ಸ್ಪೇನ್‌ಗೆ 3-0 ಆಘಾತ: ಭಾರತಕ್ಕೆ ವನಿತಾ ಹಾಕಿ ಪ್ರಶಸ್ತಿ
Team Udayavani, Jul 30, 2023, 11:14 PM IST
ಬಾರ್ಸಿಲೋನಾ: ಸ್ಪ್ಯಾನಿಶ್ ಹಾಕಿ ಫೆಡರೇಶನ್‌ನ 100ನೇ ವರ್ಷಾಚರಣೆಯ ಅಂಗವಾಗಿ ನಡೆದ ಹಾಕಿ ಸರಣಿಯಲ್ಲಿ ಭಾರತದ ವನಿತೆಯರು ಆತಿಥೇಯ ಸ್ಪೇನ್‌ಗೆ 3-0 ಗೋಲುಗಳ ಸೋಲು ಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿ ದ್ದಾರೆ. ಈ ಕೂಟದಲ್ಲಿ ಭಾರತದ್ದು ಅಜೇಯ ಅಭಿಯಾನವಾಗಿತ್ತು.
ವಂದನಾ ಕಟಾರಿಯಾ (22ನೇ ನಿಮಿಷ), ಮೋನಿಕಾ (48ನೇ ನಿಮಿಷ) ಮತ್ತು ಉದಿತಾ (58ನೇ ನಿಮಿಷ) ಸ್ಪೇನ್ ಮೇಲೆ ಆಕ್ರಮಣ ನಡೆಸಿ ಗೋಲು ಸಿಡಿಸಿದರು. ಒಂದು ದಿನದ ಹಿಂದಷ್ಟೇ ಭಾರತ ತಂಡ ಇಂಗ್ಲೆಂಡ್‌ಗೂ 3-0 ಗೋಲುಗಳ ಆಘಾತವಿಕ್ಕಿತ್ತು. ಲಾಲ್ರೆನ್ಸಿಯಾಮಿ ಹ್ಯಾಟ್ರಿಕ್ ಸಾಧಿಸಿ ದ್ದರು. ಇದೇ ಸ್ಫೂರ್ತಿಯಲ್ಲಿ ಸ್ಪೇನ್ ವಿರುದ್ಧ ಆಡಲಿಳಿದು ದೊಡ್ಡ ಯಶಸ್ಸು ಸಾಧಿಸಿತು. ಮೊದಲ ಕ್ವಾರ್ಟರ್ ಮುಕ್ತಾಯ ಗೊಳ್ಳುವ ವೇಳೆ ಸ್ಪೇನ್‌ಗೆ ಗೋಲು ಗಳಿಕೆಯ ಅವಕಾಶವಿತ್ತು. ಆದರೆ ನಾಯಕಿಯೂ ಆಗಿರುವ ಗೋಲ್‌ಕೀಪರ್ ಸವಿತಾ ಇದನ್ನು ತಡೆಯುವಲ್ಲಿ ಯಶಸ್ವಿಯಾದರು.
ಇಂಗ್ಲೆಂಡ್ ಮತ್ತು ಸ್ಪೇನ್ ವಿರುದ್ಧದ ಮೊದಲ ಸುತ್ತಿನ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?