ಜೂಡೋಪಟು ಎಲ್. ಸುಶೀಲಾದೇವಿಗೆ ರಜತ ಪದಕ
Team Udayavani, Aug 1, 2022, 11:11 PM IST
ಬರ್ಮಿಂಗ್ಹ್ಯಾಮ್: ಜೂಡೋಪಟು ಎಲ್. ಸುಶೀಲಾದೇವಿ 48 ಕೆಜಿ ವಿಭಾಗದಲ್ಲಿ ರಜತ ಪದಕ ಗೆದ್ದು ಸಂಭ್ರಮಿಸಿದರು.
ಸೋಮವಾರದ ಫೈನಲ್ನಲ್ಲಿ ಅವರು ದಕ್ಷಿಣ ಆಫ್ರಿಕಾ ಎದುರಾಳಿ ವಿರುದ್ಧ ಸೋಲನುಭವಿಸಿ ಚಿನ್ನದ ಪದಕದಿಂದ ವಂಚಿತರಾದರು. ಇದು ಈ ಬಾರಿಯ ಗೇಮ್ಸ್ನಲ್ಲಿ ಭಾರತಕ್ಕೆ ಒಲಿದ 7ನೇ ಪದಕ.
ಮಣಿಪುರದ ಪೊಲೀಸ್ ವಿಭಾಗದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ 27 ವರ್ಷದ ಸುಶೀಲಾದೇವಿ ಸೋಮವಾರ ಒಂದೇ ದಿನ 3 ಸ್ಪರ್ಧೆಗಳಲ್ಲಿ ಕಾಣಿಸಿಕೊಂಡರು. ದಿನದ ಮೊದಲ ಪಂದ್ಯದಲ್ಲಿ ಮಲಾವಿಯ ಹ್ಯಾರೀಟ್ ಬಾನ್ಫೇಸ್ ಅವರನ್ನು ಮಣಿಸುವ ಮೂಲಕ ಸೆಮಿಫೈನಲ್ ತಲುಪಿದರು. ಅಲ್ಲಿ ಮಾರಿಶಿಯಸ್ನ ಪ್ರಿಸ್ಕಿಲ್ಲಾ ಮೊರಾಂಡ್ ಅವರನ್ನು ಪರಾಭವಗೊಳಿಸಿದರು.
ವಿಜಯ್ ಕುಮಾರ್ಗೆ ಕಂಚು
ಪುರುಷರ 60 ಕೆಜಿ ವಿಭಾಗದ ರೆಪಿಶೇಜ್ ಸುತ್ತಿನಲ್ಲಿ ವಿಜಯ್ ಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದರು. ಇಲ್ಲಿ ಅವರ ಎದುರಾಳಿ ಆಗಿದ್ದವರು ಸೈಪ್ರಸ್ನ ಪೆಟ್ರೋಸ್ ಕ್ರಿಸ್ಟೋಡುಲೈಡ್ಸ್.
66 ಕೆಜಿ ಸೆಮಿಫೈನಲ್ನಲ್ಲಿ ಸ್ಕಾಟ್ಲೆಂಡ್ನ ಫಿನ್ಲ ಅಲನ್ ವಿರುದ್ಧ ಪರಾಭವಗೊಂಡ ಜಸ್ಲಿàನ್ ಸಿಂಗ್ ಸೈನಿ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ
Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.