ಕೋವಿಡ್ ಅಟ್ಟಹಾಸಕ್ಕೆ ಕಂಗಾಲಾಗಿದೆ ಭಾರತದ ಮಣ್ಣಿನ ಕ್ರೀಡೆ ಕುಸ್ತಿ
Team Udayavani, Apr 11, 2020, 10:10 AM IST
ನವದೆಹಲಿ: ಕೋವಿಡ್-19 ದಾಳಿ ಮಾಡಿದೆ. ಇಡೀ ಜಗತ್ತಿನ ಅರ್ಥವ್ಯವಸ್ಥೆ ಕುಸಿದುಬಿದ್ದಿದೆ. ಇನ್ನು ಕ್ರೀಡೆಯ ಪರಿಸ್ಥಿತಿಯೂ ಅಷ್ಟೇ. ಕ್ರೀಡೆ ಅಂದ ಕೂಡಲೇ ನಮಗೆ ಕ್ರಿಕೆಟ್, ಫುಟ್ ಬಾಲ್, ಟೆನಿಸ್, ಅಥ್ಲೆಟಿಕ್ಸ್ ಮಾತ್ರ ನೆನಪಿಗೆ ಬರುತ್ತದೆ. ಅದರ ಜೊತೆಗೆ ಕುಸ್ತಿಯೂ ಒಂದಿದೆ. ಹೀಗೆ ಹೇಳಿದ ಕೂಡಲೇ ಮ್ಯಾಟ್ ಮೇಲೆ ಆಡುವ ಕುಸ್ತಿಯನ್ನು ನೆನಪಿಸಿಕೊಳ್ಳಬೇಡಿ. ಸಾವಿರಾರು ವರ್ಷಗಳಿಂದ ಭಾರತೀಯರು ಮಣ್ಣಿನಲ್ಲಿ ಆಡುತ್ತಿದ್ದಾರಲ್ಲ ಈ ಕುಸ್ತಿಯ ಚಿತ್ರ ತಂದುಕೊಳ್ಳಿ. ಈ ಕುಸ್ತಿ ಮತ್ತು ಇದರ ಸ್ಪರ್ಧಿಗಳು ವಿಪರೀತ ಸಂಕಷ್ಟಕ್ಕೆ ಸಿಲುಕಿದ್ದಾರೆ!
ಒಂದು ವರ್ಷದ ಅವಧಿಯಲ್ಲಿ ಬರೀ ಮಹಾರಾಷ್ಟ್ರ, ಹಿಮಾಚಲಪ್ರದೇಶವನ್ನೇ ಗಣಿಸಿದರೆ 25 ಕೋಟಿ ರೂ.ಗೂ ಅಧಿಕ ಪ್ರಶಸ್ತಿ ಮೊತ್ತ, ಈ ರಾಜ್ಯಗಳಲ್ಲಿ ನಡೆಯುವ ಕೂಟಗಳ ಮೂಲಕ ಹಂಚಲ್ಪಡುತ್ತದೆ. ಇನ್ನು ಒಟ್ಟಾರೆ ದೇಶದ ಲೆಕ್ಕಾಚಾರ ಬೇರೆಯೇ ಇದೆ. ಈ ವರ್ಷ ಹೆಚ್ಚು ಕಡಿಮೆ 500ಕೂಟಗಳು ರದ್ದಾಗುವುದು ಖಾತ್ರಿ. ಇದನ್ನೇ ನಂಬಿಕೊಂಡಿರುವ ಕುಸ್ತಿಪಟುಗಳು ಏನು ಮಾಡಬೇಕು?
ಆಂಗ್ಲ ದಿನಪತ್ರಿಕೆಯೊಂದು ಈ ವಿಶ್ಲೇಷಣೆಯನ್ನು ನೀಡಿದೆ. ಕೆಲವು ಕುಸ್ತಿಪುಟಗಳು, ವೀಕ್ಷಕ ವಿವರಣೆಕಾರರು ಹಲವು ಮುಖಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಕೆಲವು ಪ್ರಮುಖ ಸಂಗತಿಗಳು ಇವೆ.
25 ಕೋಟಿ ರೂ. ಪ್ರಶಸ್ತಿ ಮೊತ್ತ: ಮಣ್ಣಿನ ಕುಸ್ತಿಯನ್ನು ಹಗುರವಾಗಿ ಭಾವಿಸಲು ಸಾಧ್ಯವೇ ಇಲ್ಲ. ದೇಶಾದ್ಯಂತ ಅದು ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿ ಕೊಂಡಿದೆ. ಹಿಮಾಚಲಪ್ರದೇಶ, ಮಹಾರಾಷ್ಟ್ರ, ಪಂಜಾಬ್‌ಗಳಲ್ಲಂತೂ ಕುಸ್ತಿ ಎಂದಿನಂತೆಯೇ ಜನಪ್ರಿಯ. ಎರಡು ಋತುವಿನಲ್ಲಿ ಇಲ್ಲಿ ಕುಸ್ತಿ ಪಂದ್ಯಗಳು ನಡೆಯಲ್ಪಡುತ್ತವೆ. ಹಿಮಾಚಲ ಪ್ರದೇಶ, ಮಹಾರಾಷ್ಟ್ರ ದಲ್ಲಿ ಮಾರ್ಚ್, ಏಪ್ರಿಲ್, ಮೇ, ಜೂನ್ (ಮಧ್ಯ ಭಾಗ)ದವರೆಗೆ ನಡೆದರೆ, ಜುಲೈನಲ್ಲಿ ವಿಶ್ರಾಂತಿ. ನಂತರ ಪಂಜಾಬ್‌ನಲ್ಲಿ ಶುರುವಾಗುತ್ತದೆ.
ಹಿಮಾಚಲಪ್ರದೇಶ, ಮಹಾರಾಷ್ಟ್ರದಲ್ಲಿ ಒಟ್ಟು 500 ಕುಸ್ತಿಕೂಟಗಳು ನಡೆಯುತ್ತವೆ. ಇಲ್ಲಿ ಒಟ್ಟು ಪ್ರಶಸ್ತಿ ಮೊತ್ತ ಹೆಚ್ಚು ಕಡಿಮೆ 25 ಕೋಟಿ ರೂ. ಇನ್ನು ಟ್ರ್ಯಾಕ್ಟರ್, ಬೈಕ್, ಕಾರಿನಂತಹ ಬಹುಮಾನ ನೀಡುವುದು ಬೇರೆಯೇ ವಿಷಯ. ಪಂಜಾಬ್‌ನಲ್ಲಿ ಅಂದಾಜು 10 ಕೋಟಿ ರೂ. ಮೌಲ್ಯದ ಕುಸ್ತಿ ಪಂದ್ಯಗಳು ನಡೆಯಬಹುದು ನಾವು ಅಂದಾಜಿಸ ಬಹುದು. ಅಲ್ಲಿಗೆ ಕುಸ್ತಿಯ ಮೂಲಕ ಬರುವ ಪ್ರಶಸ್ತಿ ಮೊತ್ತ 35 ಕೋಟಿ ರೂ. ಗೇರುತ್ತದೆ. ಈ ಬಾರಿ ಅಷ್ಟೂ ಕೂಟಗಳು ಇಲ್ಲವಾಗುತ್ತವೆ
ಆರ್ಥಿಕ ಲೆಕ್ಕಾಚಾರ ಹೇಗೆ?
ಹಿಮಾಚಲ, ಮಹಾರಾಷ್ಟ್ರದಲ್ಲಿ ನಡೆಯುವ ಪ್ರತೀ ಕೂಟದಲ್ಲಿ ಒಟ್ಟು ಕನಿಷ್ಠ 2 ಲಕ್ಷ ರೂ., ಗರಿಷ್ಠ 7 ಲಕ್ಷ ರೂ.ವರೆಗೆ ಪ್ರಶಸ್ತಿ ಮೊತ್ತವಿರುತ್ತದೆ. ಇನ್ನು ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲಿ ನಡೆಯುವ ಒಂದೇ ಕೂಟದಲ್ಲಿ 1 ಕೋಟಿ ರೂ. ಪ್ರಶಸ್ತಿ ಮೊತ್ತವಿರುತ್ತದೆ. ಒಟ್ಟು 500 ಕೂಟಗಳ ಮೂಲಕ ನಾವು ಒಟ್ಟು ಪ್ರಶಸ್ತಿ ಮೊತ್ತವನ್ನು ಪಡೆಯಬಹುದು.
ಸಾಮಾನ್ಯ ಕುಸ್ತಿಪಟುಗಳ ಸ್ಥಿತಿ ಶೋಚನೀಯ
ದೊಡ್ಡ, ದೊಡ್ಡ ಶ್ರೀಮಂತ ಕುಸ್ತಿಪಟುಗಳು ಈ ಪರಿಸ್ಥಿತಿಯಲ್ಲಿ ಹೇಗೋ ಬಚಾವಾಗುತ್ತಾರೆ. ಆದರೆ ಸಣ್ಣಪುಟ್ಟ, ಬಡ ಕುಸ್ತಿಪಟುಗಳ ಸ್ಥಿತಿ ಶೋಚನೀಯವಾಗುತ್ತದೆ. ಇವರೆಲ್ಲ ಈ ಕುಸ್ತಿಕೂಟಗಳನ್ನು ನಂಬಿಯೇ ಬದುಕುತ್ತಿರುತ್ತಾರೆ. ಇವರಿಗೆ ಬೇರೆ ದಾರಿಯಿರುವುದಿಲ್ಲ. ಅಲ್ಲದೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳಿಗೆ ಸಿಗುವಂತೆ, ಇವರಿಗೆ ಸರ್ಕಾರದಿಂದ ಆರ್ಥಿಕ ನೆರವೂ ಇರುವುದಿಲ್ಲ. ಕುಸ್ತಿಪಟುಗಳು ಪ್ರತೀ ತಿಂಗಳು ಲಕ್ಷ ರೂ.ವರೆಗೆ ಆಹಾರ ಮತ್ತು ಪೌಷ್ಟಿಕಾಂಶಗಳಿಗೆ ಖರ್ಚು ಮಾಡುತ್ತಾರೆ. ಈಗ ಕೂಟ ರದ್ದಾದರೆ ಅದಕ್ಕೆ ಹಣ್ಣ ಹೊಂದಿಸುವುದು ಹೇಗೆ?
ಒಂದು ಋತುವಲ್ಲಿ 35 ಲಕ್ಷ ರೂ. ಸಂಪಾದನೆ
ಒಬ್ಬ ಕುಸ್ತಿಪಟು ಉದಾಹರಣೆಗೆ ಮಣ್ಣಿನ ಕುಸ್ತಿಯಲ್ಲಿ ಜನಪ್ರಿಯರಾಗಿರುವ ಬನಿಯ ಅಮೀನ್ ಒಂದು ಋತುವಲ್ಲಿ 35ರಿಂದ 40 ಲಕ್ಷ ರೂ. ದುಡಿ ಯುತ್ತಾರೆ. ಅವರು ಪ್ರತೀ ಬಾರಿ ಕುಸ್ತಿ ನಡೆದಾಗ ಬಹುತೇಕ ಕೂಟಗಳಲ್ಲಿ ಹಾಜರಿರುತ್ತಾರೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದರು. ಈಗ ಅದು ಕೈತಪ್ಪುತ್ತದೆ. ಇನ್ನೊಬ್ಬ ಕುಸ್ತಿಪಟು ಜಸ್ಕನ್ವರ್ ಸಿಂಗ್ ಗಿಲ್ ಇವರು ಯಾವಾಗಲೂ ಪ್ರಶಸ್ತಿ ಜಯಿ ಸುವ ಪಟ್ಟಿಯಲ್ಲಿರುತ್ತಾರೆ. ಇವರು ಎಲ್ಲ ಕಡೆ ಹೋಗುವುದಿಲ್ಲ. ಆದರೂ 25 ಲಕ್ಷ ರೂ. ಕನಿಷ್ಠ ದುಡಿಯುತ್ತಾರೆ. ಈ ಬಾರಿ ಇವರ ಸಂಪಾದನೆಗೂ ಮಣ್ಣು ಬಿದ್ದಿದೆ
ಮುಂದೆ ನಡೆಯುತ್ತಾ?
ಮಾರ್ಚ್, ಏಪ್ರಿಲ್, ಮೇ, ಜೂನ್ ಕೂಟಗಳು ರದ್ದಾಗುವುದು ಖಾತ್ರಿ. ಜುಲೈ ನಂತರವಾದರೂ ಕುಸ್ತಿ ಕೂಟಗಳು ನಡೆಯುತ್ತವಾ ಎಂಬ ನಿರೀಕ್ಷೆಯಲ್ಲಿ ಸ್ಪರ್ಧಿಗಳಿದ್ದಾರೆ. ಒಂದು ವೇಳೆ ನಡೆಯದಿದ್ದರೆ ಬಹಳಷ್ಟು ಕುಸ್ತಿಪಟುಗಳು ಬೀದಿಗೆ ಬರು ವುದು ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.