ಭಾರತ ಬಾಕ್ಸಿಂಗ್‌ನಲ್ಲಿ ವಿವಾದ: ಒಂದೇ ತಿಂಗಳಿಗೆ ಕೋಚ್ ರಾಜೀನಾಮೆ
Team Udayavani, Sep 15, 2017, 9:22 AM IST
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಮಹಿಳಾ ಬಾಕ್ಸಿಂಗ್ ತಂಡಕ್ಕೆ ನೇಮಕವಾಗಿದ್ದ ವಿದೇಶಿ ಕೋಚ್ ಸ್ಟೀಫನ್ ಕೊಟ್ಟಲೊರ್ಡಾ ಅವಧಿ ಒಂದೇ ತಿಂಗಳಲ್ಲಿ ಮುಗಿದುಹೋಗಿದೆ. ಸಂಬಳ ಸರಿಯಾಗಿ ನೀಡಿಲ್ಲ, ಎಷ್ಟು ಸಂಬಳವೆಂದು ತಿಳಿಸಿಯೂ ಇಲ್ಲ, ವೃತ್ತಿಪರ ವಾತಾವರಣವೇ ಅಲ್ಲಿಲ್ಲ ಎಂದು ಆರೋಪಿಸಿರುವ ಕೊಟ್ಟಲೊರ್ಡಾ ತಮ್ಮ ತವರು ಫ್ರಾನ್ಸ್‌ಗೆ ದಿಢೀರ್ ವಾಪಸಾಗಿದ್ದಾರೆ.
ಕುಟುಂಬ ಸದಸ್ಯರನ್ನು ಯಾವುದೇ ದೇಶಕ್ಕೆ ಕರೆದುಕೊಂಡು ಬಂದಾಗ ಪರಿಸ್ಥಿತಿ ಕಷ್ಟವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಸಂಸ್ಥೆ ನಿರ್ದಿಷ್ಟವಾಗಿ ಏನೂ ಹೇಳದಿದ್ದರೆ ಭವಿಷ್ಯ ಅತಂತ್ರವಾಗುತ್ತದೆ. ಆದ್ದರಿಂದ ಫ್ರಾನ್ಸ್‌ಗೆ ಹಿಂತಿರುಗುವ ನಿರ್ಧಾರ ಕೈಗೊಂಡಿದ್ದೇನೆಂದು ಅವರು ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಭಾರತೀಯ ಬಾಕ್ಸಿಂಗ್ ಒಕ್ಕೂಟದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಅವರಿಗೆ ನೀಡಬೇಕಾಗಿರುವ ಸಂಬಳದಲ್ಲಿ ಶೇ.70ರಷ್ಟು ನೀಡಲಾಗಿದೆ. ಅವರು ಕೇಳಿರುವಂತಹ ಸೌಲಭ್ಯಗಳಲ್ಲಿ ಬಹುಪಾಲು ಪೂರೈಸಿದ್ದೇವೆ. ಅವರು ಪ್ಯಾನ್ ಕಾರ್ಡ್ ನೀಡಲು ವಿಳಂಬ ಮಾಡಿದ್ದಾರೆ.
ಹೀಗಾಗಿ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಅವರ ನಿರ್ಧಾರ ಬದಲಿಸುವಂತೆ ಕೇಳಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.