12ರ ಹರೆಯದ ಭಾರತೀಯ ಯುವ ಕ್ರಿಕೆಟಿಗ ಲಂಕೆಯಲ್ಲಿ ಸಾವು
Team Udayavani, Sep 7, 2017, 11:09 AM IST
ಹೊಸದಿಲ್ಲಿ : ಹದಿನೇಳರ ಕೆಳ ಹರೆಯದ ತಂಡದಲ್ಲಿ ಕ್ರಿಕೆಟ್ ಆಡುತ್ತಿದ್ದ ಹನ್ನೆರಡು ವರ್ಷ ಪ್ರಾಯದ ಗುಜರಾತಿನ ಭಾರತೀಯ ಕ್ರಿಕೆಟಿಗನೋರ್ವ ಶ್ರೀಲಂಕಾದಲ್ಲಿ ಈಜು ಕೊಳದಲ್ಲಿ ಮುಳುಗಿ ಮೃತ ಪಟ್ಟ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ವರದಿಯಾಗಿದೆ.
ಲಂಕಾ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ 17ರ ಕೆಳ ಹರೆಯದ ತಂಡದ ನಾಲ್ವರು ಸದಸ್ಯರೊಂದಿಗೆ ಪಮನುಗಾಮಾದಲ್ಲಿನ ಹೊಟೇಲ್ ಒಂದರ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನೀರಲ್ಲಿ ಮುಳುಗಿದ ಯುವ ಕ್ರಿಕೆಟಿಗನನ್ನು ತತ್ಕ್ಷಣವೇ ಪಮನುಗಾಮಾ ಆಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಚಿಕಿತ್ಸೆಗೆ ಮುನ್ನವೇ ಕೊನೆಯುಸಿರೆಳೆದನೆಂದು ವರದಿ ತಿಳಿಸಿದೆ.
ಮೃತ ಕ್ರಿಕೆಟಿಗನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಗಾಮಾ ಟೀಚಿಂಗ್ ಹಾಸ್ಪಿಟಲ್ಗೆ ಒಯ್ಯಲಾಗಿದೆ; ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.