಡೂ ನೂರರ ಗಡಿ ದಾಟಲು ಪರದಾಡಿತು. ಅನುಭವಿ ಸ್ಮತಿ ಮಂಧನಾ 8 ಎಸೆತ ಎದುರಿಸಿದರೂ ರನ್ ಗಳಿಸಲು ವಿಫಲರಾದರು. ಜೆಮಿಮಾ ರೋಡ್ರಿಗಸ್ 18 ಎಸೆತಗಳಿಂದ 11 ರನ್ ಮಾಡಿದರು. 7 ಓವರ್ ಅಂತ್ಯಕ್ಕೆ ಆರಂಭಿಕರನ್ನು ಕಳೆದುಕೊಂಡ ಭಾರತ ಕೇವಲ 21 ರನ್ ಮಾಡಿತ್ತು.
ವನ್‌ಡೌನ್‌ನಲ್ಲಿ ಬಂದ ಹರ್ಲೀನ್ ದೇವಲ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಹೋರಾಟವೊಂದನ್ನು ಸಂಘ ಟಿಸಿದರು. ಭರ್ತಿ 8 ಓವರ್ ನಿಭಾಯಿಸಿ 3ನೇ ವಿಕೆಟಿಗೆ 48 ರನ್ ಒಟ್ಟುಗೂಡಿಸಿದರು. 46 ರನ್ ಮಾಡಿದ ಹರ್ಲೀನ್ ಭಾರತದ ಟಾಪ್ ಸ್ಕೋರರ್. ಇದಕ್ಕಾಗಿ ಅವರು 56 ಎಸೆತ ತೆಗೆದುಕೊಂಡರು. ಹೊಡೆ ದದ್ದು 4 ಬೌಂಡರಿ. ಕೌರ್ 22 ಎಸೆತ ಎದುರಿಸಿ 21 ರನ್ ಮಾಡಿದರು (2 ಬೌಂಡರಿ).
ಹರ್ಲೀನ್ ಹಾಗೂ ದೀಪ್ತಿ ಶರ್ಮ ಸಾಹಸದಿಂದಾಗಿ ಡೆತ್ ಓವರ್‌ಗಳಲ್ಲಿ ಭಾರತ 40 ರನ್ ಪೇರಿಸಲು ಯಶಸ್ವಿಯಾಯಿತು. ಈ ಅವಧಿಯಲ್ಲಿ ಉರುಳಿದ್ದು ಒಂದೇ ವಿಕೆಟ್. ದೀಪ್ತಿ ಗಳಿಕೆ ಅಜೇಯ 16 ರನ್.
ದಕ್ಷಿಣ ಆಫ್ರಿಕಾಕ್ಕೆ ಚೇಸಿಂಗ್ ಸುಲಭವೇನೂ ಆಗಿರಲಿಲ್ಲ. ಭಾರತದ ಬೌಲರ್ ಈ ಮೊತ್ತವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. 14 ಓವರ್ ಆಗುವಾಗ 66ಕ್ಕೆ 5 ವಿಕೆಟ್ ಬಿದ್ದಾಗ ಕೌರ್ ಪಡೆಗೂ ಗೆಲುವಿನ ಅವಕಾಶವಿತ್ತು. ಆದರೆ ಕ್ಲೋ ಟ್ರಯಾನ್ ಅಜೇಯ 57 ರನ್ (32 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ನಾಡಿನ್ ಡಿ ಕ್ಲರ್ಕ್ ಅಜೇಯ 17 ರನ್ ಮಾಡಿ ತಂಡವನ್ನು ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ-4 ವಿಕೆಟಿಗೆ 109 (ಹರ್ಲೀನ್ 46, ಕೌರ್ 21, ದೀಪ್ತಿ 16, ಎಂಲಾಬಾ 16ಕ್ಕೆ 2). ದಕ್ಷಿಣ ಆಫ್ರಿಕಾ-18 ಓವರ್‌ಗಳಲ್ಲಿ 5 ವಿಕೆಟಿಗೆ 113 (ಟ್ರಯಾನ್ ಔಟಾಗದೆ 57, ಡಿ ಕ್ಲರ್ಕ್ ಔಟಾಗದೆ 17, ಸ್ನೇಹ್ 21ಕ್ಕೆ 2, ದೀಪ್ತಿ 19ಕ್ಕೆ 1, ರಾಜೇಶ್ವರಿ 25ಕ್ಕೆ 1).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.