ಕೋವಿಡ್ ನಿಂದ ಗುಣಮುಖ; ಹಾಕಿ ಆಟಗಾರರ ಬಿಡುಗಡೆ
Team Udayavani, Aug 17, 2020, 9:32 PM IST
ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾಗಿದ್ದ ಭಾರತದ 6 ಮಂದಿ ಹಾಕಿ ಆಟಗಾರರು ಸಂಪೂರ್ಣವಾಗಿ ಚೇತರಿಸಿಕೊಂಡು ಸೋಮವಾರ ಬೆಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ನಾಯಕ ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ವರುಣ್ ಕುಮಾರ್, ಕೃಷ್ಣ ಬಹಾದೂರ್ ಪಾಠಕ್ ಮತ್ತು ಮನ್‌ದೀಪ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ. 10-12ರ ಅವಧಿಯಲ್ಲಿ ಇವರಿಗೆ ಸೋಂಕು ತಗುಲಿತ್ತು. ಅಭ್ಯಾಸಕ್ಕಾಗಿ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಆಗಮಿಸಿದ ವೇಳೆ ಹಾಕಿ ಆಟಗಾರರ ಕೋವಿಡ್ ಟೆಸ್ಟ್ ನಡೆಸಲಾಗಿತ್ತು.
ಬುಧವಾರದಿಂದ ಹಾಕಿ ಶಿಬಿರ ಪುನರಾರಂಭಗೊಳ್ಳಲಿದೆ. ಆದರೆ ಕೊರೊನಾದಿಂದ ಚೇತರಿಸಿಕೊಂಡ ಆಟಗಾರರು ಸರಕಾರದ ಆರೋಗ್ಯ ಮಾರ್ಗಸೂಚಿಯಂತೆ ಒಂದು ವಾರ ಅಥವಾ 10 ದಿನ ಐಸೊಲೇಶನ್‌ನಲ್ಲಿ ಇರಲಿದ್ದು, ಅನಂತರ ಅಭ್ಯಾಸಕ್ಕೆ ಇಳಿಯಲಿದ್ದಾರೆ. ಒಟ್ಟು 33 ಮಂದಿ ಪುರುಷರು ಹಾಗೂ 24 ಮಂದಿ ವನಿತಾ ಹಾಕಿಪಟುಗಳು ಅಭ್ಯಾಸಕ್ಕೆಂದು ಸಾಯ್ ಕೇಂದ್ರಕ್ಕೆ ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.