ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ದ್ಯುತಿಗೆ ಐಎಎಎಫ್ ಆಹ್ವಾನ
Team Udayavani, Jul 30, 2017, 7:25 AM IST
ನವದೆಹಲಿ: ದೇಹದಲ್ಲಿ ಆ್ಯಂಡ್ರೊಜನ್ ಪ್ರಮಾಣ ಹೆಚ್ಚಾಗಿರುವ ವಿವಾದಕ್ಕೆ ಸಿಲುಕಿರುವ ವೇಗದ ಓಟಗಾರ್ತಿ ದ್ಯುತಿ ಚಾಂದ್ ಮುಂಬರುವ ವಿಶ್ವ ಅಥ್ಲೆಟಿಕ್ಸ್ ಕೂಟದ 100 ಮೀ. ಓಟದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
ಇವರಿಗೆ ಸ್ವತಃ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟ (ಐಎಎಎಫ್) ವಿಶೇಷ ಆಹ್ವಾನ ನೀಡಿದೆ. ಹೀಗಾಗಿ ಏಷ್ಯನ್ ಅಥ್ಲೆಟಿಕ್ಸ್ ಕೂಟದಲ್ಲಿ ದ್ಯುತಿ ಕಂಚಿನ ಪದಕ ಗೆದ್ದಿದ್ದ ದ್ಯುತಿ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು ಏಷ್ಯನ್ ಕೂಟದಲ್ಲಿ ವಿಶ್ವ ಅರ್ಹತಾ ಸಮಯದಲ್ಲಿ ಗುರಿ ತಲುಪಿರಲಿಲ್ಲ. ಹೀಗಿದ್ದರೂ ಇವರಿಗೆ ವಿಶ್ವ ಕೂಟಕ್ಕೆ ಆಹ್ವಾನ ದೊರೆತಿರುವುದಕ್ಕೆ ಒಂದು ಕಾರಣವಿದೆ. ಆ ಕಾರಣವೆನೆಂದರೆ ವಿಶ್ವ ಮಟ್ಟದಲ್ಲಿ 100 ಮೀ. ವಿಭಾಗದಲ್ಲಿ 56 ಮಂದಿಗೆ ಅವಕಾಶವಿದೆ. ಅಷ್ಟು ಮಂದಿ ವಿಶ್ವಮಟ್ಟದಿಂದ ಅರ್ಹತೆ ಪಡೆದಿಲ್ಲವಾದುದರಿಂದ ದ್ಯುತಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಈ ವಿಷಯವನ್ನು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷ ಆದಿಲ್ ಸುಮರಿವಾಲ ಸ್ಪಷ್ಟಪಡಿಸಿದ್ದಾರೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟದಿಂದ ನಮಗೆ ದ್ಯುತಿ ಕಳುಹಿಸಲು ಆಹ್ವಾನ ಬಂದಿದೆ. ಅದನ್ನು ನಾವು ಸ್ವೀಕರಿಸಿದ್ದೇವೆ. ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಸುಮರಿವಾಲ ತಿಳಿಸಿದರು. ಇದೇ ಐಎಎಎಫ್ ದ್ಯುತಿ ಆ್ಯಂಡ್ರೋಜನ್ ಪ್ರಕರಣವನ್ನು ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದಲ್ಲಿ ಮತ್ತೆ ಪ್ರಶ್ನಿಸುವುದಾಗಿ ಹೇಳಿತ್ತು. ಈಗ ಅದೇ ಒಕ್ಕೂಟ ದ್ಯುತಿಗೆ ಆಹ್ವಾನ ನೀಡಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.