ಭಾರತದ ನಿರಾಕರಣೆ: ಹಗಲು-ರಾತ್ರಿ ಟೆಸ್ಟ್ ರದ್ದು
Team Udayavani, May 9, 2018, 6:00 AM IST
ಸಿಡ್ನಿ: ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುವುದನ್ನು ರದ್ದುಗೊಳಿಸಿದೆ. ಇದರ ಬದಲು ಬೆಳಗ್ಗಿನ ಅವಧಿಯಲ್ಲಿ ಈ ಟೆಸ್ಟ್ ನಡೆಸಲಾಗುತ್ತದೆ ಎಂದು ಆಸ್ಟ್ರೇಲಿಯ ಕ್ರಿಕೆಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಅಡಿಲೇಟ್‌ನಲ್ಲಿ ಡಿ. 6ರಿಂದ 10ರ ವರೆಗೆ ನಡೆಯುವ ಟೆಸ್ಟ್ ಪಂದ್ಯವನ್ನು ಪಿಂಕ್ ಚೆಂಡಿನೊಂದಿಗೆ ಆಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಭಾರತೀಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆಯಲಾಗಿತ್ತು. ಆದರೆ ಪ್ರಸ್ತಾಪಿತ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಆಡಲು ನಾನು ಸಿದ್ಧನಾಗಿಲ್ಲವೆಂದು ತಿಳಿಸಿದ ಬಿಸಿಸಿಐ ಪತ್ರ ಸಿಕ್ಕಿದ ಕಾರಣ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯಸ್ಥ ಜೇಮ್ಸ್ ಸದರ್‌ಲ್ಯಾಂಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಈ ಟೆಸ್ಟ್ ಪಂದ್ಯವನ್ನು ಹಗಲಿನಲ್ಲಿ ನಡೆಸಲಾಗುವುದನ್ನು ದೃಢಪಡಿಸುತ್ತಿದ್ದೇವೆ ಎಂದವರು ಖಚಿತಪಡಿಸಿದರು.
ಹಗಲು-ರಾತ್ರಿ ಟೆಸ್ಟ್‌ಗೆ ಟಿವಿ ವೀಕ್ಷಕರು ಹೆಚ್ಚು ಮತ್ತು ಟ್ವೆಂಟಿ20 ಯಿಂದ 5 ಪಂದ್ಯಗಳ ಟೆಸ್ಟ್ ಅನ್ನು ಪಾರು ಮಾಡಲು ಇದು ಸಹಕಾರಿ ಎಂದು ಸದರ್‌ಲ್ಯಾಂಡ್ ಹೇಳಿದರು.
ವಿಶ್ವದ 2 ಅಗ್ರ ತಂಡಗಳ ನಡುವೆ ಈ ಹೋರಾಟ ನಡೆಯುತ್ತಿದೆ. ಹಾಗಾಗಿ ಮೊದಲ ಟೆಸ್ಟ್ ಪಂದ್ಯ ವನ್ನು ಹಗಲು-ರಾತ್ರಿಯಲ್ಲಿ ನಡೆ ಸಲು ನಮಗೆ ಇಷ್ಟವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಹೌದು. ನಾವು ಹಗಲು-ರಾತ್ರಿ ಟೆಸ್ಟ್ ಆಡುವುದಿಲ್ಲ ಎಂದು ವಿನೋದ್ ರೈ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.