ಭಾರತದ ಕ್ರಿಕೆಟಿಗರಿನ್ನು ದುಪ್ಪಟ್ಟು ಶ್ರೀಮಂತರು!
Team Udayavani, Mar 23, 2017, 12:14 PM IST
ಹೊಸದಿಲ್ಲಿ: ಈಗಾಗಲೇ ಶ್ರೀಮಂತಿಕೆಯಲ್ಲಿ ತೇಲುತ್ತಿರುವ ಭಾರತದ ಕ್ರಿಕೆಟಿಗರು ಈಗ ಮತ್ತಷ್ಟು ಶ್ರೀಮಂತರಾಗಲಿದ್ದಾರೆ. ಸರ್ವೋಚ್ಚ ನ್ಯಾಯಪೀಠ ನೇಮಿಸಿದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬಿಸಿಸಿಐನ “ಎ’ ದರ್ಜೆ ಗುತ್ತಿಗೆ ಹೊಂದಿರುವವರು ಇನ್ನು ವಾರ್ಷಿಕ 2 ಕೋಟಿ ರೂ. ವೇತನ ಪಡೆಯಲಿದ್ದಾರೆ, “ಬಿ’ ದರ್ಜೆಯವರಿಗೆ 1 ಕೋಟಿ ರೂ., “ಸಿ’ ದರ್ಜೆಯವರಿಗೆ 50 ಲಕ್ಷ ರೂ. ಸಿಗಲಿದೆ. ಇದು ಕಳೆದ ವರ್ಷದ ವೇತನಕ್ಕೆ ಹೋಲಿಸಿ ದರೆ ದುಪ್ಪಟ್ಟು! ಈ ನೂತನ ವೇತನ 2016, ಅ. ಒಂದರಿಂದಲೇ ಅನ್ವಯವಾಗುತ್ತವೆ.
ಇದುವರೆಗೆ “ಬಿ’ ದರ್ಜೆಯ ಗುತ್ತಿಗೆ ಹೊಂದಿದ್ದ ಜಡೇಜ, ಪೂಜಾರ ಈಗ “ಎ’ ದರ್ಜೆಗೇರಿದ್ದಾರೆ. ಇದು ಇಬ್ಬರ ಪಾಲಿಗೆ ಸಂತಸದ ಸುದ್ದಿ. ಆದರೆ ತಂಡದ ಖ್ಯಾತ ನಾಮ ಆಟಗಾರ ಕಳೆದ ಬಾರಿ “ಬಿ’ ದರ್ಜೆ ಗುತ್ತಿಗೆ ಹೊಂದಿದ್ದ ಸುರೇಶ್ ರೈನಾ ಗುತ್ತಿಗೆ ವ್ಯಾಪ್ತಿಯಿಂದಲೇ ಹೊರಬಿದ್ದಿದ್ದಾರೆ.
ಇದಕ್ಕೂ ಮುನ್ನ “ಎ’ ದರ್ಜೆ ಆಟ ಗಾರರು 1 ಕೋಟಿ ರೂ., “ಬಿ’ ದರ್ಜೆ 50 ಲಕ್ಷ ರೂ., “ಸಿ’ ದರ್ಜೆ 25 ಲಕ್ಷ ರೂ. ಪಡೆ ಯುತ್ತಿದ್ದರು.
ಎ ದರ್ಜೆ: ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಆರ್. ಅಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.
ಬಿ ದರ್ಜೆ: ರೋಹಿತ್ ಶರ್ಮ, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಸಾಹಾ, ಬುಮ್ರಾ, ಯುವರಾಜ್ ಸಿಂಗ್.
ಸಿ ದರ್ಜೆ: ಧವನ್, ರಾಯುಡು, ಅಮಿತ್ ಮಿಶ್ರಾ, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಪಾಂಡ್ಯ, ಆಶಿಷ್ ನೆಹ್ರಾ, ಕೇದಾರ್ ಜಾಧವ್, ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನ್‌ದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾದೂìಲ್ ಠಾಕೂರ್, ರಿಷಬ್ ಪಂತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.