ಅಂದು ಅಂತಾರಾಷ್ಟ್ರೀಯ ಶೂಟರ್, ಇಂದು ಬೀದಿ ವ್ಯಾಪಾರಿ
Team Udayavani, Jun 25, 2021, 7:00 AM IST
ಡೆಹ್ರಾಡೂನ್: ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಬರೋಬ್ಬರಿ 28 ಚಿನ್ನದ ಪದಕ ಗೆದ್ದ ಪ್ಯಾರಾ ಶೂಟರ್ ಒಬ್ಬರು ಜೀವನ ನಿರ್ವಹಣೆಗಾಗಿ ಈಗ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ!
ಹೌದು, ಇದನ್ನು ನಂಬುವುದು ಕೊಂಚ ಕಷ್ಟ. ಆದರೆ ಭಾರತದಲ್ಲಿ ಇಂಥದ್ದೆಲ್ಲ ಸಾಧ್ಯ. ಜಾಗತಿಕ ವೇದಿಕೆಗಳಲ್ಲಿ 28 ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ವನಿತಾ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಉತ್ತರಾಖಂಡದ ಡೆಹ್ರಾಡೂನ್‌ನ ಗಾಂಧಿಪಾರ್ಕ್‌ನ ಪುಟ್ಟ ಸ್ಟಾಲ್ ಒಂದರಲ್ಲಿ ತಾಯಿಯೊಂದಿಗೆ ಚಿಪ್ಸ್ ಮತ್ತು ಬಿಸ್ಕತ್ ಮಾರಾಟ ಮಾಡಿ ಜೀವನ ಸಾಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ!
34 ವರ್ಷದ ದಿಲ್ರಾಜ್ ಕೌರ್ ಭಾರತದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟರ್‌ಗಳಲ್ಲಿ ಒಬ್ಬರು. 2004ರಲ್ಲಿ ಶೂಟಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದ ಕೌರ್, 2015ರ ವರೆಗೆ ಅತ್ಯಂತ ಯಶಸ್ವಿಯಾಗಿ ಕ್ರೀಡಾ ವೃತ್ತಿಜೀವನ ಸಾಗಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ 28 ಚಿನ್ನದ ಜತೆಗೆ 8 ಬೆಳ್ಳಿ ಮತ್ತು 3 ಕಂಚಿನ ಪದಕ ಜಯಿಸಿದ್ದಾರೆ.ಆದರೆ ಈ ಪದಕಗಳಿಂದ ದಿಲ್ರಾಜ್ ಕೌರ್ ಅವರ ಆರ್ಥಿಕ ಸಂಕಷ್ಟ ನೀಗಲಿಲ್ಲ. ಸಾಕಷ್ಟು ಬಾರಿ ಸರಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಹೀಗಾಗಿ ದಿಲ್ರಾಜ್ ಕೌರ್ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್ ವ್ಯಾಪಾರಕ್ಕೆ ಇಳಿಯಬೇಕಾಯಿತು.
ನೆರವಿಗೆ ಬಾರದ ಸರಕಾರ:
“ನಾನು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ದೇಶಕ್ಕಾಗಿ ಅನೇಕ ಪದಕಗಳನ್ನೂ ಗೆದ್ದಿದ್ದೇನೆ. ಆದರೆ ನನಗೆ ಅಗತ್ಯವಿರುವಾಗ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಉತ್ತರಾಖಂಡ ಸರಕಾರದಿಂದ ಯಾವುದೇ ನೆರವು ಸಿಗಲಿಲ್ಲ. ನನ್ನ ಯಶಸ್ಸಿನ ಆಧಾರದ ಮೇಲೆ ಕ್ರೀಡಾ ಕೋಟಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದೇನೆ. ಆದರೆ ಪ್ರತೀ ಬಾರಿಯೂ ಈ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ’ ಎಂದು ನೋವಿನಿಂದ ನುಡಿಯುತ್ತಾರೆ ದಿಲ್ರಾಜ್ ಕೌರ್ .
ಆರ್ಥಿಕ ಸ್ಥಿತಿ ಚಿಂತಾಜನಕ:
“2019ರಲ್ಲಿ ನನ್ನ ತಂದೆ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದರು. ಮನೆಯ ಆಧಾರಸ್ತಂಭವಾಗಿದ್ದ ನನ್ನ ಸಹೋದರನ್ನೂ ಕಳೆದುಕೊಂಡೆ. ಅವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೆವು. ಇದರಿಂದ ಸಾಲ ಬೆಳೆಯಿತೇ ಹೊರತು ಬೇರೇನೂ ಸಾಧ್ಯವಾಗಲಿಲ್ಲ. ಸದ್ಯ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ರಸ್ತೆಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ’ ಎಂದು ಕೌರ್ ತಮ್ಮ ಅಸಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.