ಬರ್ಲಿನ್‌ನಲ್ಲಿ ಭಾರತದ ವಿಕಲಚೇತನ ಈಜುಪಟು ಭಿಕ್ಷಾಟನೆ
Team Udayavani, Jul 13, 2017, 7:47 AM IST
ನವದೆಹಲಿ: ಜರ್ಮನಿಯ ಬರ್ಲಿನ್‌ನಲ್ಲಿ ವಿಶ್ವ ವಿಕಲಚೇತನರ ಈಜು ಸರಣಿಯನ್ನು ಮುಗಿಸಿರುವ ಭಾರತದ ಈಜುಪಟುಗಳು
ಅಕ್ಷರಶಃ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ.
ಭಾರತದ ಕ್ರೀಡಾ ವ್ಯವಸ್ಥೆಯಲ್ಲಿರುವ ಅವ್ಯವಸ್ಥೆಯ ದ್ಯೋತಕ ವಾಗಿರುವ ಈ ಸಂಗತಿಯನ್ನು ಆಂಗ್ಲ ಪತ್ರಿಕೆಯೊಂದು ಬಯಲು ಮಾಡಿದೆ. ನಾಗ್ಪುರ ಮೂಲದ ಪೂರ್ಣ ಅಂಧ ಈಜುಪಟು ಕಾಂಚನ ಮಾಲಾ ಪಾಂಡೆ ತಮ್ಮ ದುಸ್ಥಿತಿಯನ್ನು ಹೇಳಿ ಕೊಂಡಿದ್ದು, ತಾವು ಉಳಿದು ಕೊಂಡಿದ್ದ ಹೋಟೆಲ್‌ನಿಂದ ಹಿಡಿದು ಓಡಾಡುವ ಹಣದವರೆಗೆ ಎಲ್ಲವನ್ನೂ ತಾವೇ ಪಾವತಿ ಮಾಡಬೇಕಾ ಯಿತು. ಅದಕ್ಕೆ ಹಣವಿಲ್ಲದೇ ವಿದೇಶಿ ನೆಲದಲ್ಲಿ ಯಾರ್ಯಾರಧ್ದೋ ಬಳಿಯಲ್ಲಿ ಬೇಡಬೇಕಾಯಿತು ಎಂದು ತಿಳಿಸಿದ್ದಾರೆ.
ಜು.3ರಿಂದ 9ವರೆಗೆ ಜರ್ಮನಿಯ ಬರ್ಲಿನ್‌ನಲ್ಲಿ ವಿಕಲಚೇತನರ ವಿಶ್ವ ಈಜು ಸರಣಿ ನಡೆದಿದೆ. ಅತ್ಯಂತ ಕಷ್ಟದಿಂದ ಈ ಕೂಟಕ್ಕೆ ಅರ್ಹತೆ ಪಡೆದ ಕಾಂಚನಮಾಲಾ ಈ ಸಾಧನೆ ಮಾಡಿದ ಭಾರತದ ಏಕೈಕ ಈಜುಪಟು ಎನಿಸಿಕೊಂಡಿದ್ದಾರೆ. ಭಾರತದಿಂದ ಒಟ್ಟು 7 ಮಂದಿ ಈ ಕೂಟದಲ್ಲಿ ಭಾಗವಹಿಸಿದ್ದರು. ಭಾರತದ ಪ್ಯಾರಾಲಿಂಪಿಕ್ ಸಮಿತಿ ಬೇಜವಾಬ್ದಾರಿಯಿಂದ ಬಹು ತೇಕರು ಬರ್ಲಿನ್‌ನಲ್ಲಿ ದುಸ್ಥಿತಿ ಎದು ರಿಸಿದ್ದಾರೆ ಎಂದು ವರದಿ ಹೇಳಿದೆ.
ಕಾಂಚನ ಸಾಧನೆಗಳು
ವಿಶ್ವ ಈಜು ಸರಣಿಯ ಅರ್ಹತಾ ಸುತ್ತಿನಲ್ಲಿ ಕಾಂಚನ ಬೆಳ್ಳಿ ಪದಕ ಗೆದ್ದಿದ್ದಾರೆ. 100 ಮೀ. ಬ್ಯಾಕ್‌ಸ್ಟ್ರೋಕ್, 200 ಮೀ.
ಮೆಡ್ಲೆಯಲ್ಲೂ ವಿಶ್ವ ಸರಣಿಗೆ ಅರ್ಹತೆ ಗಳಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ನಡೆಯುವ ವಿಶ್ವ ಈಜಿಗೂ ಅರ್ಹತೆ ಗಳಿಸಿದ್ದಾರೆ.
ತಮ್ಮ ತಪ್ಪಿಲ್ಲಎಂದ ಪಿಸಿಐಉಪಾಧ್ಯಕ್ಷರು
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಪ್ಯಾರಾಲಿಂಪಿಕ್ ಸಮಿತಿ ಉಪಾಧ್ಯಕ್ಷ ಸಮಸ್ಯೆಗಳಿಗೆಲ್ಲ ಸಾಯ್ ಕಾರಣ ಎಂದು ಆರೋಪಿಸಿದ್ದಾರೆ. ಸಾಯ್ ತಮಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಆದ್ದರಿಂದ ಅಥ್ಲೀಟ್‌ಗಳಿಗೆ ಹಣ ನೀಡಲು ಆಗಲಿಲ್ಲ. ತಾವೀಗ ಲಂಡನ್‌ನಲ್ಲಿ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿದ್ದೇವೆ. ಇಲ್ಲಿ ತಮಗೂ ಹಣದ ಕೊರತೆಯಿದೆ. ಸಾಯ್ ನಮಗೆ 33.16 ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ ಕೂಟದ ಸಂಘಟಕರು 66.32 ಲಕ್ಷ ರೂ. ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಚನ ಮಾಲಾ ಪಾಂಡೆ ಎದುರಿಸಿದ ಸಮಸ್ಯೆಗಳೇನು?
ಸಮಸ್ಯೆ 1
ಕೂಟಕ್ಕೆ 5 ಲಕ್ಷ ರೂ.ಸಾಲ: ಕಾಂಚನ ಮಾಲಾ ಸಮಸ್ಯೆಗಳು ಭಾರತದಿಂದಲೇ ಆರಂಭವಾಯಿತು. ಆಕೆ ಕೂಟಕ್ಕೆ ತೆರಳಲು
ಪಿಸಿಐ ಸಕಾಲಕ್ಕೆ ಹಣದ ನೆರವು ನೀಡಲಿಲ್ಲ. ನಾಗ್ಪುರ ಆರ್‌ಬಿಐ ಶಾಖೆಯಲ್ಲಿ ಸಹಾಯಕಿ ಹುದ್ದೆಯಲ್ಲಿರುವ ಕಾಂಚನ ಇದಕ್ಕಾಗಿ 5 ಲಕ್ಷ ರೂ. ಸಾಲ ಮಾಡಬೇಕಾಯಿತು. ವೀಸಾಕ್ಕಾಗಿಯೂ ಹೆಚ್ಚುವರಿ 15 ಸಾವಿರ ರೂ. ವೆಚ್ಚವಾಯಿತು.
ಸಮಸ್ಯೆ 2
ಸ್ಪರ್ಧಾ ವಿಭಾಗವೇ ತಪ್ಪು 100 ಮೀ. ಬ್ಯಾಕ್‌ಸ್ಟ್ರೋಕ್ ನಲ್ಲಿ ಪಾಲ್ಗೊಳ್ಳಲು ತಮ್ಮ ಅರ್ಜಿಯನ್ನು ಸಲ್ಲಿಸಿದ್ದ ಕಾಂಚನಮಾಲಾಗೆ
ಕೂಟದಲ್ಲಿ ತಮ್ಮ ಸ್ಪರ್ಧೆಯ ವಿಭಾಗ ನೋಡಿ ದಿಗ್ಭ್ರಾಂತಿಯಾಯಿತು. ಅವರ ಹೆಸರನ್ನು 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪಿಸಿಐ ಸೇರಿಸಿತ್ತು. ಇದು ಹೇಗಾಯಿತು ಎಂದು ಆಕೆಗೆ ಗೊತ್ತಾಗಿಲ್ಲ.
ಸಮಸ್ಯೆ 3
ಲಂಚ ಕೇಳಿದ ಕೋಚ್: ಕೂಟದ ವೇಳೆ ನೆರವು ನೀಡಲು ಕನ್ವಲ್ ಜಿತ್ ಸಿಂಗ್ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಅವರು
ಬಹುಭಾಗ ನಾಪತ್ತೆಯಾಗಿ ದ್ದರು. ಸರ್ಕಾರ ಕೋಚ್‌ಗೆ ಕೊಡ ಬೇಕಾದ ಹಣ ನೀಡಿದ್ದರೂ ತಮ್ಮದೇ ಅಥ್ಲೀ ಟ್ ಗಳಿಂದ 7500
ರೂ. ಲಂಚ ಕೇಳಿದ್ದಾರೆ. ಜೊತೆಗೆ ಅಥ್ಲೀಟ್‌ಗಳ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ.
ಸಮಸ್ಯೆ 4
ಹೋಟೆಲ್‌ಗೂ ತಮ್ಮ ಹಣ: ಬರ್ಲಿನ್‌ನಲ್ಲಿ ಉಳಿದುಕೊಂಡಿದ್ದ ಹೋಟೆಲ್ ವೆಚ್ಚ 70,000 ಸಾವಿರ ರೂ., ಊಟದ ಖರ್ಚು 40,000
ರೂ.ಗಳಾಗಿದೆ. ಅದನ್ನು ತಾವೇ ಪಾವತಿ ಮಾಡಿ ಹಣವಿಲ್ಲದೇ ಕೈಖಾಲಿ ಮಾಡಿಕೊಂಡಿದ್ದಾರೆ. ಈ ಹಣ ಹಿಂದಕ್ಕೆ ನೀಡಲಾಗುವುದೆಂಬ
ಯಾವುದೇ ಅಧಿಕೃತ ಭರವಸೆಯೂ ಆಕೆಗೆ ಸಿಕ್ಕಿಲ್ಲ.
ಸಮಸ್ಯೆ 5
ಟಿಕೆಟ್‌ಗೂ ಹಣವಿಲ್ಲ ಬರ್ಲಿನ್‌ನಲ್ಲಿ ಒಮ್ಮೆ ಕೂಟದ ತಾಣದಿಂದ ಹೋಟೆಲ್‌ಗೆ ತೆರಳಲು ಹೊರಟಾಗ ಆಕೆ ಬಳಿ ಹಣವಿರಲಿಲ್ಲ.
ಟ್ರಾಮ್ ಒಂದರಲ್ಲಿ ಟಿಕೆಟ್ ಇಲ್ಲದೇ ಹಿಂದಿರುಗಿ ಹೊರಟರು. ಟಿಕೆಟ್ ಪರಿಶೀಲನೆ ವೇಳೆ ಸಿಕ್ಕಿಬಿದ್ದ ಕಾಂಚನಮಾಲಾಗೆ
ಅಧಿಕಾರಿ 10,000 ರೂ. ದಂಡ ವಿಧಿಸಿದರು. ಅದನ್ನು ಆಕೆ ಹೇಗೆ ಬರಿಸಿದರೋ ದೇವರೆ ಬಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.