India vs West Indies ವನಿತಾ ಟಿ20:ಸತತ ವೈಫಲ್ಯ ಕಾಣುತ್ತಿರುವ ಕೌರ್ ನಾಯಕತ್ವಕ್ಕೆ ಸವಾಲು
Team Udayavani, Dec 15, 2024, 10:22 AM IST
ನವಿ ಮುಂಬಯಿ: ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿ ಬಂದ ಭಾರತದ ವನಿತೆಯರೀಗ ವೆಸ್ಟ್ ಇಂಡೀಸ್ ವಿರುದ್ಧ ತವರಲ್ಲಿ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರವಿವಾರ ನವಿ ಮುಂಬಯಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ನಾಯಕಿಯಾಗಿ ಸೂಕ್ತ ಕಾರ್ಯತಂತ್ರ ರೂಪಿಸುವಲ್ಲಿ ಸತತ ವೈಫಲ್ಯ ಕಾಣುತ್ತಿರುವ ಹರ್ಮನ್‌ಪ್ರೀತ್ ಕೌರ್ ಅವರಿಗೆ ಇದು ಮತ್ತೂಂದು ಅಗ್ನಿಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದು ಟಿ20 ವಿಶ್ವಕಪ್ ಬಳಿಕ ಭಾರತ ಆಡುತ್ತಿರುವ ಮೊದಲ ಟಿ20 ಸರಣಿ. ಭಾರತ ಅಲ್ಲಿ ಕೇವಲ ಪಾಕಿಸ್ಥಾನವನ್ನು ಮಣಿಸಲು ಯಶಸ್ವಿಯಾಗಿತ್ತು. ಆದರೆ 2019ರಿಂದ ಮೊದಲ್ಗೊಂಡು ವೆಸ್ಟ್ ಇಂಡೀಸ್ ವಿರುದ್ಧ ಸತತ 8 ಟಿ20 ಪಂದ್ಯಗಳನ್ನು ಗೆದ್ದ ಹಿರಿಮೆ ಭಾರತದ್ದು. ಅಲ್ಲದೇ ಇದು ತವರಿನ ಸರಣಿಯಾದ್ದರಿಂದ ಭಾರತದ ಮೇಲೆ ನಿರೀಕ್ಷೆ ಇಡಬಹುದಾಗಿದೆ.
ಇದೊಂದು ತೀರಾ ಒತ್ತಡದ ಸರಣಿಯೂ ಹೌದು. ಬುಧವಾರವಷ್ಟೇ ಪರ್ತ್‌ನಲ್ಲಿ ಕೊನೆಯ ಏಕದಿನ ಪಂದ್ಯವಾಡಿದ್ದ ಭಾರತ ಸುದೀರ್ಘ ಪ್ರಯಾಣದ ಬಳಿಕ ಎರಡೇ ದಿನದಲ್ಲಿ ಅಂಗಳಕ್ಕೆ ಇಳಿಯಬೇಕಾಗಿ ಬಂದಿದೆ.
ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಇತ್ತೀಚೆಗೆ ಫಾರ್ಮ್ ಕೈಕೊಟ್ಟರೂ ಅವರ 2024ರ ತವರಿನ ಟಿ20 ಸಾಧನೆ ಅಮೋಘವಾಗಿಯೇ ಇದೆ. 20 ಪಂದ್ಯಗಳಿಂದ 531 ರನ್ ಪೇರಿಸಿದ್ದಾರೆ. ಸ್ಟ್ರೈಕ್‌ರೇಟ್ 126.73. ಶಫಾಲಿ ಗೈರಲ್ಲಿ ರಿಚಾ ಘೋಷ್‌ಗೆ ಭಡ್ತಿ ನೀಡಲಾಗಿದೆ. ಇದರಿಂದ ಮಧ್ಯಮ-ಕೆಳ ಕ್ರಮಾಂಕದ ಬ್ಯಾಟಿಂಗ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಜತೆಗೆ ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ಯಾಸ್ತಿಕಾ ಭಾಟಿಯಾ, ಪ್ರಿಯಾ ಪೂನಿಯಾ ಕೂಡ ತಂಡದಲ್ಲಿಲ್ಲ.
ಅಪಾಯಕಾರಿ ವಿಂಡೀಸ್
ಭಾರತದಂತೆ ವೆಸ್ಟ್ ಇಂಡೀಸ್ ಕೂಡ ದೊಡ್ಡ ಸರಣಿಯಲ್ಲಿ ವೈಫಲ್ಯ ಕಾಣುತ್ತಲೇ ಇರುವ ತಂಡ. ಆದರೆ ಈ ವರ್ಷ ಆಡಿದ 13 ಟಿ20 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಆಘಾತವಿಕ್ಕುವ ಮೂಲಕ ವಿಂಡೀಸ್ ಸುದ್ದಿಯಾಗಿತ್ತು.
ಆರಂಭ: ರಾತ್ರಿ 7.00
ಪ್ರಸಾರ: ಸ್ಪೋರ್ಟ್ಸ್ 18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Football ಮಾಜಿ ತಾರೆ ಮಿಖಾಯಿಲ್ ಈಗ ಜಾರ್ಜಿಯಾ ಅಧ್ಯಕ್ಷ
Australia vs India 3rd Test ; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್
T20; 3 ನೇ ಪಂದ್ಯ ರದ್ದು : ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
Women’s Premier League 2025;ಇಂದು ಬೆಂಗಳೂರಿನಲ್ಲಿ ಹರಾಜು: RCBಯಲ್ಲಿ 4ಸ್ಥಾನ ಖಾಲಿ
D.Gukesh: ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಗೆದ್ದ ಹಣವೆಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ
Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.