Paris Paralympics 2024: ನೂತನ ಭರವಸೆಯಲ್ಲಿ ಭಾರತ…
Team Udayavani, Aug 29, 2024, 7:50 AM IST
ಪ್ಯಾರಿಸ್: ಭಾರತದ ಕ್ರೀಡಾ ಪಟುಗಳು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯ ಲಿದ್ದಾರೆ. ಗುರುವಾರದಿಂದ ಸ್ಪರ್ಧೆಗಳು ಆರಂಭ ವಾಗಲಿವೆ.
ಕೇವಲ 31 ಪದಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಈವರೆಗೆ ಗೆದ್ದಿರುವುದು 31 ಪದಕ ಮಾತ್ರ. ಇದರಲ್ಲಿ 9 ಚಿನ್ನ, 12 ಬೆಳ್ಳಿ ಹಾಗೂ 10 ಕಂಚು ಸೇರಿವೆ. ಆದರೆ ಈ ಬಾರಿ 20ರಿಂದ 25 ಪದಕಗಳ ಗುರಿ ಹಾಕಿಕೊಳ್ಳ ಲಾಗಿದೆ. ಸ್ಪರ್ಧಿಸುತ್ತಿರುವ ಕ್ರೀಡಾಳುಗಳ ಸಂಖ್ಯೆಯೂ ಹೆಚ್ಚಿರುವುದರಿಂದ ನಿರೀಕ್ಷೆಯೂ ಹೆಚ್ಚಿದೆ.
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ಭಾರತದ ಪಾಲಿಗೆ ಬಂಪರ್ ಆಗಿ ಪರಿಣಮಿಸಿತ್ತು. ಒಟ್ಟು 31 ಪದಕಗಳಲ್ಲಿ 19 ಪದಕಗಳು ಟೋಕಿಯೊ ಕೂಟವೊಂದರಲ್ಲೇ ಒಲಿದಿದ್ದವು. ಈ ಬಾರಿ ಇದನ್ನು ಮೀರಿ ನಿಲ್ಲುವುದು ಭಾರತದ ಗುರಿಯಾಗಿದೆ.
ಗುರುವಾರ ಬ್ಯಾಡ್ಮಿಂಟನ್, ಟೇಕ್ವಾಂಡೊ ಮತ್ತು ವನಿತಾ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ. ಬ್ಯಾಡ್ಮಿಂಟನ್ ನಲ್ಲಿ ಭಾರತ ಭಾರೀ ನಿರೀಕ್ಷೆ ಇರಿಸಿ ಕೊಂಡಿದೆ. ಈವರೆಗಿನ 9 ಚಿನ್ನಗಳಲ್ಲಿ 2 ಬ್ಯಾಡ್ಮಿಂಟನ್ ನಲ್ಲೇ ಒಲಿದಿವೆ. ಆದರೆ ಟೋಕಿಯೊ ಚಾಂಪಿಯನ್ ಪ್ರಮೋದ್ ಭಗತ್ ಅಮಾನತುಗೊಂಡಿರುವುದು ಭಾರತಕ್ಕೊಂದು ಹಿನ್ನಡೆ. ಉಳಿದಂತೆ ಎಸ್.ಎಲ್. ಯತಿರಾಜ್, ಟಿ. ಮುರುಗೇಶನ್, ಮನ್‌ದೀಪ್ ಕೌರ್, ಮಾನಸಿ ಜೋಶಿ, ಸುಕಾಂತ್ ಕದಮ್, ತರುಣ್ ಧಿಲ್ಲಾನ್ ಮೊದಲಾದವರು ಭರವಸೆ ಮೂಡಿಸಿದ್ದಾರೆ.
ಪ್ಲೇಸ್ ಡೆ ಲಾ ಕಾಂಕಾರ್ಡ್‌ನಲ್ಲಿ ಅದ್ದೂರಿ ಆರಂಭ
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬುಧ ವಾರ ರಾತ್ರಿ ಅದ್ದೂರಿ ಚಾಲನೆ ಲಭಿಸಿತು. ಪ್ಯಾರಿಸ್‌ನ ಜನಪ್ರಿಯ ತಾಣ ಪ್ಲೇಸ್ ಡೆ ಲಾ ಕಾಂಕಾರ್ಡ್‌ನಲ್ಲಿ ಈ ಸಮಾರಂಭ ವಿಜೃಂಭಣೆಯಿಂದ ಜರಗಿತು. ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟ ದಲ್ಲಿ ಭಾಗಿಯಾಗಿರುವ ಎಲ್ಲ ದೇಶ ಗಳ ಕ್ರೀಡಾಪಟುಗಳು ತಮ್ಮ ದೇಶದ ಧ್ವಜದೊಂದಿಗೆ ಉದ್ಘಾಟನಾ ಸಮಾ ರಂಭದಲ್ಲಿ ಪಾಲ್ಗೊಂಡರು.
ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಕೊಲ್ಲಲ್ಪಟ್ಟ ರಾಜ ಮನೆತನದವರಿಗೆ ಪ್ಯಾರಾಲಿಂಪಿಕ್ಸ್‌ಗೆ ಆಹ್ವಾನ ನೀಡಲಾಗಿತ್ತು. ಅದರಂತೆ “ರಾಯಲ್ ಫ್ಯಾಮಿಲಿ’ಯ ಕೆಲವು ಸದಸ್ಯರು ಆರಂಭೋತ್ಸವದ ವೇಳೆ ಹಾಜರಿದ್ದು ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಉದ್ಘಾಟನಾ ಸಮಾರಂಭದಲ್ಲಿ ಜಾವೆ ಲಿನ್ ಎಸೆತ ಗಾರ ಸುಮಿತ್ ಅಂಟಿಲ್ ಹಾಗೂ ಶಾಟ್ ಪುಟರ್ ಭಾಗ್ಯಶ್ರೀ ಜಾಧವ್ ಭಾರತದ ಧ್ವಜಧಾರಿಗಳಾಗಿದ್ದರು.
ಮೊದಲ ದಿನವೇ 22 ಪದಕ ಸ್ಪರ್ಧೆ
ಪ್ಯಾರಾಲಿಂಪಿಕ್ಸ್ ಸ್ಪರ್ಧೆಗಳು ಗುರು ವಾರ ದಿಂದ ಶುರುವಾಗಲಿವೆ. ಮೊದಲ ದಿನವೇ 22 ಪದಕ ಸ್ಪರ್ಧೆಗಳು ನಡೆ ಯ ಲಿವೆ. ಎರಡರಲ್ಲಿ ಭಾರತದ ಸ್ಪರ್ಧಿ ಗಳಿದ್ದಾರೆ.
16 ಕೋಟಿ ಟಿಕೆಟ್‌ಗಳ ಮಾರಾಟ?!
ಈ ಬಾರಿಯ ಪ್ಯಾರಾಲಿಂಪಿಕ್ಸ್ ಕೂಟ ವನ್ನು ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಕರು ವೀಕ್ಷಿಸಲಿದ್ದಾರೆ ಎಂದು ಆರ್ಟಿಸ್ಟಿಕ್ ನಿರ್ದೇಶಕ ಥಾಮಸ್ ಜಾಲಿ ಹೇಳಿ ದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಆಯೋ ಜಕರು, ಸುಮಾರು 16 ಕೋಟಿಯಷ್ಟು ಪ್ಯಾರಾ ಲಿಂಪಿಕ್ಸ್ ಟಿಕೆಟ್‌ಗಳು ಮಾರಾಟವಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.