ಮಂಧನಾ ಮಿಂಚಿದರೂ ಸೋತ ವನಿತೆಯರು
Team Udayavani, Feb 10, 2019, 6:29 AM IST
ಹ್ಯಾಮಿಲ್ಟನ್ : ಭಾರತೀಯ ವನಿತಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯದಲ್ಲಿ ಮಿಂಚಿದರೂ ಟೀಮ್ ಇಂಡಿಯಾ ಪಂದ್ಯ ಗೆಲ್ಲಲು ವಿಫಲವಾಯಿತು.
ಇದರೊಂದಿಗೆ ಎಲ್ಲಾ ಮೂರು ಚುಟುಕು ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ವೈಟ್ ವಾಶ್ ಅನುಭವಿಸಿದೆ.
ಸೆಡ್ಡಾನ್ ಪಾರ್ಕ್ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ಅನುಭವಿ ಸೋಫೀ ಡಿವೈನ್ 72 ರನ್ ಸಹಾಯದಿಂದ ನಿಗದಿತ 20 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ನಾಯಕಿ ಆಮಿ ಸ್ಯಾಟರ್ ವೈಟ್ 31 ರನ್ ಗಳಿಸದರೆ ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
162 ರನ್ ಗುರಿ ಬೆನ್ನಟ್ಟಿದ ಭಾರತೀಯ ಮಹಿಳೆಯರು ನಾಲ್ಕು ವಿಕೆಟ್ ನಷ್ಟಕ್ಕೆ ಗಳಿಸಿದ್ದು 159 ರನ್. ಇದರಿಂದ ಎರಡು ವಿಕೆಟ್ ಗಳ ಸೋಲು ಅನುಭವಿಸಬೇಕಾಯಿತು. ಕಳೆದೆರಡು ಪಂದ್ಯಗಳಲ್ಲಿ ವಿಫಲವಾಗಿದ್ದ ಓಪನಿಂಗ್ ಇಂದು ಮತ್ತೆ ಕೈಕೊಟ್ಟಿತು. ಯುವ ಆಟಗಾರ್ತಿ ಪ್ರಿಯಾ ಪೂನಿಯಾ ಮತ್ತೆ ರನ್ ಗಳಿಸಲು ವಿಫಲರಾದರು. ಅವರು ಗಳಿಸಿದ್ದು ಕೃವಲ ಒಂದು ರನ್. ಜೆಮಿಮಾ ರೋಡ್ರಿಗಸ್ 21 ರನ್ ಬಾರಿಸಿದರೂ ಹೆಚ್ಚು ಹೊತ್ತು ಆಡಲಿಲ್ಲ.
ಮಿಂಚಿದ ಮಂಧನಾ: ನ್ಯೂಜಿಲ್ಯಾಂಡ್ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಸ್ಮೃತಿ ಮಂಧನಾ ಇಂದು ಮತ್ತೆ ಉತ್ತಮ ಪ್ರದರ್ಶನ ನೀಡಿದರು. 62 ಎಸೆತಗಳಿಂದ 86 ರನ್ ಬಾರಿಸಿದ ಮಂಧನಾ ಡಿವೈನ್ ಗೆ ವಿಕೆಟ್ ಒಪ್ಪಿಸಿ ತಮ್ಮ ಚೊಚ್ಚಲ ಟಿ-ಟ್ವೆಂಟಿ ಶತಕದಿಂದ ವಂಚಿತರಾದರು. ಮಂಧನಾ ಔಟ್ ಆಗುವ ವೇಳೆಗೆ ಭಾರತ 15.3 ಓವರ್ ನಲ್ಲಿ123 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು.
ಮಂಧನಾ ವಿಕೆಟ್ ಪತನದ ನಂತರ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ತಂಡವನ್ನು ಆಧರಿಸುವ ಕೆಲಸ ಮಾಡಿದರೂ ರನ್ ವೇಗವಾಗಿ ಬರಲಿಲ್ಲ. ಕೊನೆಯ ಓವರ್ ನಲ್ಲಿ ಗೆಲ್ಲಲು 16 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ಭಾರತ ಗಳಿಸಿದ್ದು 13 ರನ್. ಮಿಥಾಲಿ ರಾಜ್ 24 ರನ್ ಗಳಿಸಿದರೆ ದೀಪ್ತಿ ಶರ್ಮಾ 21ರನ್ ಗಳಿಸಿದರು. ಸೋಫಿ ಡಿವೈನ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.