ನಾವು ಯಾರಿಗೂ ಕಮ್ಮಿ ಇಲ್ಲ ;ಹೆಣ್ಮಕ್ಳು ಸ್ಟ್ರಾಂಗು ಗುರೂ..!
Team Udayavani, Mar 3, 2018, 11:52 AM IST
ತವರು ನೆಲದಲ್ಲಿಯೇ ಬಲಿಷ್ಠ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಏಕದಿನ ಹಾಗೂ ಟಿ20 ಮಾದರಿಗಳಲ್ಲಿ ಬಗ್ಗು ಬಡಿಯುವ ಮೂಲಕ ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಭಾರತ ಮಹಿಳಾ ತಂಡ ಸಾಬೀತುಪಡಿಸಿದೆ. ಫೆ.5 ರಿಂದ 24ರವರೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ತಂಡ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಎರಡು ಸರಣಿ ಗೆದ್ದ ಸಾಧನೆ ಮಾಡಿದೆ. ಮೂರು ಏಕದಿನ ಸರಣಿಯನ್ನು 2-1 ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ.
ಇದರ ಜತೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತೀಯ ಮಹಿಳೆಯರು ಹಲವು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಯುವ ಆಟಗಾರ್ತಿಯರು ಸಿಕ್ಕ ಒಂದೆರಡು ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಭಾರತ ಪರುಷರ ತಂಡ ಸಹ ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಪರಿಣಾಮ ಮಹಿಳೆಯ ಪಂದ್ಯಗಳಿಗೆ ಅಷ್ಟು ಮಹತ್ವ ಸಿಕ್ಕಿರಲಿಲ್ಲ. ಆದರೆ, ಪುರುಷರ ತಂಡಕ್ಕೆ ಸರಿಸಮ ಅನ್ನುವಂಥ ಪ್ರದರ್ಶನ ನೀಡುವ ಮೂಲಕ ಮಹಿಳಾ ಕ್ರಿಕೆಟ್ ತಂಡವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ಸದ್ಯದ ಭಾರತ ಮಹಿಳಾ ತಂಡದ ಆಟಗಾರ್ತಿಯರನ್ನು ಭಾರತ ಪುರುಷ ತಂಡಕ್ಕೆ ಹೋಲಿಕೆ ಮಾಡುವಂತಿದೆ. ಮಹಿಳಾ ತಂಡ ಹೊಡಿಬಡಿ ಆಟಗಾರ್ತಿ ಸ್ಮತಿ ಮಂದನಾ, ವೀರೇಂದ ಸೆಹವಾಗ್‌ಗೆ, ತಂಡದ ನಾಯಕಿ ಮಿಥಾಲಿ ರಾಜ್ ಅವರನ್ನು ವಿರಾಟ್ ಕೊಹ್ಲಿಗೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ವೇದಾ ಕೃಷ್ಣಮೂರ್ತಿ ಅವರನ್ನು ಸಿಕ್ಸರ್ ವೀರ ಯುವರಾಜ್ ಸಿಂಗ್‌ಗೆ ಮತ್ತು ಹರ್ಮನ್‌ಪ್ರೀತ್ ಕೌರ್ ಅವರನ್ನು ಮ್ಯಾಚ್ ಫಿನಿಷರ್ ಎಂ.ಎಸ್.ಧೋನಿಗೆ ಹೋಲಿಕೆ ಮಾಡಲಾಗುತ್ತಿದೆ.
200 ವಿಕೆಟ್ ಪಡೆದ ಜೂಲನ್
ಏಕದಿನ ಪಂದ್ಯಗಳಲ್ಲಿ ಈಗಾಗಲೇ ಅತಿಹೆಚ್ಚು ವಿಕೆಟ್ ಪಡೆದು ದಾಖಲೆ ನಿರ್ಮಿಸಿರುವ ಭಾರತದ ಸ್ಟಾರ್ ಬೌಲರ್ ಜೂಲನ್ ಗೋಸ್ವಾಮಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ತಂಡಕ್ಕೆ ಟಿ20 ಸ್ಪೆಷಲಿಸ್ಟ್
ತಂಡಕ್ಕೆ ಇತ್ತೀಚೆಗೆ ಪದಾರ್ಪಣೆ ಮಾಡಿದ ಜಮ್ಮಾಯಿ ರೋಡ್ರಿಗೋಸ್ ಬ್ಯಾಟ್ ಮಾಡಿದ ಮೂರು ಟಿ20 ಪಂದ್ಯಗಳಲ್ಲಿ ಒಟ್ಟು 81 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಫೈನಲ್‌ನಲ್ಲಿ ಒತ್ತಡದ ನಡುವೆಯೂ ರೋಡ್ರಿಗೋಸ್ 44 ರನ್ ಗಳಿಸುವುದರೊಂದಿಗೆ ಅನುಭವಿ ಮಿಥಾಲಿ ರಾಜ್ ಅವರೊಂದಿಗೆ 98 ರನ್ ಜೊತೆಯಾಟದ ಮೂಲಕ ಭಾರತ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಆ ಹಿನ್ನೆಲೆಯಲ್ಲಿ ರೋಡ್ರಿಗೋಸ್ ಟಿ20 ಮಾದರಿಯ ಸ್ಪೆಷಲಿಸ್ಟ್ ಆಟಗಾರ್ತಿಯಾಗಲಿದ್ದಾರೆ ಎಂದು ಟಿ20 ಸರಣಿಯನ್ನು ಮುನ್ನಡೆಸಿದ ಹರ್ಮನ್‌ಪ್ರೀತ್ ಕೌರ್ ಭವಿಷ್ಯ ನುಡಿದಿದ್ದಾರೆ.
ಮಿಂಚಿದ ಬೌಲರ್
ದಕ್ಷಿಣ ಆಫ್ರಿಕಾ ಸರಣಿಯುದ್ದಕ್ಕೂ ವಿದೇಶಿ ಪಿಚ್‌ಗಳಲ್ಲಿ ಭಾರತದ ವೇಗ ಹಾಗೂ ಸ್ಪಿನ್ ಬೌಲರ್‌ಗಳು ಮೇಲುಗೈ ಸಾಧಿಸಿದ್ದು ವಿಶೇಷವಾಗಿತ್ತು. ಅಂಜುಂ ಪಾಟೀಲ್, ಪೂಜಾ ವಸ್ತಾಕರ್, ಏಕ್ತಾ ಬಿಸ್ಟ್, ರಾಜೇಶ್ವರಿ ಗಾಯಕ್ವಾಡ್ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು.
ವರವಾಗುತ್ತಿದೆ ನೇರಪ್ರಸಾರ
ವಿಶ್ವಾದ್ಯಂತ ಮಹಿಳಾ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೆ ವಿಶ್ವಕಪ್ ಅಥವಾ ಅತ್ಯಂತ ಹೆಚ್ಚಿನ ಮಹತ್ವ ಹೊಂದಿರುವ ಪಂದ್ಯಗಳನ್ನು ಮಾತ್ರ ನೇರ ಪ್ರಸಾರ ಮಾಡುತ್ತಿದ್ದ ಕ್ರೀಡಾ ಚಾಲನ್‌ಗಳು ಇತ್ತೀಚಿನ ದಿನಗಳಲ್ಲಿ ಮಹಿಳಾ ತಂಡಗಳ ನಡುವಿನ ಪ್ರತಿಯೊಂದು ಪಂದ್ಯವನ್ನೂ ನೇರ ಪ್ರಸಾರ ಮಾಡುತ್ತಿವೆ. ಇದು ಮಹಿಳಾ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಆಟಗಾರ್ತಿಯರಿಗೆ ಮತ್ತು ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ವರವಾಗುತ್ತಿದೆ.
ಚುಟುಕು ಕ್ರಿಕೆಟ್‌ನಲ್ಲಿ ಮಿಥಾಲಿ ಅಬ್ಬರ ಮೂರು ಏಕದಿನ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ ಮಿಥಾಲಿ ರಾಜ್ ಚುಟುಕು ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದು ವಿಶೇಷವಾಗಿತ್ತು. ಮೂರು ಏಕದಿನ ಪಂದ್ಯಗಳಲ್ಲಿ ಕೇವಲ 65 ರನ್‌ಗಳಿಸಿದ ಮಿಥಾಲಿ, ಚುಟುಕು ಕ್ರಿಕೆಟ್‌ನಲ್ಲಿ ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ ಒಟ್ಟು 192 ರನ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.