WWC – ಚೊಚ್ಚಲ ವಿಶ್ವಕಪ್ ಗೆಲ್ಲುವ ಮಿಥಾಲಿ ಪಡೆ ಕನಸು ನುಚ್ಚುನೂರು
Team Udayavani, Jul 23, 2017, 10:15 PM IST
4 ಬಾರಿ ವಿಶ್ವಚಾಂಪಿಯನ್ ಪಟ್ಟ ಗೆದ್ದ ಇಂಗ್ಲಂಡ್
ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ಮಿಥಾಲಿ ರಾಜ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ಪಟುಗಳ ಆಸೆ ನುಚ್ಚುನೂರಾಗಿದೆ. ಇಂಗ್ಲಂಡ್ ತಂಡ ನೀಡಿದ 228 ರನ್ನುಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲರಾದ ಭಾರತೀಯ ಮಹಿಳಾ ದಾಂಢಿಗರು ಅಂತಿಮವಾಗಿ 48.4 ಓವರುಗಳಲ್ಲಿ 219 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಆತಿಥೇಯರಿಗೆ 9 ರನ್ನುಗಳಿಂದ ಶರಣಾದರು.
48ನೇ ಓವರಿನ ತನಕ ರೋಮಾಂಚಕವಾಗಿ ಸಾಗಿದ ಇಂದಿನ ಈ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಇಂಗ್ಲಂಡ್ ವನಿತೆಯರು ಮಿಥಾಲಿ ಪಡೆ ವಿರುದ್ಧ ತಿರುಗಿಬಿದ್ದಿದ್ದು ವಿಶೇಷವಾಗಿತ್ತು. ಭಾರತಕ್ಕೆ ಪೂನಂ ರಾವತ್ (86) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೆಮಿಫೈನಲ್ ಪಂದ್ಯದ ಹೀರೋಯಿನ್ ಹರ್ಮಾನ್ ಪ್ರೀತ್ ಕೌರ್ (51) ಮತ್ತು ವೇದ ಕೃಷ್ಣಮೂರ್ತಿ (35) ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತುಂಬಿದರು. ಆದರೆ 19 ರನ್ನುಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳು ಉರುಳಿದ್ದು ಮಿಥಾಲಿ ಪಡೆಗೆ ಮಾರಕವಾಯಿತು.
ಇಂಗ್ಲಂಡ್ ಪರ ಮಧ್ಯಮ ವೇಗಿ ಆನ್ಯಾ ಶ್ರುಭೊÕàಲ್ 6 ವಿಕೆಟ್ ಪಡೆದು ಮಿಂಚಿ ಆಂಗ್ಲರ ಪಾಲಿನ ಗೆಲುವಿನ ರೂವಾರಿಯಾಗಿ ಮೂಡಿಬಂದರು. ಅಂತಿಮವಾಗಿ ಭಾರತ 219 ರನ್ನುಗಳಿಗೆ ಆಲೌಟ್ ಆಗಿ ಕೇವಲ 9 ರನ್ನುಗಳಿಂದ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಅವಕಾಶದಿಂದ ವಂಚಿತಗೊಂಡಿತು.
ಭಾರತ ಗೆಲುವಿಗೆ 229ರನ್ ಗುರಿ
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್‌ನ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವಿಗೆ 229 ರನ್‌ಗಳ ಗುರಿ ನೀಡಿದೆ. 10 ಓವರ್‌ಗಳವರೆಗೆ ರಕ್ಷಣಾತ್ಮಕ ಆಟವಾಡಿದ ಇಂಗ್ಲೆಂಡ್ 11 ನೇ ರಾಜೇಶ್ವರಿ ಗಾಯಕ್‌ವಾಡ್ ಎಸೆದ 11 ನೇ ಓವರ್‌ನಲ್ಲಿ 24 ರನ್‌ಗಳಿಸಿದ್ದ ವಿನಿಫೀಲ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಭಾರತ ಪರ ಜೂಲನ್ ಗೋಸ್ವಾಮಿ 3 ವಿಕೆಟ್ ಪಡೆದು ಮಿಂಚಿದರೆ ಪೂನಂ ಯಾದವ್ 2 ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು. ಇಂಗ್ಲೆಂಡ್ ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228ರನ್‌ಗಳಿಸಿದೆ. 6 ಬಾರಿಯ ಚಾಂಪಿಯನ್ ಆಸಿಸ್ ಮಣಿಸಿ ಫೈನಲ್‌ಗೇರಿದ ಭಾರತ ಮೊದಲ ಬಾರಿ ಕಪ್ ಗೆಲ್ಲುವ ಛಲದಲ್ಲಿದ್ದರೆ, ಇಂಗ್ಲೆಂಡ್ 4 ನೇ ಬಾರಿ ಕಪ್ ಗೆಲ್ಲುವ ತವಕದಲ್ಲಿದೆ.
ಕನ್ನಡತಿಯರಿಗೆ ಶುಭಾಶಯಗಳ ಮಹಾಪೂರ
ಮಿಥಾಲಿ ರಾಜ್ ನಾಯಕತ್ವದ ಆಡುವ 11ರ ಬಳಗದಲ್ಲಿ ಇಬ್ಬರು ಕನ್ನಡತಿಯರಿದ್ದು ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್, ಉತ್ತಮ ಫಾರ್ಮ್ನಲ್ಲಿದ್ದಾರೆ. ಇಬ್ಬರಿಗೂ ನಾಡಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದ್ದಾರೆ.
ಸ್ಕೋರ್‌ಪಟ್ಟಿ
ಇಂಗ್ಲೆಂಡ್
ಲಾರೆನ್ ವಿನ್‌ಫೀಲ್ಡ್ ಬಿ ರಾಜೇಶ್ವರಿ 24
ಟಾಮಿ ಬೇಮಾಂಟ್ ಸಿ ಜೂಲನ್ ಬಿ ಪೂನಂ 23
ಸಾರಾ ಟಯ್ಲರ್ ಸಿ ಸುಷ್ಮಾ ಬಿ ಜೂಲನ್ 45
ಹೀತರ್ ನೈಟ್ ಎಲ್‌ಬಿಡಬ್ಲ್ಯು ಪೂನಂ 1
ನಥಾಲಿ ಶಿವರ್ ಎಲ್‌ಬಿಡಬ್ಲ್ಯು ಜೂಲನ್ 51
ಫ್ರಾನ್ ವಿಲ್ಸನ್ ಎಲ್‌ಬಿಡಬ್ಲ್ಯು ಜೂಲನ್ 0
ಕ್ಯಾಥರಿನ್ ಬ್ರಂಟ್ ರನೌಟ್ 34
ಜೆನ್ನಿ ಗನ್ ಔಟಾಗದೆ 25
ಲಾರಾ ಮಾರ್ಷ್ ಔಟಾಗದೆ 14
ಇತರ 11
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 228
ವಿಕೆಟ್ ಪತನ: 1-47, 2-60, 3-63, 4-146, 5-146, 6-164, 7-196.
ಬೌಲಿಂಗ್:
ಜೂಲನ್ ಗೋಸ್ವಾಮಿ 10-3-23-3
ಶಿಖಾ ಪಾಂಡೆ 7-0-53-0
ರಾಜೇಶ್ವರಿ ಗಾಯಕ್ವಾಡ್ 10-1-49-1
ದೀಪ್ತಿ ಶರ್ಮ 9-0-39-0
ಪೂನಂ ಯಾದವ್ 10-0-36-2
ಹರ್ಮನ್‌ಪ್ರೀತ್ ಕೌರ್ 4-0-25-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.