ಭಾರತಕ್ಕೆ 6 ರನ್ ರೋಚಕ ಗೆಲುವು
Team Udayavani, Oct 30, 2017, 6:50 AM IST
ಕಾನ್ಪುರ: ಬೃಹತ್ ಮೊತ್ತದ ಸೆಣಸಾಟದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ತಂಡವನ್ನು ಆರು ರನ್ನಿನಿಂದ ಸೋಲಿಸಿದ ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ರೋಹಿತ್ ಮತ್ತು ಕೊಹ್ಲಿ ಅವರ ಅಮೋಘ ಶತಕದಿಂದ ಭಾರತ ಆರು ವಿಕೆಟಿಗೆ 337 ರನ್ನುಗಳ ದಾಖಲೆಯ ಮೊತ್ತ ಪೇರಿಸಿದರೆ ನ್ಯೂಜಿಲ್ಯಾಂಡ್ ಗೆಲುವಿನ ಸನಿಹಕ್ಕೆ ಬಂದರೂ ಅಂತಿಮ ಹಂತದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ದಾಳಿಯಿಂದ ಒತ್ತಡಕ್ಕೆ ಒಳಗಾಗಿ 7 ವಿಕೆಟಿಗೆ 331 ರನ್ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲನ್ನು ಕಂಡಿತು.
ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಂ ಅವರ ಹೋರಾಟದ ಅರ್ಧಶತಕದಿಂದಾಗಿ ನ್ಯೂಜಿಲ್ಯಾಂಡ್ ರೋಚಕ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಬುಮ್ರಾ ಮಾರಕವಾಗಿ ದಾಳಿ ನಡೆಸಿದ್ದರಿಂದ ಭಾರತ ಮೇಲುಗೈ ಸಾಧಿಸುವಂತಾಯಿತು. ಅಂತಿಮ ಓವರಿನಲ್ಲಿ ನ್ಯೂಜಿಲ್ಯಾಂಡ್ ಗೆಲುವಿನ 15 ರನ್ ಬೇಕಿತ್ತು. ಆದರೆ ಬುಮ್ರಾ ಆ ಓವರಿನಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟು ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ತನ್ನ 10 ಓವರ್‌ಗಳ ದಾಳಿಯಲ್ಲಿ ಅವರು 47 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು.ರೋಹಿತ್ ಶರ್ಮ ಪಂದ್ಯಶ್ರೇಷ್ಠ ಮತ್ತು ವಿರಾಟ್ ಕೊಹ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಸ್ಕೋರ್‌ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಸೌಥಿ ಬಿ ಸ್ಯಾಂಟ್ನರ್ 147
ಶಿಖರ್ ಧವನ್ ಸಿ ವಿಲಿಯಮ್ಸನ್ ಬಿ ಸೌಥಿ 14
ವಿರಾಟ್ ಕೊಹ್ಲಿ ಸಿ ವಿಲಿಯಮ್ಸನ್ ಬಿ ಸೌಥಿ 113
ಹಾರ್ದಿಲ್ ಪಾಂಡ್ಯ ಸಿ ಸೌಥಿ ಬಿ ಸ್ಯಾಂಟ್ನರ್ 8
ಎಂ.ಎಸ್. ಧೋನಿ ಸಿ ಮುನ್ರೊ ಬಿ ಮಿಲೆ° 25
ಕೇದಾರ್ ಜಾಧವ್ ಸಿ ಗಪ್ಟಿಲ್ ಬಿ ಮಿಲೆ° 18
ದಿನೇಶ್ ಕಾರ್ತಿಕ್ ಔಟಾಗದೆ 4
ಇತರ 8
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 337
ವಿಕೆಟ್ ಪತನ: 1-29, 2-259, 3-273, 4-302, 5-331, 6-337.
ಬೌಲಿಂಗ್:
ಟಿಮ್ ಸೌಥಿ 10-0-66-2
ಟ್ರೆಂಟ್ ಬೌಲ್ಟ್ 10-0-81-0
ಆ್ಯಡಂ ಮಿಲೆ° 10-0-64-2
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 8-0-57-0
ಮಿಚೆಲ್ ಸ್ಯಾಂಟ್ನರ್ 10-0-58-2
ಕಾಲಿನ್ ಮುನ್ರೊ 2-0-10-0
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಸಿ ಕಾರ್ತಿಕ್ ಬಿ ಬುಮ್ರಾ 10
ಕಾಲಿನ್ ಮುನ್ರೊ ಬಿ ಚಾಹಲ್ 75
ಕೇನ್ ವಿಲಿಯಮ್ಸನ್ ಸಿ ಧೋನಿ ಬಿ ಚಾಹಲ್ 64
ರಾಸ್ ಟಯ್ಲರ್ ಸಿ ಜಾಧವ್ ಬಿ ಬುಮ್ರಾ 39
ಟಾಮ್ ಲಾಥಂ ರನೌಟ್ 65
ಹೆನ್ರಿ ನಿಕೋಲ್ಸ್ ಬಿ ಕುಮಾರ್ 37
ಗ್ರ್ಯಾಂಡ್‌ಹೋಮ್ ಔಟಾಗದೆ 8
ಮಿಚೆಲ್ ಸ್ಯಾಂಟ್ನರ್ ಸಿ ಧವನ್ ಬಿ ಬುಮ್ರಾ 9
ಟಿಮ್ ಸೌಥಿ ಔಟಾಗದೆ 4
ಇತರ: 20
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 331
ವಿಕೆಟ್ ಪತನ: 1-44, 2-153, 3-168, 4-247, 5-306, 6-312, 7-326
ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-92-1
ಜಸ್‌ಪ್ರೀತ್ ಬುಮ್ರಾ 10-0-47-3
ಹಾರ್ದಿಕ್ ಪಾಂಡ್ಯ 5-0-47-0
ಅಕ್ಷರ್ ಪಟೇಲ್ 7-0-40-0
ಕೇಧಾರ್ ಜಾಧವ್ 8-0-54-0
ಯುಜ್ವೇಂದ್ರ ಚಾಹಲ್ 10-0-47-2
ಪಂದ್ಯಶ್ರೇಷ್ಠ: ರೋಹಿತ್ ಶರ್ಮ
ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ
ಭಾರತದ ಇನ್ನಿಂಗ್ಸ್
ರೋಹಿತ್, ಕೊಹ್ಲಿ ಶತಕ ಸಂಭ್ರಮ
ಶಿಖರ್ ಧವನ್ (14) ಅವರನ್ನು ಅಗ್ಗಕ್ಕೆ ಕಳೆದುಕೊಂಡ ಭಾರತಕ್ಕೆ ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಜೋಡಿಯ ಮ್ಯಾರಥಾನ್ ಇನ್ನಿಂಗ್ಸ್ ಆಧಾರವಾಯಿತು. ಇವರಿಬ್ಬರೂ ವೈಯಕ್ತಿಕ ಶತಕಗಳೊಂದಿಗೆ ರಂಜಿಸುವ ಜತೆಗೆ, ದ್ವಿತೀಯ ವಿಕೆಟಿಗೆ ದ್ವಿಶತಕದ ಜತೆಯಾಟ ನಡೆಸಿ “ಗ್ರೀನ್‌ಪಾರ್ಕ್’ನಲ್ಲಿ ಮೆರೆದರು.
7ನೇ ಓವರಿನ ಆರಂಭದಲ್ಲಿ ಜತೆಯಾದ ರೋಹಿತ್-ಕೊಹ್ಲಿ 42ನೇ ಓವರ್ ತನಕ ನ್ಯೂಜಿಲ್ಯಾಂಡ್ ದಾಳಿಯನ್ನು ದಂಡಿಸುತ್ತ ಸಾಗಿದರು, 2ನೇ ವಿಕೆಟಿಗೆ 230 ರನ್ ಪೇರಿಸಿದರು. ಹೀಗಾಗಿ ಭಾರತದ ಮೊತ್ತ 337ರ ತನಕ ಬೆಳೆಯಿತು. ಇದು ಕಾನ್ಪುರದ ಏಕದಿನ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ರನ್. 2015ರಲ್ಲಿ ದಕ್ಷಿಣ ಆಫ್ರಿಕಾ 5ಕ್ಕೆ 303 ರನ್ ಪೇರಿಸಿದ ದಾಖಲೆ ಪತನಗೊಂಡಿತು.
ಇವರಲ್ಲಿ ಮೊದಲ ಶತಕ ರೋಹಿತ್ ಶರ್ಮ ಅವರಿಂದ ದಾಖಲಾಯಿತು. 106 ಎಸೆತಗಳಿಂದ 15ನೇ ಸೆಂಚುರಿ ಪೂರೈಸಿದ ರೋಹಿತ್ 147ರ ತನಕ ಬೆಳೆದರು. 138 ಎಸೆತಗಳ ಈ ಬ್ಯಾಟಿಂಗ್ ವೈಭವದ ವೇಳೆ 18 ಬೌಂಡರಿ, 2 ಸಿಕ್ಸರ್ ಸಿಡಿಯಿತು. ಕಳೆದ ಸಲ ದಕ್ಷಿಣ ಆಫ್ರಿಕಾ ವಿರುದ್ಧ ಕಾನ್ಪುರದಲ್ಲಿ ಆಡಿದ ವೇಳೆ ರೋಹಿತ್ 150 ರನ್ ಬಾರಿಸಿದ್ದರು. ರವಿವಾರವೂ “ಫುಲ್ ಫ್ಲೋ’ನಲ್ಲಿದ್ದ ರೋಹಿತ್, ಇನ್ನೇನು ಈ ಗಡಿ ಮುಟ್ಟಲಿದ್ದಾರೆ ಎನ್ನುವಷ್ಟರಲ್ಲಿ ಸ್ಯಾಂಟ್ನರ್ ಮೋಡಿಗೆ ಸಿಲುಕಿದರು.
ಮುಂಬಯಿಯಲ್ಲಿ 121 ರನ್ ಮಾಡಿ ಶತಕವೀರರ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ಕೊಹ್ಲಿ, ಕಾನ್ಪುರದಲ್ಲಿ 113 ರನ್ ಬಾರಿಸಿದರು. ಅವರ 100 ರನ್ 96 ಎಸೆತಗಳಲ್ಲಿ ಬಂತು. ಒಟ್ಟು 106 ಎಸೆತ ಎದುರಿಸಿ 9 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ಈ ಸಾಧನೆಯ ವೇಳೆ ಅವರು ಏಕದಿನದಲ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದರು.
ಆರಂಭದಲ್ಲಿ ರೋಹಿತ್-ಕೊಹ್ಲಿ ಎಚ್ಚರಿಕೆಯ ಆಟವಾಡಿದರು. 100 ರನ್ನಿಗೆ 18.4 ಓವರ್ ಬೇಕಾಯಿತು. ಕಾನ್ಪುರ ಟ್ರ್ಯಾಕ್ ಬ್ಯಾಟಿಂಗಿಗೆ ಸಹಕರಿಸಲಿದೆ ಎಂಬುದು ಖಾತ್ರಿಯಾದ ಬಳಿಕ ಬಿರುಸಿನ ಆಟಕ್ಕಿಳಿದರು. 200 ರನ್ 35.1 ಓವರ್‌ಗಳಿಂದ ಹರಿದು ಬಂತು.
ರೋಹಿತ್ ನಿರ್ಗಮನದ ಬಳಿಕ ಭಡ್ತಿ ಪಡೆದು ಬಂದ ಹಾರ್ದಿಕ್ ಪಾಂಡ್ಯ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 8 ರನ್ ಮಾಡಿ ವಾಪಸಾದರು. ಧೋನಿ 17 ಎಸೆತಗಳಿಂದ 25 ರನ್ ಬಾರಿಸಿದರೆ (3 ಬೌಂಡರಿ), ಅಂತಿಮ ಎಸೆತದಲ್ಲಿ ಔಟಾದ ಜಾಧವ್ 10 ಎಸೆತ ಎದುರಿಸಿ 18 ರನ್ ಹೊಡೆದರು (1 ಬೌಂಡರಿ, 1 ಸಿಕ್ಸರ್).
ನ್ಯೂಜಿಲ್ಯಾಂಡ್ ಪರ ಸೌಥಿ, ಮಿಲೆ° ಮತ್ತು ಸ್ಯಾಂಟ್ನರ್ ತಲಾ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್ ಉತ್ತಪ್ಪ
Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.