ಇಂಡಿಯಾ ಓಪನ್: ಫೈನಲ್‌ನಲ್ಲಿ ಎಡವಿದ ಶ್ರೀಕಾಂತ್
Team Udayavani, Apr 1, 2019, 6:00 AM IST
ಹೊಸದಿಲ್ಲಿ: “ಇಂಡಿಯಾ ಓಪನ್’ ಕೂಟದಲ್ಲಿ ಪ್ರಶಸ್ತಿ ಬರಗಾಲವನ್ನು ಕೊನೆಗೊಳಿಸುವ ನಿರೀಕ್ಷೆಯಲ್ಲಿದ್ದ ಮಾಜಿ ಚಾಂಪಿಯನ್ ಕೆ. ಶ್ರೀಕಾಂತ್ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೀಕಾಂತ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಕೇವಲ 46 ನಿಮಿಷಗಳ ಆಟದಲ್ಲಿ 7-21, 20-22 ಗೇಮ್‌ಗಳಿಂದ ಸೋತರು.
ಆರಂಭದಲ್ಲೇ ತೀವ್ರ ಪೈಪೋಟಿ
ಆರಂಭದಿಂದಲೇ ಇವರಿಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಮೊದಲ ಗೇಮ್‌ನಲ್ಲಿ 4-4ರ ಬಳಿಕ 7-7 ಸಮಬಲ ದಾಖಲಾಯಿತು. ಅನಂತರ ಸತತ ತಪ್ಪೆಸಗುತ್ತಲೇ ಹೋದ ಶ್ರೀಕಾಂತ್ ಡ್ಯಾನಿಶ್ ಆಟಗಾರನಿಗೆ ಸಾಟಿಯಾಗಲೇ ಇಲ್ಲ. ಶ್ರೀಕಾಂತ್ ಅಂಕ ಏಳರ ಗಡಿ ದಾಟಲಿಲ್ಲ.
ಗೆಲುವಿನ ಹುಮ್ಮಸ್ಸಿನಲ್ಲಿದ್ದ ವಿಕ್ಟರ್ ದ್ವಿತೀಯ ಗೇಮ್‌ನಲ್ಲಿ 5-1 ಮುನ್ನಡೆ ಕಾಯ್ದುಕೊಂಡರು. ಶ್ರೀಕಾಂತ್ ತಿರುಗಿ ಬಿದ್ದರು. ಡ್ಯಾನಿಶ್ ಆಟಗಾರನನ್ನು ಹಿಂದಿಕ್ಕಿ 14-13 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಇದೇ ಪ್ರದರ್ಶನ ಕಾಯ್ದುಕೊಂಡ ಶ್ರೀಕಾಂತ್ 18-17 ಮುನ್ನಡೆಯೊಂದಿಗೆ ಜಯಕ್ಕೆ ಹತ್ತಿರವಾದರು. 20-20ರ ಸಮಬಲದ ವೇಳೆ ಪಂದ್ಯ ರೋಚಕ ಘಟ್ಟ ಮುಟ್ಟಿತು. ಅನಂತರ ಶ್ರೀಕಾಂತ್ ಸತತ 2 ಅಂಕಗಳನ್ನು ಕಳೆದುಕೊಳ್ಳುವ ಮೂಲಕ ವಿಕ್ಟರ್ ವಿಕ್ಟರಿಗೆ ಕಾರಣರಾದರು.
ಇಂತಾನನ್ ಚಾಂಪಿಯನ್
ವನಿತಾ ಸಿಂಗಲ್ಸ್‌ನಲ್ಲಿ ಥಾಯ್ಲೆಂಡ್‌ನ ರಚನೋಕ್ ಇಂತಾನನ್ ಚೀನದ ಹೀ ಬಿಂಗ್ ಜಿಯಾವೊ ಅವರನ್ನು 21-15, 21-14ರಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.