ಕುಂಬ್ಳೆ ಸ್ಥಾನಕ್ಕೆಅರ್ಜಿಸಲ್ಲಿಸಲು ಭಾರತೀಯ ಕ್ರಿಕೆಟಿಗರೇ ಸಿದ್ಧರಿಲ್ಲ
Team Udayavani, Jun 1, 2017, 11:50 AM IST
ನವದೆಹಲಿ: ಭಾರತ ಕ್ರಿಕೆಟ್‌ನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿ ಎಂದು ಬಿಸಿಸಿಐ ಆಹ್ವಾನ ನೀಡಿವಾರವೇ ಕಳೆದಿದೆ. ವೀರೇಂದ್ರ ಸೆಹವಾಗ್‌ಗೆ ಸ್ವತಃ ಬಿಸಿಸಿಐ ತಾನೇ ಆಹ್ವಾನ ನೀಡಿದೆ ಎಂದು ಹೇಳಲಾಗಿದೆ.
ಆದರೆ ಸೆಹವಾಗ್ ಸೇರಿದಂತೆ ಇದುವರೆಗೆ ಯಾವುದೇ ಭಾರತೀಯ ಕ್ರಿಕೆಟ್‌ಗೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿಲ್ಲ. ಆದ್ದರಿಂದ ಬಿಸಿಸಿಐ ಅನುಭವಿ ವಿದೇಶಿ ಕೋಚ್ ಟಾಮ್ ಮೂಡಿಯತ್ತ ಒಲವು ತೋರಿದೆ ಎಂದು ವರದಿಗಳಾಗಿವೆ.
ಕ್ರಿಕೆಟ್ ದಂತಕಥೆ ಕುಂಬ್ಳೆಯಂತಹ ವ್ಯಕ್ತಿ ಹುದ್ದೆಯಲ್ಲಿರುವುದರಿಂದ ಅವರ ಗೌರವಾರ್ಥವಾಗಿ ಭಾರತೀಯ ಕ್ರಿಕೆಟಿಗರು ಅರ್ಜಿ ಸಲ್ಲಿಸಲು ಮುಂದಾಗಿಲ್ಲ ಎಂದು ಊಹೆ ಮಾಡಲಾಗಿದೆ. ಮತ್ತೂಂದು ವಿಶ್ಲೇಷಣೆಗಳ ಪ್ರಕಾರ, ಬಿಗಿ ನಿಲುವಿನ ಕೊಹ್ಲಿ ಜೊತೆ ಕೆಲಸ ಮಾಡುವುದು ಅಪಾಯಕಾರಿಯೆನ್ನುವ ಭಾವನೆಯೂ ಇದೆ.
ಕೋಚ್ ಸ್ಥಾನಕ್ಕೆ ಬಿಸಿಸಿಐನ ಕೆಲವರು ಸೆಹವಾಗ್ ಬಗ್ಗೆ ಆಸಕ್ತಿ ತೋರಿದ್ದರು. ಆದರೆ ವೀರೂ ಇಂತಹ ಯತ್ನಕ್ಕೆ ಕೈಹಾಕಿಲ್ಲ.
ಮತ್ತೂಂದು ಕಡೆ ರಾಹುಲ್ ದ್ರಾವಿಡ್ ಆಗಲಿ ಎಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ದ್ರಾವಿಡ್ ಆಸಕ್ತಿ ತೋರಿಲ್ಲವೇ? ಅಥವಾ
ಬೇರೇಧಿನಾದರೂ ಅಡ್ಡಿಗಳಿವೆಯೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಹಿಂದೆ ತಂಡದ ನಿರ್ದೇಶಕರಾಗಿದ್ದ ರವಿಶಾಸಿŒ ಕುರಿತೂ ಆಸಕ್ತಿಯಿದ್ದರೂ ಈ ಹಿಂದೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಆಯ್ಕೆ ಮಾಡದ ಬಿಸಿಸಿಐ ಕ್ರಮದ ಬಗ್ಗೆ ಅವರು ಸಿಟ್ಟಾಗಿರುವುದು ಖಚಿತ.
ಮತ್ತೆ ಕುಂಬ್ಳೆ?: ಕೋಚ್ ಸ್ಥಾನದಲ್ಲಿ ಪರಿಣಿತಿ ಹೊಂದಿರುವ ಮೇಲಿನ ಪ್ರಮುಖ ಕ್ರಿಕೆಟಿಗರ್ಯಾರೂ ಮುಂದೆ ಬರದಿರುವುದರಿಂದ ಮತ್ತೆ ಕುಂಬ್ಳೆಯೇ ಮುಂದುವರಿಯುವ ಸಾಧ್ಯತೆ ಕಾಣಿಸಿದೆ. ಆದರೆ ಕುಂಬ್ಳೆ ಇದಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕಾಗಿದೆ. ಕೋಚ್ ಆಗಿ ಯಶಸ್ವಿ ಪ್ರದರ್ಶನ ನೀಡಿರುವ ಅವರು ಇಂತಹ ಕೆಲಸಕ್ಕೆ ಮುಂದಾಗುತ್ತಾರಾ ಎನ್ನುವುದು ಪ್ರಶ್ನೆ.
ಕೊಹ್ಲಿ ಒಪ್ಪುತ್ತಾರಾ?: ಕುಂಬ್ಳೆ ಮುಂದುವರಿಸಲು ಬಿಸಿಸಿಐ ಮುಂದಾದರೂ ಅದಕ್ಕೆ ಕೊಹ್ಲಿ ಒಪ್ಪುತ್ತಾರಾ ಎನ್ನುವುದು ಇನ್ನೊಂದು ಪ್ರಶ್ನೆ. ತೀವ್ರ ಭಿನ್ನಾಭಿಪ್ರಾಯ ಹೊಂದಿರುವುದರಿಂದ, ಕೆಲವು ನಿರ್ಧಾರಗಳು ಕೊಹ್ಲಿಗೆ ಇಷ್ಟವಾಗದಿರುವುದರಿಂದ ಕೋಚ್ ಆಗಿ ಕುಂಬ್ಳೆ ಬೇಡವೇ ಬೇಡವೆಂದು ಕೊಹ್ಲಿ ಹೇಳಿದ್ದಾರೆನ್ನಲಾಗಿದೆ. ಬಿಸಿಸಿಐ ಕೂಡ ಕುಂಬ್ಳೆ ಬಗ್ಗೆ ಮುನಿದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಮತ್ತೆ ಕುಂಬ್ಳೆ ಆಯ್ಕೆ ಹೇಗೆ ಎನ್ನುವುದು ಪ್ರಶ್ನೆ ಕುಂಬ್ಳೆ, ಕೊಹ್ಲಿ ಜೊತೆ ಬಿಸಿಸಿಐ ಚರ್ಚೆ ಸಾಧ್ಯತೆ ಮೂಲಗಳ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಎಂ.ವಿ.ಶ್ರೀಧರ್ ಅವರು ಕುಂಬ್ಳೆ ಮತ್ತು ಕೊಹ್ಲಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಬ್ಬರ ಅಭಿಪ್ರಾಯ ಕೇಳುವ ಯತ್ನ ಮಾಡಲಿದ್ದಾರೆ. ಇಬ್ಬರನ್ನೂ ಒಂದುಗೂಡಿಸುವ ಯತ್ನ ಮಾಡಿ ಯಶಸ್ವಿ ಜೋಡಿಯನ್ನು ಮತ್ತೆ ಮುಂದುವರಿಸುವ ಯೋಚನೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.