ಭಾರತ ಕ್ರಿಕೆಟ್ ಜೆರ್ಸಿಯಲ್ಲಿನ್ನು ಬೈಜುಸ್ ಹೆಸರು!
ಬೆಂಗಳೂರಿನ ಅಂತರ್ಜಾಲ ಶಿಕ್ಷಣ ಸಂಸ್ಥೆಯ ಲೋಗೊ
Team Udayavani, Jul 26, 2019, 5:32 AM IST
ಮುಂಬಯಿ: ಐದು ವರ್ಷಗಳ ಅವಧಿಗೆ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ಪಡೆದಿದ್ದ ಚೀನ ಮೂಲದ ಒಪ್ಪೊ ಮೊಬೈಲ್ ಕಂಪನಿ, ತನ್ನ ಹಕ್ಕುಗಳನ್ನು ಬೆಂಗಳೂರು ಮೂಲದ “ಬೈಜುಸ್’ ಅಂತರ್ಜಾಲ ಆಧಾರಿತ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಿದೆ.
ಒಪ್ಪೊ 1079 ಕೋಟಿ ರೂ.ಗಳನ್ನು ಬಿಸಿಸಿಐಗೆ ನೀಡಿತ್ತು ಎಂದು ಹೇಳಲಾಗಿದೆ. ಆದರೆ ಬೈಜುಸ್ ಎಷ್ಟು ಹಣ ನೀಡುತ್ತದೆ ಎನ್ನುವುದು ಗೊತ್ತಾಗಿಲ್ಲ. ಇದುವರೆಗೆ ಒಪ್ಪೊ ಒಂದು ದ್ವಿಪಕ್ಷೀಯ ಪಂದ್ಯಕ್ಕೆ 4.61 ಕೋಟಿ ರೂ., ಐಸಿಸಿ ಪ್ರಾಯೋಜಿತ ಪಂದ್ಯಕ್ಕೆ 1.56 ಕೋಟಿ ರೂ. ನೀಡುತ್ತಿತ್ತು.
ಬೈಜುಸ್ ಸಂಸ್ಥೆ ಶೈಕ್ಷಣಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತದೆ. ಹಾಗೆಯೇ ಅಂತರ್ಜಾಲದಲ್ಲಿ ಶಿಕ್ಷಣ ತರಬೇತಿಯನ್ನು ನೀಡುತ್ತದೆ. ಸೆ. 15ರಿಂದ ಭಾರತೀಯ ಜೆರ್ಸಿಯಲ್ಲಿ ಬೈಜುಸ್ ಹೆಸರು ಕಾಣಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.