ಬಾಜ್’ಬಾಲ್ ಗೆ ಭಾರತದ ಹೊಸ ಅಸ್ತ್ರ: ವೇಗದ ಆಟದಿಂದ ದಾಖಲೆ ಬರೆದ ಟೀಂ ಇಂಡಿಯಾ
Team Udayavani, Jul 24, 2023, 1:42 PM IST
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಟೀಂ ಇಂಡಿಯಾ ಹೊಸ ಬ್ಯಾಟಿಂಗ್ ದಾಖಲೆ ಬರೆದಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ವೇಗವಾಗಿ ಬ್ಯಾಟಿಂಗ್ ಬೀಸಿದ ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ನೂತನ ಸಾಧನೆ ಮಾಡಿದೆ.
ಕನಿಷ್ಠ 20 ಓವರ್ ಗಳ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ತಂಡದ ರನ್-ರೇಟ್ ಹೊಂದಿರುವ ತಂಡ ಎಂಬ ದಾಖಲೆಗೆ ಟೀಂ ಇಂಡಿಯಾ ಪಾತ್ರವಾಯಿತು.
ಆಕ್ರಮಣಕಾರಿ ಆಟದಿಂದ ಹೊಸ ‘ಬಾಜ್‌ಬಾಲ್’ ಕ್ರಿಕೆಟ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದ್ದರೆ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ‘ದ್ರಾವ್‌ಬಾಲ್’ ನ ಮೊದಲ ಪ್ರದರ್ಶನ ಭಾರತೀಯ ಕ್ರಿಕೆಟ್ ಗೆ ಹೊಸ ಸಾಧ್ಯತೆಗಳನ್ನು ತೆರೆದಿದೆ.
ಎರಡನೇ ಇನ್ನಿಂಗ್ಸ್ ಆಟವನ್ನು ಟಿ20 ಮಾದರಿಯಲ್ಲಿ ಆಡಲಾರಂಭಿಸಿದ ಟೀಂ ಇಂಡಿಯಾ ಕೇವಲ 24 ಓವರ್ ಗಳಲ್ಲಿ 181 ರನ್ ಕಲೆಹಾಕಿ ಡಿಕ್ಲೇರ್ ಮಾಡಿತು. ಭಾರತವು 7.54 ರನ್ ರೇಟ್ ನಲ್ಲಿ ರನ್ ಗಳನ್ನು ಗಳಿಸಿತು. ಕನಿಷ್ಠ 20 ಓವರ್ ಗಳ ಇನ್ನಿಂಗ್ಸ್ ನಲ್ಲಿ ತಂಡವೊಂದು ಟೆಸ್ಟ್ ನಲ್ಲಿ ಗರಿಷ್ಠ ಮೊತ್ತವಾಗಿದೆ.
ಇದನ್ನೂ ಓದಿ:Delhi: ನಿಯಮ ಉಲ್ಲಂಘಿಸಿದ ವಿದೇಶಿ ಪ್ರಜೆಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್ ಸಸ್ಪೆಂಡ್
ಈ ವೇಳೆ ಭಾರತವು 2017 ರಲ್ಲಿ ಸಿಡ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 32 ಓವರ್ ಗಳಲ್ಲಿ 241/2 ಗಳಿಸಿದ್ದ ಆಸ್ಟ್ರೇಲಿಯಾದ ದಾಖಲೆಯನ್ನು ಮುರಿದರು. ಆಸೀಸ್ ಈ ರನ್ ಗಳನ್ನು 7.53 ರನ್ ರೇಟ್‌ನಲ್ಲಿ ಗಳಿಸಿತ್ತು.
ಗಮನಾರ್ಹವೆಂದರೆ, ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ ಶತಕ ಗಳಿಸಿತು. ಮೊದಲ ವಿಕೆಟ್ ಗೆ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕೇವಲ 71 ಎಸೆತಗಳಲ್ಲಿ 98 ರನ್ ಗಳಿಸಿದರು. ರೋಹಿತ್ ಔಟಾದ ನಂತರ ಭಾರತ ಕೇವಲ 12.2 ಓವರ್‌ಗಳಲ್ಲಿ 100 ರನ್‌ಗಳ ಗಡಿಯನ್ನು ತಲುಪಿತು, ಅಂದರೆ ಒಟ್ಟು 74 ಎಸೆತಗಳಲ್ಲಿ.
ಯಶಸ್ವಿ ಜೈಸ್ವಾಲ್ 38 ರನ್, ನಾಯಕ ರೋಹಿತ್ 57 ರನ್ ಮಾಡಿದರು. ಶುಭ್ಮನ್ ಗಿಲ್ 29 ರನ್ ಮತ್ತು ಇಶಾನ್ ಕಿಶನ್ ಕೇವಲ 34 ಎಸೆತದಲ್ಲಿ ಅಜೇಯ 52 ರನ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.