ಮಹಿಳಾ ಟಿ20: ಸೋತರೂ ಸರಣಿ ಗೆದ್ದ ಭಾರತ “ಎ’
Team Udayavani, Dec 17, 2017, 7:30 AM IST
ಬೆಳಗಾವಿ: ಕೊನೆ ಕ್ಷಣದಲ್ಲಿ ಭಾರತ ಆಟಗಾರ್ತಿಯರು ಹ್ಯಾಟ್ರಿಕ್ ರನೌಟ್ ಆಗುವ ಮೂಲಕ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ 39 ರನ್ ಸೋಲು ಅನುಭವಿಸಿದೆ. ಸೋತರೂ ಮೊದಲೆರಡು ಪಂದ್ಯ ಗೆದ್ದಿದ್ದರಿಂದ ಭಾರತ 2-1ರಿಂದ ಸರಣಿ ಗೆದ್ದಿತು.
ಇಲ್ಲಿನ ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 20 ಓವರ್‌ಗೆ 7 ವಿಕೆಟ್‌ಗೆ 112 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತದ ಆಟಗಾರ್ತಿಯರು ಸತತ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 73 ರನ್‌ಗಳಿಸಿ ಸೋಲು ಅನುಭವಿಸಿತು.
ಹ್ಯಾಟ್ರಿಕ್ ರನೌಟ್ ಪಂದ್ಯದ ತಿರುವು: 9.1ನೇ ಓವರ್‌ನಲ್ಲಿ ಸ್ವಾಗತಿಕಾ ರಥ, 9.2ಕ್ಕೆ ಎ.ಎ. ಪಾಟೀಲ್ ಹಾಗೂ 9.3 ಓವರ್‌ಗೆ ತನಿಯಾ ಭಾಟಿಯಾ ರನೌಟ್ ಆದರು. ಈ ಮೂವರು ಆಟಗಾರ್ತಿಯರು ಎರಡಂಕಿ ರನ್ ಗಳಿಸಿದ್ದು ಬಿಟ್ಟರೆ 7 ಆಟಗಾರ್ತಿಯರು ಒಂದಂಕಿ ದಾಟಲೂ ಹೆಣಗಾಡಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದ ರುಮಾನಾ ಅಹ್ಮದ್ ಭರ್ಜರಿ 46 ರನ್ ಗಳಿಸಿ ತಂಡಕ್ಕೆ ಅಸರೆಯಾಗಿ ನಿಂತರು. ಆರಂಭಿಕ ಆಟಗಾರರಾದ ಸರ್ಮಿನ್ ಸುಲ್ತಾನ ಹಾಗೂ ಮುರ್ಶಿದಾ ಖತಾನ್ ಕ್ರಮವಾಗಿ 10, 12 ರನ್ ಗಳಿಸಿ ಔಟಾದರು. ಸಲ್ಮಾ ಖತುನ್ 21 ರನ್ ಗಳಿಸಿದರು. ಭಾರತ ತಂಡದ ನಾಯಕಿ ಎ.ಎ.ಪಾಟೀಲ ಹಾಗೂ ಟಿ.ಪಿ. ಕುನ್ವೇರ್ ತಲಾ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾ ಎ 20 ಓವರ್ 112/7 (ರುಮಾನಾ ಅಹ್ಮದ್ 46, ಸಲ್ಮಾ 21, ಎ.ಎ. ಪಾಟೀಲ 17ಕ್ಕೆ 2) ಭಾರತ ಎ ತಂಡ 20 ಓವರ್‌ಗೆ 73/8 (ರಮ್ಯಾ 19, ತರನ್ನುಮ್ ಪಠಾಣ್ 15, ನಹೀದಾ ಅಖ್ತರ್ 14ಕ್ಕೆ 2)
– ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.