
ಕೊಲಂಬೋ ಟೆಸ್ಟ್: ಭಾರತ ಇನ್ನಿಂಗ್ಸ್ ಜಯದೊಂದಿಗೆ ಸರಣಿ ವಶ
Team Udayavani, Aug 7, 2017, 6:15 AM IST

ಕೊಲಂಬೊ: ಸಿಂಹಳೀಯರ ಮೇಲೆ ಅವರದೇ ನೆಲದಲ್ಲಿ ಸವಾರಿ ಮಾಡಿದ ಭಾರತ, ಕೊಲಂಬೋದ ದ್ವಿತೀಯ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 53 ರನ್ನುಗಳಿಂದ ಗೆದ್ದಿದೆ. ಇದರೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.
439 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿ ಫಾಲೋಆನ್‌ಗೆ ಗುರಿ ಯಾಗಿದ್ದ ಶ್ರೀಲಂಕಾ, 3ನೇ ದಿನದಾಟದ ಕೊನೆಯಲ್ಲಿ 2 ವಿಕೆಟಿಗೆ 209 ರನ್ ಗಳಿಸಿತ್ತು. 4ನೇ ದಿನವಾದ ರವಿವಾರ ಚಹಾ ವಿರಾಮಕ್ಕೂ ಸ್ವಲ್ಪ ಮುನ್ನ 386 ರನ್ನಿಗೆ ಆಲೌಟ್ ಆಯಿತು. ಇದು ಪ್ರಸಕ್ತ ಸರಣಿಯಲ್ಲಿ ಗಳಿಸಿದ ಅತ್ಯಧಿಕ ರನ್ ಎಂಬುದಷ್ಟೇ ಲಂಕಾ ಪಾಲಿನ ಸಮಾಧಾನ ಸಂಗತಿ.
ಅಂದಹಾಗೆ ಇದು ಶ್ರೀಲಂಕಾದಲ್ಲಿ ಭಾರತ ಸಾಧಿಸಿದ ಪ್ರಪ್ರಥಮ ಇನ್ನಿಂಗ್ಸ್ ಜಯವೆಂಬುದು ಉಲ್ಲೇಖನೀಯ. ದ್ವಿತೀಯ ಸರದಿಯಲ್ಲಿ 5 ವಿಕೆಟ್ ಸಹಿತ ಒಟ್ಟು 7 ವಿಕೆಟ್ ಜತೆಗೆ 70 ರನ್ ಬಾರಿಸಿದ ಜಡೇಜ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 304 ರನ್ನುಗಳಿಂದ ಗೆದ್ದಿತ್ತು. ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆ. 12ರಿಂದ ಪಲ್ಲೆಕಿಲೆಯಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಸರಣಿ ಯನ್ನು ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಳ್ಳುವ ಉತ್ತಮ ಅವಕಾಶವೊಂದು ಕೊಹ್ಲಿ ಪಡೆಯ ಮುಂದಿದೆ. ಭಾರತ ಈವರೆಗೆ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ಹೊರತುಪಡಿಸಿ ಉಳಿದ ಯಾವುದೇ ವಿದೇಶಿ ಸರಣಿ ವೇಳೆ ಕ್ಲೀನ್‌ಸಿÌàಪ್ ಸಾಧನೆ ಮಾಡಿಲ್ಲ.
ಕರುಣರತ್ನೆ ಶತಕ
ಪಂದ್ಯದ 3ನೇ ದಿನ ಕುಸಲ್ ಮೆಂಡಿಸ್ ಅವರ ಶತಕಕ್ಕೆ ಸಾಕ್ಷಿಯಾಗಿದ್ದ ಶ್ರೀಲಂಕಾ ಇನ್ನಿಂಗ್ಸ್, 4ನೇ ದಿನ ಆರಂಭಕಾರ ದಿಮುತ್ ಕರುಣರತ್ನೆ ಅವರ ಸೆಂಚುರಿಯೊಂದಿಗೆ ಮುಂದುವರಿಯತೊಡಗಿತು. 92 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕರುಣರತ್ನೆ 141ರ ತನಕ ಬೆಳೆದರು. ಇದು ಭಾರತದೆದುರು ಅವರು ಹೊಡೆದ ಮೊದಲ ಶತಕ. 307 ಎಸೆತ ಎದುರಿಸಿದ ಕರುಣರತ್ನೆ 16 ಬೌಂಡರಿ ಬಾರಿಸಿದರು. ಆದರೆ ಇವರಿಬ್ಬರ ಶತಕದ ಹೊರತಾಗಿಯೂ ಲಂಕೆಗೆ ಇನ್ನಿಂಗ್ಸ್ ಸೋಲಿನ ಕಂಟಕದಿಂದ ಪಾರಾ ಗಲು ಸಾಧ್ಯವಾಗಲಿಲ್ಲ.
ನೈಟ್ ವಾಚ್‌ಮನ್ ಮಲಿಂದ ಪುಷ್ಪ ಕುಮಾರ (16)ಅಶ್ವಿನ್‌ಗೆ ಬೌಲ್ಡ್ ಆಗಿ ಮೊದಲಿಗರಾಗಿ ನಿರ್ಗಮಿಸಿದರು. ಆಗ ಶ್ರೀಲಂಕಾ 238 ರನ್ ಮಾಡಿತ್ತು. ಜಡೇಜ ಎಸೆದ ಮುಂದಿನ ಓವರಿನಲ್ಲೇ ನಾಯಕ ದಿನೇಶ್ ಚಂಡಿಮಾಲ್ ವಿಕೆಟ್ ಬಿತ್ತು. ಕಪ್ತಾನನ ಗಳಿಕೆ ಕೇವಲ 2 ರನ್.
ಕರುಣರತ್ನೆ-ಮ್ಯಾಥ್ಯೂಸ್ 5ನೇ ವಿಕೆಟಿಗೆ 69 ರನ್ ಒಟ್ಟುಗೂಡಿಸಿ ಸಣ್ಣದೊಂದು ಹೋರಾಟವನ್ನು ಜಾರಿಯಲ್ಲಿರಿಸಿದರು. ಆದರೆ ಇವರಿಬ್ಬರನ್ನೂ ಜಡೇಜ ಸತತ ಓವರ್‌ಗಳಲ್ಲಿ, ಐದೇ ರನ್ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದರು. 315ಕ್ಕೆ ಲಂಕಾ 6 ವಿಕೆಟ್ ಉರುಳಿಸಿಕೊಂಡಿತು. ಭಾರತದ ಗೆಲುವಿನ ಅಂತರವಷ್ಟೇ ಬಾಕಿ ಇತ್ತು. ಕೊನೆಯಲ್ಲಿ ನಿರೋಷನ್ ಡಿಕ್ವೆಲ್ಲ (31), ಧನಂಜಯ ಡಿ’ಸಿಲ್ವ ಮತ್ತು ರಂಗನ ಹೆರಾತ್ (ತಲಾ 17) ಮಾತ್ರ ಒಂದಿಷ್ಟು ರನ್ ಮಾಡಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಂಕಾ ಒಟ್ಟು 116.5 ಓವರ್‌ಗಳನ್ನು ನಿಭಾಯಿಸಿತು.
ರವೀಂದ್ರ ಜಡೇಜ ಹೊರತುಪಡಿಸಿದರೆ ಹಾರ್ದಿಕ್ ಪಾಂಡ್ಯ (31ಕ್ಕೆ 2), ಆರ್. ಅಶ್ವಿನ್ (132ಕ್ಕೆ 2) ಹೆಚ್ಚಿನ ಯಶಸ್ಸು ಸಾಧಿಸಿದರು. ಯಾದವ್ ಒಂದು ವಿಕೆಟ್ ಕಿತ್ತರು.
ಸತತ 8ನೇ ಸರಣಿ ಜಯ
ಇದು ಭಾರತ ಒಲಿಸಿಕೊಂಡ ಸತತ 8ನೇ ಸರಣಿ ಗೆಲುವು. 2015ರ ಶ್ರೀಲಂಕಾ ಪ್ರವಾಸದಿಂದಲೇ ಟೀಮ್ ಇಂಡಿಯಾದ ಈ ಅಭಿಯಾನ ಮೊದಲ್ಗೊಂಡಿತ್ತು. ಅಂದು ಕೊಲಂಬೋದಲ್ಲಿ (ಪಿಎಸ್‌ಎಸ್) 5 ವಿಕೆಟ್ ಗೆಲುವು ಸಾಧಿಸಿ ಓಟ ಬೆಳೆಸಿದ ಭಾರತ, 4 ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದಿತ್ತು. ಆಗಲೂ ವಿರಾಟ್ ಕೊಹ್ಲಿ ಭಾರತದ ನಾಯಕರಾಗಿದ್ದರು. ಇದರೊಂದಿಗೆ ಶ್ರೀಲಂಕಾದಲ್ಲಿ 2 ಸರಣಿ ಗೆಲುವು ಒಲಿಸಿಕೊಂಡ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ ಕೊಹ್ಲಿ ಅವರದಾಯಿತು.
ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
9 ವಿಕೆಟಿಗೆ ಡಿಕ್ಲೇರ್ 622
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 183
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಸಿ ರಹಾನೆ ಬಿ ಜಡೇಜ 141
ಉಪುಲ್ ತರಂಗ ಬಿ ಯಾದವ್ 2
ಕುಸಲ್ ಮೆಂಡಿಸ್ ಸಿ ಸಾಹಾ ಬಿ ಪಾಂಡ್ಯ 110
ಮಲಿಂದ ಪುಷ್ಪಕುಮಾರ ಬಿ ಅಶ್ವಿನ್ 16
ದಿನೇಶ್ ಚಂಡಿಮಾಲ್ ಸಿ ರಹಾನೆ ಬಿ ಜಡೇಜ 2
ಏಂಜೆಲೊ ಮ್ಯಾಥ್ಯೂಸ್ ಸಿ ಸಾಹಾ ಬಿ ಜಡೇಜ 36
ನಿರೋಷನ್ ಡಿಕ್ವೆಲ್ಲ ಸಿ ರಹಾನೆ ಬಿ ಪಾಂಡ್ಯ 31
ದಿಲುÅವಾನ್ ಪೆರೆರ ಸ್ಟಂಪ್ಡ್ ಸಾಹಾ ಬಿ ಜಡೇಜ 4
ಧನಂಜಯ ಡಿ’ಸಿಲ್ವ ಸಿ ರಹಾನೆ ಬಿ ಜಡೇಜ 17
ರಂಗನ ಹೆರಾತ್ ಔಟಾಗದೆ 17
ನುವಾನ್ ಪ್ರದೀಪ್ ಸಿ ಧವನ್ ಬಿ ಅಶ್ವಿನ್ 1
ಇತರ 9
ಒಟ್ಟು (ಆಲೌಟ್) 386
ವಿಕೆಟ್ ಪತನ: 1-7, 2-198, 3-238, 4-241, 5-310, 6-315, 7-321, 8-343, 9-384.
ಬೌಲಿಂಗ್:
ಉಮೇಶ್ ಯಾದವ್ 13-2-39-1
ಆರ್. ಅಶ್ವಿನ್ 37.5-7-132-2
ಮೊಹಮ್ಮದ್ ಶಮಿ 12-3-27-0
ರವೀಂದ್ರ ಜಡೇಜ 39-5-152-5
ಹಾರ್ದಿಕ್ ಪಾಂಡ್ಯ 15-2-31-2
ಪಂದ್ಯಶ್ರೇಷ್ಠ: ರವೀಂದ್ರ ಜಡೇಜ
3ನೇ ಟೆಸ್ಟ್: ಪಲ್ಲೆಕಿಲೆ (ಆ. 12-16)
ಎಕ್ಸ್‌ಟ್ರಾ ಇನ್ನಿಂಗ್ಸ್
– ಭಾರತ ಸತತ 8ನೇ ಟೆಸ್ಟ್ ಸರಣಿ ಗೆಲುವು ದಾಖಲಿಸಿತು. ಕಾಕತಾಳೀಯವೆಂದರೆ, ಈ ಗೆಲುವು 2015ರ ಶ್ರೀಲಂಕಾ ಪ್ರವಾಸದಿಂದಲೇ ಮೊದಲ್ಗೊಂಡಿತ್ತು. ಸತತ ಸರಣಿ ಗೆಲುವಿನ ದಾಖಲೆ ಆಸ್ಟ್ರೇಲಿಯದ ಹೆಸರಲ್ಲಿದೆ. ಅದು 2005-08ರ ಅವಧಿಯಲ್ಲಿ 9 ಸರಣಿ ಗೆಲುವು ದಾಖಲಿಸಿತ್ತು. ಇಂಗ್ಲೆಂಡ್ 1884-1892ರ ಅವಧಿ ಯಲ್ಲಿ 8 ಸರಣಿಗಳನ್ನು ಗೆದ್ದಿತ್ತು.
– ಭಾರತ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್ ಗೆಲುವು ಸಾಧಿಸಿತು. ಇದು ಲಂಕೆ ಯಲ್ಲಿ ಭಾರತ ಸಾಧಿಸಿದ 8ನೇ ಟೆಸ್ಟ್ ಗೆಲುವು.
– ಭಾರತ ಕಳೆದ 9 ಟೆಸ್ಟ್‌ಗಳಲ್ಲಿ 3ನೇ ಸಲ ಇನ್ನಿಂಗ್ಸ್ ಗೆಲುವು ದಾಖಲಿಸಿತು.
– ಶ್ರೀಲಂಕಾದಲ್ಲಿ ಭಾರತ 8 ಟೆಸ್ಟ್ ಗೆಲುವು ದಾಖಲಿಸಿತು. ಇದು ಸತತವಾಗಿ 4ನೆಯದು.
– ಶ್ರೀಲಂಕಾ 2000ದ ಬಳಿಕ ತವರಿನಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್ ಸೋಲನುಭವಿಸಿತು. ಅಂದು ಗಾಲೆಯಲ್ಲಿ ಇನ್ನಿಂಗ್ಸ್ ಅಂತರದಲ್ಲಿ ಪಾಕಿಸ್ಥಾನಕ್ಕೆ ಶರಣಾಗಿತ್ತು. ಒಟ್ಟಾರೆಯಾಗಿ ಇದು ತವರಿನಲ್ಲಿ ಲಂಕೆಯ 7ನೇ ಇನ್ನಿಂಗ್ಸ್ ಸೋಲಾಗಿದೆ.
– ಟೆಸ್ಟ್ ಇತಿಹಾಸದಲ್ಲಿ 3ನೇ ಸಲ ಒಂದೇ ತಂಡದ ಇಬ್ಬರು ಆಟಗಾರರು ಅರ್ಧ ಶತಕ ಹಾಗೂ 5 ವಿಕೆಟ್ ಸಾಧನೆಗೈದರು (ಅಶ್ವಿನ್, ಜಡೇಜ). ಇದಕ್ಕೂ ಮುನ್ನ ಇಂಗ್ಲೆಂಡ್ ಎದು ರಿನ 1895ರ ಆಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಜಾರ್ಜ್ ಗಿಫೆನ್, ಆಲ್ಬರ್ಟ್ ಟ್ರಾಟ್; ಭಾರತದೆದುರಿನ 2011ರ ಟ್ರೆಂಟ್‌ಬ್ರಿಜ್ ಪಂದ್ಯದಲ್ಲಿ ಇಂಗ್ಲೆಂಡಿನ ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್ ಈ ಸಾಧನೆ ಮಾಡಿದ್ದರು.
– ಲಂಕಾ ಫಾಲೋಆನ್ ಪಡೆದ ಬಳಿಕ 3ನೇ ಅತ್ಯಧಿಕ ಮೊತ್ತ ಪೇರಿಸಿತು (386). ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಚೆಸ್ಟರ್ ಲಿ ಸ್ಟ್ರೀಟ್‌ನಲ್ಲಿ 475 ರನ್ ಬಾರಿಸಿದ್ದು ಸರ್ವಾಧಿಕ ಮೊತ್ತ.
– ದಿಮುತ್ ಕರುಣರತ್ನೆ 6ನೇ ಶತಕ ಹೊಡೆ ದರು. ಇದು ಭಾರತದೆದುರು ಅವರು ಬಾರಿಸಿದ ಮೊದಲ ಶತಕ.
– ಫಾಲೋಆನ್ ಪಡೆದ ಬಳಿಕ ಶ್ರೀಲಂಕಾ ಸರದಿಯಲ್ಲಿ ಮೊದಲ ಬಾರಿಗೆ 2 ಶತಕ ದಾಖಲಾಯಿತು. ಟೆಸ್ಟ್ ಇತಿಹಾಸದಲ್ಲಿ 14ನೇ ಸಲ ಇಂಥ ದೃಷ್ಟಾಂತ ಕಂಡುಬಂತು. ಕೊನೆಯ ಸಲ ಇದಕ್ಕೆ ಸಾಕ್ಷಿಯಾದವರು ಗೌತಮ್ ಗಂಭೀರ್ ಮತ್ತು ವಿವಿಎಸ್ ಲಕ್ಷ್ಮಣ್. ಅದು ನ್ಯೂಜಿಲ್ಯಾಂಡ್ ಎದುರಿನ 2009ರ ನೇಪಿಯರ್ ಟೆಸ್ಟ್ ಆಗಿತ್ತು.
– ರವೀಂದ್ರ ಜಡೇಜ ಕಳೆದೊಂದು ವರ್ಷದ ಅವಧಿಯಲ್ಲಿ ಅತ್ಯಧಿಕ 4 ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ (3). ಉಳಿದಂತೆ 8 ಮಂದಿ 2 ಸಲ ಪಂದ್ಯಶ್ರೇಷ್ಠರಾಗಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ

Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.