ರೋಚಕ ಪಂದ್ಯ: ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ
Team Udayavani, Sep 25, 2022, 10:39 PM IST
ಹೈದರಾಬಾದ್: ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಶೌರ್ಯದಿಂದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ರವಿವಾರದ ಹೈದರಾಬಾದ್ ಮುಖಾಮುಖಿಯನ್ನು ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಗೆದ್ದಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 7 ವಿಕೆಟಿಗೆ 186 ಪೇರಿಸಿದರೆ, ಭಾರತ 19.5 ಓವರ್‌ಗಳಲ್ಲಿ 4 ವಿಕೆಟಿಗೆ 187 ರನ್ ಹೊಡೆದು ಜಯಭೇರಿ ಮೊಳಗಿಸಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಬೇಕಿದ್ದ ಭಾರತ ಆರಂಭಿಕರಿಬ್ಬರನ್ನು 4 ಓವರ್ ಆಗುವಷ್ಟರಲ್ಲಿ ಕಳೆದುಕೊಂಡಿತು. ರಾಹುಲ್ ಒಂದೇ ರನ್ನಿಗೆ ಆಟ ಮುಗಿಸಿದರೆ, ಸಿಡಿಯವ ಸೂಚನೆ ನೀಡಿದ ನಾಯಕ ರೋಹಿತ್ ಶರ್ಮ 17 ರನ್ ಮಾಡಿ ಔಟಾದರು. 30 ರನ್ನಿಗೆ 2 ವಿಕೆಟ್ ಬಿತ್ತು.
ಈ ಹಂತದಲ್ಲಿ ಜತೆಗೂಡಿದ ವಿರಾಟ್ ಕೊಹ್ಲಿ-ಸೂರ್ಯಕುಮಾರ್ ಯಾದವ್ ಆಸೀಸ್ ಬೌಲರ್‌ಗಳ ಮೇಲೆರಗಿ ಹೋದರು. ಇಬ್ಬರೂ ಸಿಡಿಲಬ್ಬರದ ಆಟವಾಡಿದರು. ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ ಹೋದರು. 62 ಎಸೆತಗಳಲ್ಲಿ 104 ರನ್ ಒಟ್ಟುಗೂಡಿತು. ಸೂರ್ಯ ಕೇವಲ 36 ಎಸೆತಗಳಿಂದ 69 ರನ್ ಸಿಡಿಸಿದರು. 5 ಫೋರ್, 5 ಸಿಕ್ಸರ್ ಬಾರಿಸಿ ಭರಪೂರ ರಂಜನೆ ಒದಗಿಸಿದರು.
ಬಳಿಕ ಕೊಹ್ಲಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತಂದುಕೊಂಡರು. ಅಂತಿಮ ಓವರ್‌ನಲ್ಲಿ 11 ರನ್ ಅಗತ್ಯವಿದ್ದಾಗ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಭಾರತದ ಸವಾಲವನ್ನು ಸುಲಭಗೊಳಿಸಿದರು. ಕೊಹ್ಲಿ ಕೊಡುಗೆ 48 ಎಸೆತಗಳಿಂದ 63 ರನ್ (3 ಬೌಂಡರಿ, 4 ಸಿಕ್ಸರ್). ಪಾಂಡ್ಯ ಅಜೇಯ 25 ರನ್ ಮಾಡಿದರು.
ಆಸ್ಟ್ರೇಲಿಯ
ಕ್ಯಾಮರಾನ್ ಗ್ರೀನ್ ಸಿ ರಾಹುಲ್ ಬಿ ಭುವನೇಶ್ವರ್ 52
ಆರನ್ ಫಿಂಚ್ ಸಿ ಪಾಂಡ್ಯ ಬಿ ಅಕ್ಷರ್ 7
ಸ್ಟೀವನ್ ಸ್ಮಿತ್ ಸ್ಟಂಪ್ಡ್ ಕಾರ್ತಿಕ್ ಬಿ ಚಹಲ್ 9
ಗ್ಲೆನ್ ಮ್ಯಾಕ್ಸ್‌ವೆಲ್ ರನೌಟ್ 6
ಜೋಶ್ ಇಂಗ್ಲಿಸ್ ಸಿ ರೋಹಿತ್ ಬಿ ಅಕ್ಷರ್ 24
ಟಿಮ್ ಡೇವಿಡ್ ಸಿ ರೋಹಿತ್ ಬಿ ಹರ್ಷಲ್ 54
ಮ್ಯಾಥ್ಯೂ ವೇಡ್ ಸಿ ಮತ್ತು ಬಿ ಅಕ್ಷರ್ 1
ಡೇನಿಯಲ್ ಸ್ಯಾಮ್ಸ್ ಔಟಾಗದೆ 28
ಪ್ಯಾಟ್ ಕಮಿನ್ಸ್ ಔಟಾಗದೆ 0
ಇತರ 5
ಒಟ್ಟು (7 ವಿಕೆಟಿಗೆ) 186
ವಿಕೆಟ್ ಪತನ: 1-44, 2-62, 3-75, 4-84, 5-115, 6-117, 7-185.
ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-39-1
ಅಕ್ಷರ್ ಪಟೇಲ್ 4-0-33-3
ಜಸ್‌ಪ್ರೀತ್ ಬುಮ್ರಾ 4-0-50-0
ಹಾರ್ದಿಕ್ ಪಾಂಡ್ಯ 3-0-23-0
ಯಜುವೇಂದ್ರ ಚಹಲ್ 4-0-22-1
ಹರ್ಷಲ್ ಪಟೇಲ್ 2-0-18-1
ಭಾರತ
ಕೆ.ಎಲ್. ರಾಹುಲ್ ಸಿ ವೇಡ್ ಬಿ ಸ್ಯಾಮ್ಸ್ 1
ರೋಹಿತ್ ಶರ್ಮ ಸಿ ಸ್ಯಾಮ್ಸ್ ಬಿ ಕಮಿನ್ಸ್ 17
ವಿರಾಟ್ ಕೊಹ್ಲಿ ಸಿ ಫಿಂಚ್ ಬಿ ಸ್ಯಾಮ್ಸ್ 63
ಸೂರ್ಯಕುಮಾರ್ ಸಿ ಫಿಂಚ್ ಬಿ ಹೇಝಲ್‌ವುಡ್ 69
ಹಾರ್ದಿಕ್ ಪಾಂಡ್ಯ ಔಟಾಗದೆ 25
ದಿನೇಶ್ ಕಾರ್ತಿಕ್ ಔಟಾಗದೆ 1
ಇತರ 11
ಒಟ್ಟು (19.5 ಓವರ್‌ಗಳಲ್ಲಿ 4 ವಿಕೆಟಿಗೆ) 187
ವಿಕೆಟ್ ಪತನ: 1-5, 2-30, 3-134, 4-182.
ಬೌಲಿಂಗ್:
ಡೇನಿಯಲ್ ಸ್ಯಾಮ್ಸ್ 3.5-0-33-2
ಜೋಶ್ ಹೇಝಲ್‌ವುಡ್ 4-0-40-1
ಆ್ಯಡಂ ಝಂಪ 4-0-44-0
ಪ್ಯಾಟ್ ಕಮಿನ್ಸ್ 4-0-40-1
ಕ್ಯಾಮರಾನ್ ಗ್ರೀನ್ 3-0-14-0
ಗ್ಲೆನ್ ಮ್ಯಾಕ್ಸ್‌ವೆಲ್ 1-0-11-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊ*ಲೆ ಪ್ರಕರಣ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.