ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್: ಭಾರತಕ್ಕೆ ಎರಡು ಚಿನ್ನದ ಪದಕ
Team Udayavani, Feb 20, 2019, 5:00 AM IST
ಸೋಫಿಯ (ಬಲ್ಗೇರಿಯ): ಭಾರತೀಯ ವನಿತಾ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ಮೀನಾ ಕುಮಾರಿ ದೇವಿ “ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್’ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ನಿಖತ್ ಜರೀನ್ 51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಐರಿಶ್ ಮ್ಯಾಂಗೊ ವಿರುದ್ಧ ಗೆಲುವು ದಾಖಲಿಸಿದರು. 54 ಕೆ.ಜಿ. ವಿಭಾಗದಲ್ಲಿ ಮೀನಾ ಕುಮಾರಿ ಕೂಡ ಫಿಲಿಪೈನ್ಸ್‌ನ ಐರಾ ವಿಲೆಗಾಸ್ ಅವರನ್ನು ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ರಕ್ಷಣಾತ್ಮಕವಾಗಿ ಆಡಿದ ಜರೀನ್ ಅವರು ಮ್ಯಾಂಗೊ ಅವರಿಗೆ ಅಂಕ ಗಳಿಸಲು ಅವಕಾಶವನ್ನೇ ನೀಡದೆ 5-0 ಅಂಕಗಳಿಂದ ಗೆದ್ದರು. ಕಳೆದ ವರ್ಷ ಕಂಚಿನ ಪದಕ ಜಯಿಸಿದ್ದ ಮೀನಾ ಕುಮಾರಿ ಈ ಬಾರಿ ತನ್ನ ಪ್ರದರ್ಶನವನ್ನು ಉತ್ತಮಗೊಳಿಸಿ 3-2 ಅಂತರದಿಂದ ವಿಲೆಗಾಸ್ ಅವರ ವಿರುದ್ಧ ಭಾರೀ ಹೋರಾಟ ನಡೆಸಿ ಗೆಲುವು ದಾಖಲಿಸಿದರು.
ಮಂಜು ರಾಣಿಗೆ ಬೆಳ್ಳಿ
48 ಕೆ.ಜಿ. ವಿಭಾಗದ ಫೈನಲ್ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಬಾಕ್ಸರ್ ಮಂಜು ರಾಣಿ ಫಿಲಿಪೈನ್ಸ್
ನ ಪ್ರತಿಸ್ಪರ್ಧಿ ಜೊಸೈ ಗುಬುಕೊ ಅವರ ವಿರುದ್ಧ 2-3 ಅಂಕಗಳ ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಸೋಮವಾರದ ಸೆಮಿಫೈನಲ್ ಪಂದ್ಯಗಳಲ್ಲಿ ಪಿವಿಲೋ ಬಸುಮತರಿ (64 ಕೆ.ಜಿ.), ನೀರಜ್ (60 ಕೆ.ಜಿ.), ಲೌಲಿನಾ ಬೊರ್ಗಹೈನ್ (69 ಕೆ.ಜಿ.) ಸೋತು ಕಂಚಿನ ಪದಕ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.