ಭಾರತೀಯ ಕ್ರೀಡಾಪಟುಗಳಿಗೆ ಇನ್ನೂ ಲಭಿಸಿಲ್ಲ ವೀಸಾ!
Team Udayavani, Mar 23, 2018, 7:30 AM IST
ಹೊಸದಿಲ್ಲಿ: ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ಗೆ ಇನ್ನು ಬಾಕಿಯಿರೋದು ಬರೀ ಎರಡು ವಾರಗಳಷ್ಟೇ. ಆದರೆ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಭಾರತೀಯ ತಂಡ ವೀಸಾ ವನ್ನು ಎದುರು ನೋಡುತ್ತಿದೆ. ಈ ನಡುವೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎಸ್) ತಂಡದಲ್ಲಿನ ಆ್ಯತ್ಲೀಟ್ಸ್, ತರಬೇತು ದಾರರು, ಸಹಾಯ ಸಿಬಂದಿಯನ್ನು ವಿಂಗಡಿಸುವುದರಲ್ಲೇ ಮಗ್ನವಾಗಿದೆ!
ಭಾರತೀಯ ಒಲಿಂಪಿಕ್ಸ್ ಸಮಿತಿ ಪ್ರಕಟಿಸಿರುವ ಕಾಮನ್ವೆಲ್ತ್ ಗೇಮ್ಸ್‌ಗೆ ತೆರಳಲಿರುವ ಆ್ಯತ್ಲೀಟ್‌ಗಳು, ಅಧಿ ಕಾರಿಗಳ ಪಟ್ಟಿಯ ಪ್ರಕಾರ ಇನ್ನೂ ಸುಮಾರು 109 ಮಂದಿ ವೀಸಾ ಅರ್ಜಿಯ ಅನುಮೋದನೆಗಾಗಿ ಕಾಯುತ್ತಿದ್ದಾರೆ. ಈ ಸಾಲಿನಲ್ಲಿ ಎರಡು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ವನಿತಾ ಕುಸ್ತಿಪಟುಗಳಾದ ಬಬಿತಾ ಕುಮಾರಿ, ವಿನೇಶ್ ಪೊಗಟ್, ಪೂಜಾ ಧಂಡಾ, ಹಾಕಿ ಆಟಗಾರರಾದ ಲಲಿತ್ ಉಪಾಧ್ಯಾಯ, ಸವಿತಾ, ಬ್ಯಾಡ್ಮಿಂಟನ್ ಆಟಗಾರ್ತಿ ಋತ್ವಿಕಾ ಶಿವಾನಿ ಮೊದಲಾದವರು ಸೇರಿರುವುದು ಅಚ್ಚರಿ ಮೂಡಿಸಿದೆ.
ಸಾಲು ಸಾಲು ಶೂಟರ್
ಶೂಟಿಂಗ್ ವಿಭಾಗದ ಬಹು ತೇಕ ಸ್ಪರ್ಧಿಗಳು ವೀಸಾಕ್ಕಾಗಿ ಕಾಯುತ್ತಿರುವುದು ವಿಪರ್ಯಾಸ. ಚೈನ್ ಸಿಂಗ್, ಜಿತು ರೈ, ಸಂಜೀವ್ ರಜಪೂತ್, ಗಗನ್ ನಾರಂಗ್, ದೀಪಕ್ ಕುಮಾರ್, ಅನಿಶ್ ಭನ್ವಾಲ, ನೀರಜ್ ಕುಮಾರ್, ಮೊಹ್ಮದ್ ಅಶಬ್, ವನಿತಾ ವಿಭಾಗದ ಅಂಜುಮ್ ಮೌಡ್ಗಿಲ್, ತೇಜಸ್ವಿನಿ ಸಾವಂತ್, ಹೀನಾ ಸಿಧು, ಸೀಮಾ ತೋಮರ್, ಮೆಹುಲಿ ಘೋಷ್, ಮನು ಭಾಕೆರ, ಶ್ರೇಯಸಿ ಸಿಂಗ್ ಅವರಿಗೂ ವಿಸಾ ಅನುಮೋದನೆಯಾಗಿಲ್ಲ.
ಇವರೊಂದಿಗೆ ಹಾಕಿ ತಂಡದ ವಿಶ್ಲೇಷಣಾ ತರಬೇತುದಾರ ಕ್ರಿಸ್ಟೋಫರ್ ನಿಕೋಲಸ್, ವನಿತಾ ಕೋಚ್ ಡೇವಿಡ್ ಲಾನ್ ಜಾನ್, ಪುರುಷ ಬಾಕ್ಸಿಂಗ್‌ನ ವಿದೇಶಿ ಕೋಚ್ ಸಾಂಟಿಯಾಗೊ ಡೇನಿಯೆಲ್, ಬಾಸ್ಕೆಟ್‌ಬಾಲ್ ಮುಖ್ಯ ಕೋಚ್ ಜೋರನ್ ವಿಸಿಕ್ ಮತ್ತು ವನಿತಾ ತಂಡದ ಕೋಚ್ ರಾಜೀಂದರ್ ಸಿಂಗ್ ಕೂಡ ವೀಸಾ ನಿರೀಕ್ಷೆಯಲ್ಲಿದ್ದಾರೆ.
ಎ. 4ರಿಂದ 15ರ ವರೆಗೆ ನಡೆಯ ಲಿರುವ ಈ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡದಲ್ಲಿ ಒಟ್ಟು 328 ಮಂದಿಯಿದ್ದು, ಇದರಲ್ಲಿ 222 ಆ್ಯತ್ಲೀಟ್‌ಗಳು, 106 ಅಧಿಕಾರಿಗಳು ಸೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.