ಏಷ್ಯಾಡ್‌ನಲ್ಲೂ ಭಾರತದ ಆ್ಯತ್ಲೀಟ್‌ಗಳ ಸೀರೆಗೆ ಕೊಕ್
Team Udayavani, May 26, 2018, 7:15 AM IST
ಹೊಸದಿಲ್ಲಿ: ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಪಥಸಂಚಲನ ವೇಳೆ ಭಾರತದ ಮಹಿಳಾ ಆ್ಯತ್ಲೀಟ್‌ಗಳಿಗೆ ಸೀರೆ ಬದಲು ಪ್ಯಾಂಟ್ ಹಾಗೂ ಬ್ಲೇಝರ್ ನೀಡಲಾಗಿತ್ತು. ಇದೇ ನಿರ್ಧಾರವನ್ನು ಮುಂಬರುವ ಏಶ್ಯನ್ ಗೇಮ್ಸ್‌ನಲ್ಲೂ ಮುಂದುವರಿಸಲು ಐಒಎ (ಭಾರತೀಯ ಒಲಿಂಪಿಕ್ಸ್ ಸಂಸ್ಥೆ) ನಿರ್ಧರಿಸಿದೆ.
ಶುಕ್ರವಾರ ಈ ವಿಷಯವನ್ನು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಮೆಹ್ತಾ, “ಏಶ್ಯನ್ ಗೇಮ್ಸ್ ಆಗಸ್ಟ್ 18ರಿಂದ ಆರಂಭವಾಗಲಿದೆ. ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಹಿಳಾ ಆ್ಯತ್ಲೀಟ್‌ಗಳ ಸಾಂಪ್ರದಾಯಿಕ ಉಡುಗೆ ಸೀರೆಗೆ ಕೊಕ್ ನೀಡಲಾಗಿತ್ತು. ಮೊದಲ ಸಲ ಇಂಥದೊಂದು ಕ್ರಮ ತೆಗೆದುಕೊಂಡಿದ್ದೆವು. ಆ್ಯತ್ಲೀಟ್‌ಗಳು ಸೀರೆ ಉಡುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಜತೆಗೆ ಮತೋರ್ವ ಆ್ಯತ್ಲೀಟ್ ಸಹಕಾರವೂ ಬೇಕು. ಇದರಿಂದ ಬಹಳ ತೊಂದರೆ, ಜತೆಗೆ ಸಮಯವೂ ಹಾಳಾಗುತ್ತದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ…’ ಎಂದರು.