ಚುಟುಕು ಸರಣಿ: 2-1ರಿಂದ ಗೆದ್ದ ಭಾರತ
Team Udayavani, Nov 8, 2017, 9:07 AM IST
ತಿರುವನಂತಪುರ: ಭಾರೀ ಮಳೆಯಿಂದ 8 ಓವರ್‌ಗಳಿಗೆ ಸೀಮಿತ ಗೊಂಡ ಮಂಗಳವಾರದ ನಿರ್ಣಾಯಕ ಟಿ20 ಪಂದ್ಯವನ್ನು 6 ರನ್ನುಗಳಿಂದ ಗೆದ್ದ ಭಾರತ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಇದು ಕಿವೀಸ್ ವಿರುದ್ಧ ಟೀಮ್ ಇಂಡಿಯಾಕ್ಕೆ ಒಲಿದ ಮೊದಲ ಟಿ20 ಸರಣಿ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 67 ರನ್ ಬಾರಿಸಿದರೆ, ನ್ಯೂಜಿ ಲ್ಯಾಂಡ್ 8 ಓವರ್‌ಗಳಲ್ಲಿ 6 ವಿಕೆಟಿಗೆ 61 ರನ್ ಮಾಡಿ ಶರಣಾಯಿತು. ಸಣ್ಣ ಪಂದ್ಯವಾದ್ದರಿಂದ ಮುನ್ನುಗ್ಗಿ ಬಾರಿಸಲು ಹೋದ ಭಾರತದ ಆರಂಭಿ ಕರಾದ ಶಿಖರ್ ಧವನ್ (6) ಮತ್ತು ರೋಹಿತ್ ಶರ್ಮ (8) ಅವರು ಟಿಮ್ ಸೌಥಿ ಪಾಲಾದ 3ನೇ ಓವರಿನ ಸತತ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. ಆಗ ಭಾರತ 15 ರನ್ ಮಾಡಿತ್ತು. ಮತ್ತೆ 15 ರನ್ ಒಟ್ಟುಗೂಡುವಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ (13) ಪೆವಿಲಿಯನ್ ಸೇರಿಕೊಂಡರು. ಈ ವಿಕೆಟ್ ಸೋಧಿ ಪಾಲಾಯಿತು. ಬಳಿಕ ಅವರು ಅಯ್ಯರ್ (6) ವಿಕೆಟನ್ನೂ ಹಾರಿಸಿದರು. ಮನೀಷ್ ಪಾಂಡೆ 17 ರನ್ ಮಾಡಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ಭಾರತದ ಸರದಿಯಲ್ಲಿ ಪಾಂಡೆ ಅವರದೇ ಹೆಚ್ಚಿನ ಸ್ಕೋರ್ ಆಗಿತ್ತು. ಹಾರ್ದಿಕ್ ಪಾಂಡ್ಯ (14) ಮತ್ತು ಧೋನಿ (0) ಔಟಾಗದೆ ಉಳಿದರು.
ಸತತವಾಗಿ ಸುರಿಯುತ್ತಲೇ ಇದ್ದ ಮಳೆಯಿಂದಾಗಿ ಪಂದ್ಯಕ್ಕೆ ಭಾರೀ ಅಡ ಚಣೆಯಾಯಿತು. ಕೊನೆಗೂ ರಾತ್ರಿ 9 ಗಂಟೆ ಬಳಿಕ ಮಳೆ ನಿಂತಿದ್ದರಿಂದ ಆಟದ ಆರಂಭದ ಸಾಧ್ಯತೆ ತೆರೆದುಕೊಂಡಿತು. 9.15ಕ್ಕೆ ಟಾಸ್ ಹಾರಿಸಲಾಯಿತು. ಈ ಪಂದ್ಯಕ್ಕಾಗಿ ಭಾರತ 2 ಬದಲಾವಣೆ ಮಾಡಿಕೊಂಡಿತು. ಅಕ್ಷರ್ ಪಟೇಲ್ ಮತ್ತು ಸಿರಾಜ್ ಬದಲು ಪಾಂಡೆ ಹಾಗೂ ಕುಲದೀಪ್ ಯಾದವ್ ಅವರನ್ನು ಆಡಿ ಸಿತು. ನ್ಯೂಜಿಲ್ಯಾಂಡ್ ಮಿಲೆ° ಬದಲು ಟಿಮ್ ಸೌಥಿಗೆ ಅವಕಾಶ ನೀಡಿತು.
ಸ್ಕೋರ್‌ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಸ್ಯಾಂಟ್ನರ್ ಬಿ ಸೌಥಿ 8
ಶಿಖರ್ ಧವನ್ ಸಿ ಸ್ಯಾಂಟ್ನರ್ ಬಿ ಸೌಥಿ 6
ವಿರಾಟ್ ಕೊಹ್ಲಿ ಸಿ ಬೌಲ್ಟ್ ಬಿ ಸೋಧಿ 13
ಶ್ರೇಯಸ್ ಅಯ್ಯರ್ ಸಿ ಗಪ್ಟಿಲ್ ಬಿ ಸೋಧಿ 6
ಮನೀಷ್ ಪಾಂಡೆ ಸಿ ಕಾಲಿನ್ ಬಿ ಬೌಲ್ಟ್ 17
ಹಾರ್ದಿಕ್ ಪಾಂಡ್ಯ ಔಟಾಗದೆ 14
ಎಂ.ಎಸ್. ಧೋನಿ ಔಟಾಗದೆ 0
ಇತರ 3
ಒಟ್ಟು (8 ಓವರ್‌ಗಳಲ್ಲಿ 5 ವಿಕೆಟಿಗೆ) 67
ವಿಕೆಟ್ ಪತನ: 1-15, 2-15, 3-30, 4-48, 5-62.
ಬೌಲಿಂಗ್:
ಟ್ರೆಂಟ್ ಬೌಲ್ಟ್ 2-0-13-1
ಮಿಚೆಲ್ ಸ್ಯಾಂಟ್ನರ್ 2-0-16-0
ಟಿಮ್ ಸೌಥಿ 2-0-13-2
ಐಶ್ ಸೋಧಿ 2-0-23-2
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಬಿ ಭುವನೇಶ್ವರ್ 1
ಕಾಲಿನ್ ಮುನ್ರೊ ಸಿ ಶರ್ಮ ಬಿ ಬುಮ್ರಾ 7
ಕೇನ್ ವಿಲಿಯಮ್ಸನ್ ರನೌಟ್ 8
ಗ್ಲೆನ್ ಫಿಲಿಪ್ಸ್ ಸಿ ಧವನ್ ಬಿ ಕುಲದೀಪ್ 11
ಗ್ರ್ಯಾಂಡ್‌ಹೋಮ್ ಔಟಾಗದೆ 17
ಹೆನ್ರಿ ನಿಕೋಲ್ಸ್ ಸಿ ಅಯ್ಯರ್ ಬಿ ಬುಮ್ರಾ 2
ಟಾಮ್ ಬ್ರೂಸ್ ರನೌಟ್ 4
ಮಿಚೆಲ್ ಸ್ಯಾಂಟ್ನರ್ ಔಟಾಗದೆ 3
ಇತರ 8
ಒಟ್ಟು (8 ಓವರ್‌ಗಳಲ್ಲಿ 6 ವಿಕೆಟಿಗೆ) 61
ವಿಕೆಟ್ ಪತನ: 1-8, 2-8, 3-28, 4-28, 5-39, 6-48,
ಬೌಲಿಂಗ್:
ಭುವನೇಶ್ವರ್ ಕುಮಾರ್ 2-0-18-1
ಜಸ್‌ಪ್ರೀತ್ ಬುಮ್ರಾ 2-0-9-2
ಯುಜ್ವೇಂದ್ರ ಚಾಹಲ್ 2-0-8-0
ಕುಲದೀಪ್ ಯಾದವ್ 1-0-10-1
ಹಾರ್ದಿಕ್ ಪಾಂಡ್ಯ 1-0-11-0
ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬುಮ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.