ಐದು ವರ್ಷದಲ್ಲಿ ಭಾರತಕ್ಕೆ ಗರಿಷ್ಠ ಪಂದ್ಯ!
Team Udayavani, Jun 23, 2018, 6:00 AM IST
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಒಟ್ಟು 203 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದ್ದು, ಈ ಮೂಲಕ ಅತಿ ಹೆಚ್ಚು ಪಂದ್ಯಗಳಲ್ಲಿ ತೊಡಗಿಸಿಕೊಳ್ಳಲಿರುವ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಿಳಿಸಿದೆ.
2018ರಿಂದ 2023ರ ಅವಧಿಯಲ್ಲಿ 51 ಟೆಸ್ಟ್, 83 ಏಕದಿನ ಹಾಗೂ 69 ಟಿ20 ಪಂದ್ಯ ಆಡಲಿದೆ ಎಂದು ಮಂಡಳಿ ತಿಳಿಸಿದೆ. ಇದೇ ಅವಧಿಯಲ್ಲಿ ಒಟ್ಟು 186 ಪಂದ್ಯಗಳನ್ನಾಡಲಿರುವ ವಿಂಡೀಸ್ ದ್ವಿತೀಯ ಸ್ಥಾನದಲ್ಲಿದ್ದರೆ, 175 ಪಂದ್ಯಗಳನ್ನಾಡಲಿರುವ ಇಂಗ್ಲೆಂಡ್ 3ನೇ ಸ್ಥಾನದಲ್ಲಿರಲಿದೆ. ಟೆಸ್ಟ್, ಏಕದಿನ ಹಾಗೂ ಟಿ20ಐ ಪಂದ್ಯಗಳ ಲೆಕ್ಕಾಚಾರ ಪ್ರತ್ಯೇಕವಾಗಿ ಪರಿಗಣಿಸುವುದಾದರೆ, 2018-19ರಿಂದ 2022-23ರವ ರೆಗೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡುವ ಹಿರಿಮೆ ಇಂಗ್ಲೆಂಡ್ ಪಾಲಾಗಲಿದೆ. ಈ ಅವಧಿಯಲ್ಲಿ ಆಂಗ್ಲರ ಪಡೆ 59 ಪಂದ್ಯಗಳನ್ನಾಡಿದರೆ, ಭಾರತ 51 ಪಂದ್ಯಗಳ ಮೂಲಕ 2ನೇ ಸ್ಥಾನ ಹಾಗೂ ಆಸ್ಟ್ರೇ ಲಿಯಾ ತಂಡ 47 ಪಂದ್ಯಗಳನ್ನಾಡುವ ಮೂಲಕ 3ನೇ ಸ್ಥಾನ ಗಳಿಸಿದೆ. ಆದರೆ, ಏಕ ದಿನ ಮತ್ತು ಟಿ20ಐ ಮಾದರಿಯಲ್ಲಿ ಭಾರತ (ಕ್ರಮವಾಗಿ 83 ಮತ್ತು 69) ಅಗ್ರಸ್ಥಾನದಲ್ಲಿದ್ದು ಆನಂತರದ ಸ್ಥಾನದಲ್ಲಿ ವಿಂಡೀಸ್ (ಕ್ರಮವಾಗಿ 75 ಮತ್ತು 68) ಇದೆ.
ನೂತನ ವೇತನ ಪದ್ಧತಿಗೆ ಸರ್ವಾನುಮತ ಸಮ್ಮತಿ
ಬಿಸಿಸಿಐನ ನೂತನ ವೇತನ ಪದ್ಧತಿಗೆ ಅವಿರೋಧ ಸಮ್ಮತಿ ಲಭಿಸಿದೆ. ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ಮಾ.7ರಂದೇ 4 ಗುಂಪಿನನೂತನ ವೇತನ ಪದ್ಧತಿಯನ್ನು ಜಾರಿ ಮಾಡಿದ್ದರು. ಆ ದರೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ತಮ್ಮನ್ನು ಕೇಳದೇ ಈ ಕ್ರಮ ಜಾರಿ ಮಾಡಲಾಗಿದೆ. ಆದ್ದರಿಂದ ಸಹಿ ಹಾಕುವುದಿಲ್ಲ ಎಂದಿದ್ದರು. ಸುದೀರ್ಘ ಕಾಲ ಈ ಜಟಾಪಟಿ ನಡೆದು ಕಡೆಗೂ ಜೂ.22ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ನೂತನ ಪದ್ಧತಿಯಲ್ಲಿ ಎ ಪ್ಲಸ್ ಎಂಬ ಗುಂಪು ಇದೆ. ಇದರಡಿ ಬರುವ ಆಟಗಾರರಿಗೆ 7 ಕೋಟಿ ರೂ. ಸಂಭಾವನೆ ಇರಲಿದೆ. ಉಳಿದಂತೆ ಎ,ಬಿ,ಸಿ ಗುಂಪು ಇದ್ದು ಇದರಡಿ ಬರುವ ಆಟಗಾರರಿಗೆ ಕ್ರಮವಾಗಿ ತಲಾ 5, 3,1 ಕೋಟಿ ರೂ. ಸಿಗಲಿದೆ.
51 ಭಾರತ ಆಡಲಿರುವ ಟೆಸ್ಟ್ ಪಂದ್ಯಗಳು
86 ಭಾರತ ತಂಡದ ಏಕ ದಿನ ಹಣಾಹಣಿ
69 ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.