ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ
Team Udayavani, Aug 6, 2021, 6:10 AM IST
ಭಾರತ ಗುರುವಾರ ಕಂಚು ಗೆದ್ದಿರುವುದು ದೇವರು ಕೊಟ್ಟ ದೊಡ್ಡ ಕಾಣಿಕೆ. ನಾನು ಈ ಹಿಂದೆಯೇ ಭಾರತ ಪದಕ ಗೆಲ್ಲಲಿದೆ ಎಂದು ಹೇಳಿದ್ದೆ. ನನ್ನ ನಂಬಿಕೆ ಸತ್ಯ ವಾಗಿದೆ. ಶುಕ್ರವಾರ ಭಾರತ ಮಹಿಳಾ ತಂಡ ಬ್ರಿಟನ್ ಎದುರು ಕಂಚಿನ ಪದಕಕ್ಕಾಗಿ ಹೋರಾಡಲಿದೆ. ಇಲ್ಲೂ ಪದಕ ಗೆಲ್ಲಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೂಂದಿಲ್ಲ. ಇದೇ ಸಾಧನೆಯನ್ನು ಕಾಯ್ದು ಕೊಂಡರೆ ಮತ್ತೆ ನಾವು ಒಲಿಂಪಿಕ್ಸ್‌ಗಳಲ್ಲಿ ಚಿನ್ನವನ್ನೇ ಗೆಲ್ಲಲು ಸಾಧ್ಯವಿದೆ.
ಇದಕ್ಕಾಗಿ ಭಾರತ ಸರಕಾರ, ಕೇಂದ್ರ ಕ್ರೀಡಾ ಸಚಿವಾಲಯ, ರಾಜ್ಯ ಸರಕಾರಗಳು, ಹಾಕಿ ಇಂಡಿ ಯಾಗಳೆಲ್ಲ ಸೇರಿ ಪರಿಶ್ರಮ ವಹಿಸಿವೆ. ಅದಕ್ಕಾಗಿ ದೊಡ್ಡ ಮೊತ್ತವನ್ನು ವ್ಯಯಿಸಲಾ ಗಿದೆ. ಅದಕ್ಕೆ ಗೌರವ ಸಲ್ಲಬೇಕು. 20ನೇ ಶತಮಾನದಲ್ಲಿ ಭಾರತೀಯ ಪುರುಷರ ಹಾಕಿ ತಂಡ 8 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕ ಗೆದ್ದಿತ್ತು. 21ನೇ ಶತಮಾನದಲ್ಲಿ ಕಂಚಿನ ಪದಕ ಬಂದಿದೆ. ಇದು ಮುಂದೆ ಸುವರ್ಣಯುಗಕ್ಕೆ ನಾಂದಿ ಹಾಡಬೇಕು. ಹಳೆಯ ಸುಂದರ ದಿನಗಳು ಮರುಕಳಿಸಬೇಕು.
ಈ ಸಾಧನೆಗೆ ಎಲ್ಲರೂ ಒಗ್ಗೂಡಬೇಕು. ಮಕ್ಕಳು, ಹೆತ್ತವರು, ಹಾಕಿ ಆಟಗಾರರು, ತರಬೇತುದಾರರು, ಕೇಂದ್ರ, ರಾಜ್ಯ ಸರಕಾರಗಳು, ಹಾಕಿ ಸಂಸ್ಥೆಗಳು, ಕ್ರೀಡಾಶಾಲೆಗಳು, ಭಾರತ ಒಲಿಂಪಿಕ್ಸ್ ಸಂಸ್ಥೆ, ಇತರ ಕ್ರೀಡಾಸಂಸ್ಥೆಗಳೆಲ್ಲ ಸೇರಿ ಹಾಕಿಯ ಗತವೈಭವವನ್ನು ಮರಳಿ ಗಳಿಸಲು ಶ್ರಮಿಸಬೇಕು. ಒಳ್ಳೆಯ ಆಡಳಿತವನ್ನು ತರಬೇಕು. ಹಾಕಿ ಪುನರುಜ್ಜೀವನಕ್ಕಾಗಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಬೇಕು, ಅಧಿಕಾರಿ ಗಳು, ತರಬೇತುದಾರರು ಶ್ರಮವಹಿಸಬೇಕು. ಆಡಳಿತ ಚೆನ್ನಾಗಿ ಆಗಬೇಕು. ಆಗಲೇ ವ್ಯವಸ್ಥೆ ಸರಿಯಾಗಲು, ವೈಭವದ ದಿನಗಳನ್ನು ನೋಡಲು ಸಾಧ್ಯ.
ಮತ್ತೆ ರಾಜ್ಯದ ಆಟಗಾರರು ಕಾಣಿಸಿಕೊಳ್ಳಬೇಕು: ಒಂದು ಕಾಲದಲ್ಲಿ ಕರ್ನಾಟಕದ ಏಳು, ಎಂಟು ಆಟಗಾರರು ಒಲಿಂ ಪಿಕ್ಸ್ ಶಿಬಿರಗಳಲ್ಲಿರುತ್ತಿದ್ದರು. ಈ ಬಾರಿ ಭಾರತ ಪುರುಷ ಹಾಗೂ ಮಹಿಳಾ ತಂಡದಲ್ಲಿ ಒಬ್ಬರೂ ರಾಜ್ಯದ ಆಟ ಗಾರರಿಲ್ಲ. ಈ ಪರಿಸ್ಥಿತಿಯನ್ನು ಸರಿಪಡಿಸುವತ್ತ ರಾಜ್ಯಸರಕಾರ ಗಮನ ಹರಿಸಬೇಕು. ರಾಜ್ಯದ ಮಕ್ಕಳು ಭಾರತೀಯ ತಂಡ, ಪದಕ ಪಡೆಯುವಂತಾಗಬೇಕು.
ಒಂದು ಕಾಲದಲ್ಲಿ ಕರ್ನಾಟಕ, ಹರಿಯಾಣ, ಪಂಜಾಬ್ ಮಾತ್ರವಲ್ಲ ಇಡೀ ದೇಶದ ಮೂಲೆಮೂಲೆಗಳಿಂದ ಆಟ ಗಾರರು ಬರುತ್ತಿದ್ದರು. ಮುಂಬಯಿ, ಭೋಪಾಲ್, ಕೋಲ್ಕ ತಾದಲ್ಲೂ ಆಟಗಾರರಿದ್ದರು. ಭಾರತದ ಮೊದಲ ಒಲಿಂಪಿಕ್ಸ್ ತಂಡದ ನಾಯಕ ಜೈಪಾಲ್ ಸಿಂಗ್ ಮುಂಡಾ ಈಗಿನ ಝಾರ್ಖಂಡ್‌ನವರು. ಈಗ ಝಾರ್ಖಂಡ್, ಈಶಾನ್ಯ ರಾಜ್ಯಗಳು, ದಿಲ್ಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗ ಳಲ್ಲಿ ಮಕ್ಕಳು ಹಾಕಿ ಆಡುತ್ತಿದ್ದಾರೆ. ಇದೊಂದು ಒಳ್ಳೆಯ ಲಕ್ಷಣ. ಈ ಏಕತೆಯಿಂದಲೇ ಬದಲಾವಣೆ ಸಾಧ್ಯವಿದೆ.
ಎಂ.ಪಿ.ಗಣೇಶ್
(ಲೇಖಕರು: ಭಾರತ ಹಾಕಿ ತಂಡದ ಮಾಜಿ ನಾಯಕ. 1973ರ ವಿಶ್ವಕಪ್‌ನಲ್ಲಿ ಬೆಳ್ಳಿ,
1971ರ ವಿಶ್ವಕಪ್‌ನಲ್ಲಿ ಕಂಚು, 1972ರ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ತಂಡದ ಸದಸ್ಯ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.