ಅಯ್ಯರ್ ಭರ್ಜರಿ ಶತಕ : ದಕ್ಷಿಣ ಆಫ್ರಿಕಾ ವಿರುದ್ದ 7 ವಿಕೆಟ್ ಜಯ; ಸರಣಿ ಸಮಬಲ
ಮಂಗಳವಾರ ದೆಹಲಿಯಲ್ಲಿ ಸರಣಿ ನಿರ್ಣಾಯಕ ಪಂದ್ಯ
Team Udayavani, Oct 9, 2022, 9:35 PM IST
ರಾಂಚಿ : ಶ್ರೇಯಸ್ ಅಯ್ಯರ್ ಅಮೋಘ ಶತಕ ಮತ್ತು ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾದ ವಿರುದ್ಧ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ತಂಡದ ಪರ ಮೊಹಮ್ಮದ್ ಸಿರಾಜ್ ಅವರು ಅನನುಭವಿ ಭಾರತೀಯ ಬೌಲಿಂಗ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್ ಗೆ 278 ರನ್ ಗಳಿಗೆ ನಿರ್ಬಂಧಿಸಿದರು.
ಗುರಿ ಬೆನ್ನಟ್ಟಿದ ಭಾರತ ಶ್ರೇಯಸ್ ಅಯ್ಯರ್ ಅವರ ಔಟಾಗದೆ 113 ರನ್(111 ಎಸೆತ) ಅಮೋಘ ಶತಕ ಮತ್ತು ಇಶಾನ್ ಕಿಶನ್ ಅವರ 93 ರನ್ (84) ಗೆಲುವಿಗೆ ದೊಡ್ಡ ಕೊಡುಗೆಯಾಯಿತು. 45.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ಅಮೋಘ ಜಯ ಸಾಧಿಸಿತು.
ನಾಯಕ ಶಿಖರ್ ಧವನ್ 13 ರನ್ ಗಳಿಗೆ ಔಟಾದರು. ಶುಭಮನ್ ಗಿಲ್ 28 ರನ್ ಗಳಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ ಅಜೇಯ 30 ರನ್ ಗಳಿಸಿದರು.
ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಸಿರಾಜ್ 10 ಓವರ್ ಗಳಲ್ಲಿ 1 ಮೇಡನ್ ಓವರ್ ಸೇರಿ 38 ರನ್ ನೀಡಿ 3 ವಿಕೆಟ್ ಪಡೆದು ಗಮನ ಸೆಳೆದರು. ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮೂರು ಪಂದ್ಯಗಳ ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಉಭಯ ತಂಡಗಳು ಮಂಗಳವಾರ ದೆಹಲಿಯಲ್ಲಿ ಸರಣಿ ನಿರ್ಣಾಯಕ ಪಂದ್ಯವನ್ನು ಆಡಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.